ಜೂ. 24 ರಂದು ಶ್ರೀ ನಂದಿಕೇಶ್ವರ ಸೇವಾ ಟ್ರಸ್ಟ್ ಕಾರ್ಯಾರಂಭ
ಮೂಡುಬಿದಿರೆ : ಇತ್ತೀಚೆಗೆ ನೋಂದಾಯಿಸಲ್ಪಿಟ್ಟಿರುವ ಶ್ರೀ ನಂದಿಕೇಶ್ವರ ಸೇವಾ ಟ್ರಸ್ಟ್ ನ ಉದ್ಘಾಟನೆ ಮತ್ತು ಸೇವಾ ಚಟುವಟಿಕೆಗಳಿಗೆ ಚಾಲನೆ ಜೂ.24 ರಂದು ಸಮಾಜ ಮಂದಿರದಲ್ಲಿ ಸಂಜೆ 4 ಗಂಟೆಗೆ ದೊರಕಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ, ಲೇಖಕ, ನಿವೃತ್ತ ಶಿಕ್ಷಕ ಶಿಕಾರಿಪುರ ಈಶ್ವರ ಭಟ್ ಬುಧವಾರ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಮೂಡುಬಿದಿರೆ ಮಹಾವೀರ ಕಾಲೇಜಿನ ಪ್ರಾಂಶುಪಾಲ ಡಾ|| ರಾಧಾಕೃಷ್ಣ ಅವರು ಟ್ರಸ್ಟಿನ ಸೇವಾಕಾರ್ಯಗಳಗ ಚಾಲನೆ ನೀಡಲಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್ 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲಾ ಹಂತದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ನಗದು ಬಹುಮಾನದೊಂದಿಗೆ ಗೌರವಿಸಲಿದ್ದಾರೆ.
ಟ್ರಸ್ಟಿನಲ್ಲಿ ಪ್ರಸ್ತುತ ಆರು ಜನ ಧರ್ಮದರ್ಶಿಗಳಿದ್ದಾರೆ ಮುಂಬರುವ ದಿನಗಳಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಹಿರಿಯರನ್ನು ಗುರುತಿಸಿ ಸನ್ಮಾನಿಸಲಾಗುವುದು ಮತ್ತು ಉದಯೋನ್ಮುಖ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಗುವುದು ಹಾಗೂ ಸಮಾಜೋಪಯೋಗಿ ಸೇವಾ ಕಾರ್ಯಗಳಲ್ಲಿ ಟ್ರಸ್ಟ್, ತನ್ನನ್ನು ತೊಡಗಿಸಿಕೊಳ್ಳಲಿದೆ ಎಂದು ಶಿಕಾರಿಪುರ ಈಶ್ವರಭಟ್ ತಿಳಿಸಿದರು.
ಶಿಕ್ಷಕ ಶಂಕರನಾರಾಯಣ ರಾವ್ ಈ ಸಂದರ್ಭದಲ್ಲಿದ್ದರು.
0 Comments