ಜುಲೈ 14ರಿಂದ 16ರವರೆಗೆ ಬೃಹತ್ ಹಲಸು-ಹಣ್ಣುಗಳ ಮೇಳ
ಮೂಡುಬಿದಿರೆ: ವಿದ್ಯಾಗಿರಿಯ ಕೃಷಿಸಿರಿ ಆವರಣದಲ್ಲಿ ವೈವಿದ್ಯಮಯ ಹಲಸು-ಹಣ್ಣುಗಳ ಬೃಹತ್ ಮೇಳ ಜುಲೈ 14ರಿಂದ 16ರವರೆಗೆ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಅಳ್ವ ಹೇಳಿದರು.
ಸೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ದೇಶೀಯ ಚಿಂತನೆಗಳನ್ನಿಟ್ಟು ನಡೆಸುವ ಈ ಮೇಳದಲ್ಲಿ ವಿವಿಧ ಬಗೆಯ ಹಲಸುಗಳು ಹಾಗೂ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಗಳು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆಹಾರ ಮೇಳದಲ್ಲಿ ಹಲಸು ಹಾಗೂ ವಿವಿಧ ಹಣ್ಣುಗಳಿಂದ ತಯಾರಾದ ತಾಜಾ ತಿನಿಸುಗಳು ಕೂಡ ದೊರೆಯಲಿವೆ ಎಂದರು. ಲಭ್ಯ ಇರುವ ಎಲ್ಲಾ ಬಗೆಯ ಹಲಸುಗಳ ಜತೆಗೆ ಸ್ಥಳೀಯವಾಗಿ ಬೆಳೆಯುವ ಮಾವು, ನೇರಳೆ, ಪಪ್ಪಾಯಿ, ರಾಂಬೂಟ, ಪೇರಳೆ, ಡ್ರಾö್ಯಗನ್ ಹಣ್ಣುಗಳ ಜತೆಗೆ ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೃಷಿ ಉಪಕರಣಗಳು ಹಾಗೂ ಮಣ್ಣಿನ ಮಡಿಕೆಗಳ ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ ಎಂದರು. ರಿಯಾಯಿತಿ ದರದಲ್ಲಿ ಸೀಮಿತ ಸಂಖ್ಯೆಯ ಸ್ಟಾಲ್‌ಗಳನ್ನು ತೆರೆಯಲಾಗುವುದು ಎಂದು ಅವರು ಹೇಳಿದರು. ಆಳ್ವಾಸ್ ಶಿಕ್ಷಣ ಸಂಸ್ಥೆ ಜತೆಗೆ ಕೃಷಿ, ತೋಟಗಾರಿಕೆ ಇಲಾಖೆ, ವಿವಿಧ ರೈತ ಸಂಘಗಳು, ಎಸ್‌ಕೆಡಿಆರ್‌ಡಿಪಿ ಹಾಗೂ ಮೂಡುಬಿದಿರೆಯ ಎಲ್ಲಾ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಮಾಡುವ ಕಾರ್ಯಕ್ರಮ ಎಂದು ಮೋಹನ ಆಳ್ವ ಹೇಳಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ತೋಟಗಾರಿಕೆ ಇಲಾಖೆಯ ಯುಗೇಂದ್ರ, ಕೃಷಿ ಇಲಾಖೆಯ ಎಲ್ಲನ ಗೌಡ, ಎಸ್‌ಕೆಡಿಆರ್‌ಡಿಪಿಯ ಪ್ರಾದೇಶಿಕ ಅಧಿಕಾರಿ ಮನೋಜ್ ಮೆನೇಜಸ್, ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಪುರಸಭೆ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಉದ್ಯಮಿ ನಾರಾಯಣ ಪಿಎಂ, ಶ್ರೀಪತಿ ಭಟ್, ಅಭಿಜಿತ್ ಎಂ., ಸಂಪತ್ ಸಾಮ್ರಾಜ್ಯ, ವಿಮಲ್ ಕುಮಾರ್, ನಾಗರಾಜ್, ಇನ್ನರ್‌ವೀಲ್ ಕ್ಲಬ್ ಕರ‍್ಯದರ್ಶಿ ಸರಿತಾ ಆಶೀರ್ವಾದ್ ಉಪಸ್ಥಿತರಿದ್ದರು.
ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.
0 Comments