ಸಿಎಸ್‌ಇಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಪ.ಪೂ ವಿದ್ಯಾರ್ಥಿಗಳ ಸಾಧನೆ
ಮೂಡುಬಿದಿರೆ: ದಿ ಇನ್‌ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರಿಸ್ ಆಫ್ ಇಂಡಿಯಾ ಮೇಯಲ್ಲಿ ನಡೆಸಿದ ಕಂಪೆನಿ ಸೆಕ್ರೆಟರಿ ಎಕ್ಸಿಕ್ಯೂಟಿವ್ ಎಂಟ್ರನ್ಸ್ ಟೆಸ್ಟ್(ಸಿಎಸ್‌ಇಇಟಿ)ನಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ದಾಖಲಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳಾದ ಆಯುಷ್ ಗೌಡ ಎಂ.ವೈ (133), ತಸ್ಮಾಯ್ ಎಂ.ಬಪಣ್ಣವರ್ (130), ಅನನ್ಯ ಕೆ.ಎ(126), ಕಾಜೋಲ್ ಪಿ.(122), ಸಮೃದ್ಧಿ ಜೆ.ಆರ್(121), ಪೂರ್ವಿಕ ಎಸ್.ಬಿ (116), ವಂದನಾ ಎಸ್.(114), ದೀಕ್ಷಾ ಎಲ್(113), ಸಂಹಿತ್ ಕಿರಣ್(108) ಅಂಕದೊAದಿಗೆ ಉತ್ತೀರ್ಣರಾಗಿದ್ದಾರೆ.
ಕಾಲೇಜಿನ ಪ್ರಾಂಶುಪಾಲ ಪ್ರೊ.ಸದಾಕಾತ್, ಪದವಿ ಪೂರ್ವ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ ಹಾಗೂ ಸಿಎಸ್‌ಇಇಟಿ ಸಂಯೋಜಕ ರಾಘವೇಂದ್ರ ಭಟ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
0 Comments