ನೀರ್ಕೆರೆಯಲ್ಲಿ ವಿಜೃಂಭಣೆಯಿಂದ ಶಾಲಾ ಆರಂಭೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ನೀರ್ಕೆರೆಯಲ್ಲಿ ವಿಜೃಂಭಣೆಯಿಂದ ಶಾಲಾ ಆರಂಭೋತ್ಸವ 



ಮೂಡುಬಿದಿರೆ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೀರ್ಕೆರೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು. ಮೆರವಣಿಗೆ ಮೂಲಕ ದಾಖಲಾತಿ ಆಂದೋಲನ ಕೈಗೊಂಡು ಎಲ್ಲ ಮಕ್ಕಳಿಗೆ ಬಲೂನ್ ಗಳನ್ನು ಮತ್ತು ಹೂವು ನೀಡಿ ನಂತರ ಆರತಿ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.

 ಶಾಲಾ ಪ್ರಾರಂಭೋತ್ಸವದ ಕುರಿತು ಆಯೋಜಿಸಲಾದ ಸಭಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಅವರು ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಇಲಾಖೆಯಿಂದ ನೀಡುವ ಸಮವಸ್ತ್ರವನ್ನು ವಿತರಿಸಲಾಯಿತು.

  ಗ್ರಾಮದ ಹಿರಿಯರಾದ ಅಜಿತ್ ರಾಜ್ ಜೈನ್ ಅವರು ಶಾಲಾ ಪ್ರಾರಂಭೋತ್ಸವ ಕುರಿತು ವಿದ್ಯಾರ್ಥಿಗಳಿಗೆ ಶುಭನುಡಿಗಳನ್ನಾಡುವ ಮೂಲಕ ಆಶೀರ್ವಚನ ನೀಡಿದರು.

ಹಿರಿಯರು,ಶಿಕ್ಷಣ ಪ್ರೇಮಿಗಳು ಪಾಲಕರು, ಗ್ರಾಮ ಪಂಚಾಯತ್ ಸದಸ್ಯರು ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು, ಶಾಲಾ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಮುಖ್ಯೋಪಾಧ್ಯಾಯಿನಿ ಯಮುನ.ಕೆ ಅವರು ಸ್ವಾಗತಿಸಿದರು. ಶಿಕ್ಷಕಿ ಶೈಲಜ ಭಂಡಾರಿ ವಂದಿಸಿದರು ವೀರೇಶ್ ನಿರೂಪಿಸಿದರು.

Post a Comment

0 Comments