ನೆಲ್ಲಿಕಾರು ಪಂಚಾಯತ್ ನಲ್ಲಿ ಮಕ್ಕಳ ಬೇಸಿಗೆ ಶಿಬಿರ
ಮೂಡುಬಿದಿರೆ: ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತ್ ಮತ್ತು ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಇವುಗಳ ಜಂಟಿ ಆಶ್ರಯದಲ್ಲಿ ಎರಡು ದಿನಗಳ ಕಾಲ ಮಕ್ಕಳ ಬೇಸಿಗೆ ಶಿಬಿರ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲ ಅವರು ಅಧ್ಯಕ್ಷತೆಯನ್ನು ವಹಿಸಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳ ಬುದ್ದಿ ಬೆಳವಣಿಗೆಗೆ ಶಿಬಿರಗಳು ಪ್ರಯೋಜನಕಾರಿ ಗ್ರಾ.ಪಂ ಗ್ರಂಥಾಲಯಗಳ ಮೂಲಕ ಓದುವಿಕೆಯನ್ನು ಬೆಳೆಸಿ ಎಂದರು.
ಮೊದಲ ದಿನ ನಡೆದ ಕಾರ್ಯಕ್ರಮದಲ್ಲಿ ಯುವ ಬರಹಗಾರ ಇಂದುಚೇತನ್ ಬೋರುಗುಡ್ಡೆ, ಪೆನ್ಸಿಲ್ ಕವಿ ಸುರೇಂದ್ರ ಆಚಾರ್ಯ ನೂರಾಳ್ ಬೆಟ್ಟು ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಆರೋಗ್ಯದ ಬಗ್ಗೆ ಸಿ.ಎಚ್.ಒ ವಸಂತ ಕೇಂದ್ರ ನೆಲ್ಲಿಕಾರು ಇವರು ಸಮಗ್ರ ಮಾಹಿತಿ ನೀಡಿ ದಿನನಿತ್ಯದಲ್ಲಿ ಶುಚಿತ್ವದ ಬಗ್ಗೆ ಗಮನ ಹರಿಸಿದ್ದಲ್ಲಿ ನಾವು ಆರೋಗ್ಯದಿಂದ ಇರಲು ಸಾಧ್ಯ ಎಂದು ಮಕ್ಕಳಿಗೆ ಮನವರಿಕೆ ಆಹಾರ ರೀತಿಯಲ್ಲಿ ಮಾಹಿತಿ ನೀಡಿದರು.
ಪಂಚಾಯತ್ ಉಪಾಧ್ಯಕ್ಷ ಶಶಿಧರ್ ಎಂ.ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಬೇಸಿಗೆ ಶಿಬಿರದ ಮಹತ್ವ ತಿಳಿಸಿದರು.
ಪಂಚಾಯತ್ ಸದಸ್ಯರುಗಳಾದ ಮೋಹಿನಿ, ಸಾಧು ,ಪ್ರತಿಮಾ,ಜಯಂತ ಹೆಗ್ಡೆ, ಆಶಾಲತಾ, ಜಿತೇಂದ್ರ ಜೈನ್ ಅಣ್ಣಿ ಪೂಜಾರಿ,
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಭಾರ ದಾಮೋದರ ಈ ಸಂದರ್ಭದಲ್ಲಿದ್ದರು.
ಮರುದಿನ ನಡೆದ ಶಿಬಿರದಲ್ಲಿ ಸಾಹಸ್ ಎನ್.ಜಿ.ಓ ಸಂಸ್ಥೆಯ ಮೇಲ್ವೀಚಾರಕ ಸುಭಾಷ್ ಸಾಗರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಕ್ಕಳಿಗೆ ಪರಿಸರ, ಮನೆಗಳಲ್ಲಿ ಸ್ವಚ್ಚತೆ ಬಗ್ಗೆ ಹಸಿ ಕಸ , ಒಣ ಕಸ ಬೇರ್ಪಡಿಸುವುದು ಮನೆಯಲ್ಲೇ ಕಸ ವಿಂಗಡನೆ ಮತ್ತು ಪ್ಲಾಸ್ಟಿಕ್ ಉಪಯೋಗದಿಂದ ಆಗುವ ದುಷ್ಪರಿಣಾಮ ಇತ್ಯಾದಿಗಳ ಬಗ್ಗೆ ಪಿ.ಪಿ.ಟಿ ಮೂಲಕ ಮಾಹಿತಿ ನೀಡಿದರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಪಂಚಾಯತ್ ಅಧ್ಯಕ್ಷೆ ಸುಶೀಲ ಅವರು ಅಧ್ಯಕ್ಷತೆಯನ್ನು ವಹಿಸಿ ಶಿಬಿರಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾಗಿರುವ ಮಕ್ಕಳಿಗೆ ಬಹುಮಾನ ಹಾಗೂ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.
ಪಂಚಾಯತ್ ಉಪಾಧ್ಯಕ್ಷ ಶಶಿಧರ್ ಎಂ., ಸದಸ್ಯರಾದ ಉದಯ, ಆಶಾಲತಾ, ಪತ್ರಕರ್ತರ ಸಂಘದ ಪ್ರೇಮಶ್ರೀ ಕಲ್ಲಬೆಟ್ಟು ಅವರು ಉಪಸ್ಥಿತರಿದ್ದರು.
ಪಂಚಾಯತ್ ಸಿಬಂಧಿಗಳಾದ ಪ್ರಜ್ಞಾ, ಲಕ್ಷ್ಮಣ, ರೇಣುಕ ಸಹಕರಿಸಿದರು.
ಪ್ರಶಾಂತ್ ಕುಮಾರ್ ಜೈನ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗ್ರಂಥಾಲಯ ಮೇಲ್ವೀಚಾರಕಿ ಪ್ರಮೀಳಾ ವಂದಿಸಿದರು.
0 Comments