ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ನಾಮಪತ್ರ ಸಲ್ಲಿಕೆ

ಜಾಹೀರಾತು/Advertisment
ಜಾಹೀರಾತು/Advertisment

 . ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ನಾಮಪತ್ರ ಸಲ್ಲಿಕೆ


ಮೂಡುಬಿದಿರೆ: ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪಕ್ಷದ ಕಾರ್ಯಕರ್ತರೊಂದಿಗೆ ಸೋಮವಾರ ಮಧ್ಯಾಹ್ನ ಬೃಹತ್ ಮೆರವಣಿಗೆಯಲ್ಲಿ ಆಡಳಿತ ಸೌಧಕ್ಕೆ ಆಗಮಿಸಿ ಚುನಾವಣಾಧಿಕಾರಿ ಮಹೇಶ್ಚಂದ್ರ ಅವರ ಕಚೇರಿಗೆ ನಾಮಪತ್ರ ಸಲ್ಲಿಸಿದರು.

ಸ್ವರಾಜ್ಯ ಮೈದಾನದಲ್ಲಿರುವ ಮಹಮ್ಮಾಯಿ ದೇವರ ದರ್ಶನ ಪಡೆದ ಅವರು ತಾಸೆ, ಹುಲಿವೇಷಗಳ ಕುಣಿತ, ಚೆಂಡೆ, ವಾದ್ಯ ಘೋಷಗಳೊಂದಿಗೆ ಮೆರವಣಿಗೆಯಲ್ಲಿ ತೆರದ ಜೀಪಿನಲ್ಲಿ ಸಾಗಿ ಬಂದರು.  

ಇದಕ್ಕೂ ಮೊದಲು ಸ್ವರಾಜ್ಯ ಮೈದಾನದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋಮುಸಂಘರ್ಷಕ್ಕೆ ನಿರುದ್ಯೋಗ ಸಮಸ್ಯೆಯೆ ಪ್ರಮುಖ ಕಾರಣ. ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ನನ್ನನ್ನು ಶಾಸಕನಾಗಿ ಚುನಾಯಿಸಿದಲ್ಲಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಸರಕಾರಿ ಆಸ್ಪ


ತ್ರೆಗಳನ್ನು ಮೇಲ್ದರ್ಜೆಗೇರಿಸಿ ಖಾಸಗಿ ಆಸ್ಪತ್ರೆಗೆ ಸಮಾನವಾದ ಚಿಕಿತ್ಸಾ ಸೌಳಭ್ಯ ಒದಗಿಸುವ ಸಂಕಲ್ಪ ತೊಟ್ಟಿದ್ದೇನೆ ಎಂದರು.   

ಅಭಯಚಂದ್ರ ಕೃಷ್ಣನಾದರೆ ನಾನು ಅರ್ಜುನ:ಈ ಬಾರಿಯ ಚುನಾವಣೆಯಲಿ ್ಲ ನನ್ನ ರಾಜಕೀಯ ಗುರು ಅಭಯಚಂದ್ರ ಕೃಷ್ಣನ ಪಾತ್ರ ನಾನು ಅರ್ಜುನನ ಪಾತ್ರ ನಿರ್ವಸುತ್ತೇನೆ. ನಮ್ಮೊಳಗೆ ವೈಮನಸ್ಸು ಉಂಟಾಗಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇಂತಹ ಯಾವುದೇ ಘಟನೆ ನಡೆದಿಲ್ಲ, ಮುಂದೆಯೂ ಆಗುವುದಿಲ್ಲ. ಕ್ಷೇತ್ರಕ್ಕೆ ಅಭಯಚಂದ್ರರ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ. ಮೂಡುಬಿದಿರೆ-ಮುಲ್ಕಿಯನ್ನು ಮಾದರಿಯನ್ನಾಗಿಸುವ ಸಂಕಲ್ಪ ಮಾಡಿದ್ದೇನೆ, ಜನತೆ ಆಶೀರ್ವದಿಸಬೇಕೆಂದು ವಿನಂತಿಸಿದರು. 


  ಕೆಪಿಸಿಸಿ ವಕ್ತಾರ, ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೋಳಿ ದಿಕ್ಸೂಚಿ ಭಾಷಣ ಮಾಡಿ 'ಬಿಜೆಪಿಯವರ ಬಾಯಿ ಬಡಾಯಿ. ಮಾತಾಡಿದ್ದು ಜಾಸ್ತಿ, ಮಾಡಿದ್ದು ಏನೂ ಇಲ್ಲ. ಎಲ್ಲದಕ್ಕೂ ಶ್ರಮ ನಮ್ಮದು, ಫೋಟೋ ಮಾತ್ರ ಮೋದಿಯದ್ದು.'


ಬೇಟಿ ಪಾಡಾವೋ, ಬೇಟೀ ಬಚಾವೊ ಅಂತ ಮಾಡಿದ್ದಾರೆ. ಆದರೆ ಇವತ್ತು ರೇಣುಕಾಚಾರ್ಯ, ಜಾರಕೀಹೋಳಿ ಮುಂತಾದವರಿಂದ ಹೆಣ್ಣು ಮಕ್ಕಳನ್ನು ಬಚಾವು ಮಾಡುವ ಸಂದರ್ಭ ಬಂದಿದೆ. ಕಾಂಗ್ರೆಸಿಗರ ಹೃದಯದಲ್ಲಿ ರಾಮ ಇದ್ದಾರೆ, ಕೃಷ್ಣ ಇದ್ದಾರೆ, ಯೇಸು ಇದ್ದಾರೆ, ಅಲ್ಲಾಹ್ ಇದ್ದಾರೆ. ಆದರೆ ಬಿಜೆಪಿಗರ ರಕ್ತದಲ್ಲಿ ದ್ವೇಷ ರಾಜಕಾರಣ ಮಾತ್ರ ಇರೋದು ಎಂದರು.


ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ' ಮಿಥುನ್ ರೈ ಅವರನ್ನು ಮೂಡುಬಿದಿರೆಗೆ ಆರಿಸಿದ್ದು ಕೆಪಿಸಿಸಿ ಅಲ್ಲ, ಮೂಡುಬಿದಿರೆಯ ಜನರೇ ಮಿಥುನ್ ರೈ ಅವರನ್ನು ಆರಿಸಿದ್ದಾರೆ' ಎಂದರು.


ನಾನು ಕೇವಲ ನಾಲ್ಕೂವರೆ ಕೋಟಿಯಲ್ಲಿ ಮೂಡುಬಿದಿರೆಗೆ ವೆಂಟೆಡ್ ಡ್ಯಾಂ ಮಾಡಿದ್ದು 23 ವರ್ಷಗಳಿಂದ ಇಂದಿಗೂ ಮೂಡುಬಿದಿರೆಯ ಜನತೆಗೆ ನೀರು ಸಿಗುವಂತಾಗಿದೆ. ಆದರೆ ಇವತ್ತು ಬಿಜೆಪಿ ಸರಕಾರ ನೂರಾರು ಕೋಟಿ ಖರ್ಚುಮಾಡಿ ಕಟ್ಟಿದ ಎಣ್ಣೆಹೊಳೆ ಡ್ಯಾಂ ನಲ್ಲಿ ಮುತಾಲಿಕ್ ಆಟ ಆಡುತ್ತಿರುವುದು ಎಷ್ಟು ಹಾಸ್ಯಾಸ್ಪದ ನೋಡಿ ಎಂದರು.


 ಕಳೆದ 5 ವರ್ಷಗಳಲ್ಲಿ ಮೂಡುಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ಮಾಡಿದ ಭೃಷ್ಟಾಚಾರ ಹಿಂದೆ ಯಾರೂ ಮಾಡಿಲ್ಲ. ಮಿಥುನ್ ರೈ ಗೆದ್ದರೆ ನಾವೆಲ್ಲರೂ ಶಾಸಕರಾದಂತೆ ಎಂದು ಜೈನ್ ಹೇಳಿದರು.


ಎಂಎಲ್‍ಸಿ ಹರೀಶ್ ಕುಮಾರ್, ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್, ದೇವಿಪ್ರಸಾದ್ ಶೆಟ್ಟಿ, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ್, ಮುಖಂಡರಾದ ಮಮತ ಗಟ್ಟಿ, ಶಾಲೆಟ್ ಪಿಂಟೊ, ಸುಪ್ರಿಯಾ ಡಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments