ಆಳ್ವಾಸ್‌ನ ಪ್ರಚೀತಾ ಎಂ. ವಿಜ್ಞಾನ ವಿಭಾಗದಲ್ಲಿ ತೃತೀಯ.
ಮೂಡುಬಿದಿರೆ: ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರಚೀತಾ ಎಂ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿನ ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿದ್ದಾಳೆ.
ಗಣಿತ, ಜೀವಶಾಸ್ತç, ಸಂಸ್ಕೃತದಲ್ಲಿ ತಲಾ 100, ಬೌತಶಾಸ್ತçದಲ್ಲಿ 99, ರಸಾಯನಶಾಸ್ತçದಲ್ಲಿ 98 ಹಾಗೂ ಇಂಗ್ಲೀಷ್‌ನಲ್ಲಿ 97 ಅಂಕಗಳನ್ನು ಪಡೆದಿದ್ದಾಳೆ. ಈಕೆ ಮೂಲತಃ ಮಂಡ್ಯದವಳಾಗಿದ್ದು ಮಂಡ್ಯದ ಸರ್ಕಾರಿ ಕಾಲೇಜಿನ ಗಣಿತ ಉಪನ್ಯಾಸಕ ಮಲ್ಲೇಶ್ ಎಂ.ಎA- ಗಣಿತ ಶಿಕ್ಷಕಿ ಜ್ಯೋತಿ ಎಸ್.ಆರ್ ಅವರ ಪುತ್ರಿ.
ಕಾಲೇಜಿನ ಪಾಠಗಳನ್ನು ಶ್ರದ್ಧೆಯಿಂದ ಕೇಳುತ್ತಿದ್ದೆ. ಪಠ್ಯದ ಓದಿನ ಜೊತೆಗೆ ಆಳ್ವಾಸ್‌ನಲ್ಲಿ ನೀಡುವ ಸ್ಟಡಿ ಮೆಟೀರಿಯಲ್‌ಗಳು ಓದಿಗೆ ಓದಿಗೆ ಪೂರಕವಾಗಿತ್ತು, ಆಳ್ವಾಸ್ ಸ್ಟಡಿ ಮೆಟೀರಿಯಲ್‌ಗಳ ಓದಿನಿಂದ ಹೆಚ್ಚು ಅಂಕಗಳಿಸುವAತಾಗಿದೆ. ನೀಟ್, ಸಿಇಟಿಗೆ ಮುಂದೆ ತಯಾರಿ ನಡೆಸುತ್ತೇನೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
0 Comments