ಮೂಡುಬಿದಿರೆ: ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೀರ್ಕೆರೆ, ಶ್ರೀ ವಾಣಿ ವಿಲಾಸ ಅನುದಾನಿತ ಶಾಲೆ ಅಶ್ವತ್ಥಪುರ ಹಾಗೂ ಸರಕಾರಿ ಪ್ರಾಥಮಿಕ ಶಾಲೆ ಮಂಗೇಬೆಟ್ಟು ಇಲ್ಲಿನ ಶಾಲಾ ಮಕ್ಕಳಿಗೆ ವಿದ್ಯಾಭಿಮಾನಿಗಳಿಂದ ಸುಮಾರು ರೂ 48350 ಮೌಲ್ಯದ ಉಚಿತ ಬರೆಯುವ ಪುಸ್ತಕ ವಿತರಣೆ ಗುರುವಾರ ನಡೆಯಿತು.
ಜಿ.ಪಂ.ಮಾಜಿ ಸದಸ್ಯ ಜನಾರ್ದನ ಗೌಡ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಮಕ್ಕಳು ತಮ್ಮ ಭಾವನೆಗಳನ್ನು ಹಂಚಿಕೊಂಡು ಒಗ್ಗಟ್ಟಗಿರುವುದು ಶಾಲೆಗಳಲ್ಲಿ. ಆದ್ದರಿಂದ ಶಾಲೆಗಳು ಮನಸ್ಸನ್ನು ಸೂರೆಗೊಳ್ಳುವಂತಿರಬೇಕು. ಅಂತಹ ಸನ್ನಿವೇಶವನ್ನು ಈ ಶಾಲೆಯು ಮಾಡಿದೆ ಎಂದ ಅವರು ಬ್ಯಾಂಕ್ ಅಕೌಂಟಿನಲ್ಲಿ ಎಷ್ಟು ದುಡ್ಡಿದೆ ಎಂಬುದು ಮುಖ್ಯವಲ್ಲ ಬದಲಾಗಿ ಹೃದಯದ ಬ್ಯಾಲೆನ್ಸ್ ಎಷ್ಟಿದೆ ಎಂಬುದು ಮುಖ್ಯ ಆದ್ದರಿಂದ ಶಾಲೆಗಳನ್ನು ಉಳಿಸಿ ಬೆಳೆಸುವುದು ಗ್ರಾಮಸ್ಥರ ಕರ್ತವ್ಯ ಎಂದರು.
ತೆಂಕಮಿಜಾರು ಗ್ರಾ.ಪಂ.ನ ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಗ್ರಾ.ಪಂ.ಸದಸ್ಯ ರಾಮಚಂದ್ರ ಕೆ., ಶಾಲಿನಿ, ಲಯನ್ಸ್ ಕ್ಲಬ್ ಮುಚ್ಚೂರು-ನೀರುಡೆ ಇದರ ಅಧ್ಯಕ್ಷ ರೋಶನ್ ಡಿ'ಸೋಜ, "ಕ್ರೀಡಾರತ್ನ" ಪುರಸ್ಕೃತ ಕಂಬಳ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಅಧೀಕ್ಷಕ ಗುರುಪ್ರಸಾದ್ ಸಂತೆಕಟ್ಟೆ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಗೋಪಾಲ ಟಿ., ಸಂತೆಕಟ್ಟೆ, ಸಾಂಸ್ಕೃತಿಕ ಕಲಾ ವೇದಿಕೆಯ ಅಧ್ಯಕ್ಷ ಅಶ್ವತ್ಥಾಮ ವಿ.ಎಸ್., ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೃಷ್ಣ, ಮಾಜಿ ಅಧ್ಯಕ್ಷರುಗಳಾದ ಗಿರೀಶ್ ಗೌಡ,ಗೋಪಾಲ ಗೌಡ ಅತಿಥಿಗಳಾಗಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಯಮುನಾ ಸ್ವಾಗತಿಸಿದರು. ಶಿಕ್ಷಕ ವೀರೇಶ್ ಕಾರ್ಯಕ್ರಮ ನಿರೂಪಿಸಿದರು. ಶೈಲಜಾ ಭಂಡಾರಿ ವಂದಿಸಿದರು.
_-------------------
ಶ್ರೀ ವಾಣಿ ವಿಲಾಸ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ನಡೆದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯ ರಾಮಚಂದ್ರ ಕೆ., ಶಾಲಿನಿ, ಲಯನ್ಸ್ ಕ್ಲಬ್ ಮುಚ್ಚೂರು-ನೀರುಡೆ ಇದರ ಅಧ್ಯಕ್ಷ ರೋಶನ್ ಡಿ'ಸೋಜ, "ಕ್ರೀಡಾರತ್ನ" ಪುರಸ್ಕೃತ ಕಂಬಳ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಅಧೀಕ್ಷಕ ಗುರುಪ್ರಸಾದ್ ಸಂತೆಕಟ್ಟೆ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಗೋಪಾಲ ಟಿ., ಸಂತೆಕಟ್ಟೆ, ಸಾಂಸ್ಕೃತಿಕ ಕಲಾ ವೇದಿಕೆಯ ಅಧ್ಯಕ್ಷ ಅಶ್ವತ್ಥಾಮ ವಿ.ಎಸ್., ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಭಾಕರ ಭಟ್, ಎಸ್ .ಡಿ.ಎಂ.ಸಿ ಅಧ್ಯಕ್ಷ ಪದ್ಮನಾಭ ಗೌಡ, ನೀರ್ಕೆರೆ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೃಷ್ಣ, ಶಾಲಾ ಮುಖ್ಯ ಶಿಕ್ಷಕಿ ಗೀತಾ ಹಾಗೂ ಶಿಕ್ಷಕಿ ಸುಕನ್ಯಾ ಜಗದೀಶ್ ಉಪಸ್ಥಿತರಿದ್ದರು.
0 Comments