ಜಿಹಾದಿಗಳ ನೆರಳಿನಲ್ಲಿ ಹಿಂದೂಗಳ ಹಬ್ಬ ಆಚರಣೆ ಎಲ್ಲಿಯವರೆಗೆ ?' ಈ ವಿಷಯದ ಬಗ್ಗೆ ವಿಶೇಷ ಸಂವಾದ !

ಜಾಹೀರಾತು/Advertisment
ಜಾಹೀರಾತು/Advertisment


'ಜಿಹಾದಿಗಳ ನೆರಳಿನಲ್ಲಿ ಹಿಂದೂಗಳ ಹಬ್ಬ ಆಚರಣೆ ಎಲ್ಲಿಯವರೆಗೆ ?' ಈ ವಿಷಯದ ಬಗ್ಗೆ ವಿಶೇಷ ಸಂವಾದ !



ಹಿಂದೂಗಳ ಹಬ್ಬಗಳ ಸಮಯದಲ್ಲಿ ನಡೆಯುವ ಗಲಭೆಗಳು ತಡೆಯಲು ಹಿಂದೂ ಬಾಂಧವರು ಸಂಘಟಿತರಾಗುವುದು ಆವಶ್ಯಕ ! - ಶ್ರೀ. ಟಿ. ರಾಜಸಿಂಹ, ಶಾಸಕರು, ತೆಲಂಗಾಣ 


ಇಂದು ಮುಸಲ್ಮಾನರು ರಸ್ತೆಯ ಮೇಲೆ ನಮಾಜ ಪಠಣ ಮಾಡಬಹುದು ; ಆದರೆ ಶ್ರೀರಾಮನವಮಿ ಮತ್ತು ಹನುಮಾನ ಜಯಂತಿ ದಿನದಂದು ಹಿಂದೂಗಳು ಸಾಮಾನ್ಯವಾಗಿ ಮೆರವಣಿಗೆ ನಡೆಸಿದರೂ, ಅದರಲ್ಲಿ ಅಡಚಣೆ ನಿರ್ಮಾಣ ಮಾಡಲಾಗುತ್ತದೆ. ದೇಶದಲ್ಲಿ ಹಿಂದೂಗಳ ಉತ್ಸವದ ಸಮಯದಲ್ಲಿ ನಡೆಯುವ ಗಲಭೆ ಮತ್ತು ಇತರ ಹಿಂಸಾಚಾರದ ಘಟನೆಗಳನ್ನು ನೋಡಿದರೆ ಅದನ್ನು ತಡೆಯಲು ಹಿಂದೂ ಬಾಂಧವರು ಸಂಘಟಿತರಾಗುವುದು ಆವಶ್ಯಕವಾಗಿದೆ, ಎಂದು ತೆಲಂಗಾಣದ ಪ್ರಕರ ಹಿಂದುತ್ವನಿಷ್ಠ ಶಾಸಕರಾದ ಶ್ರೀ. ಟಿ. ರಾಜಸಿಂಹ ಇವರು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ 'ಜಿಹಾದಿಗಳ ನೆರಳಿನಲ್ಲಿ ಹಿಂದೂಗಳ ಹಬ್ಬಾಚರಣೆ ಎಲ್ಲಿಯವರೆಗೆ ? ಈ ವಿಷಯದ ಬಗ್ಗೆ ಆಯೋಜಿಸಲಾದ ಆನ್ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು .


ಆ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರರಾದ  ಶ್ರೀ. ವಿನೋದ ಬನ್ಸಲ್ ಇವರು ಶ್ರೀರಾಮನವಮಿ ಮತ್ತು ಹನುಮಾನ ಜಯಂತಿ ಹಬ್ಬಗಳ ಸಮಯದಲ್ಲಿ ಹಿಂದೂಗಳ ಮೆರವಣಿಗೆಯ ಮೇಲೆ ಹಿಂದೆಯೂ ದಾಳಿಗಳು ನಡೆಯುತ್ತಿದ್ದವು ಮತ್ತು ಈಗಲೂ ಮುಂದುವರೆದಿದೆ; ಆದರೆ ಈಗ ಹಿಂದೂಗಳು ಅದನ್ನು ವಿರೋಧಿಸುತ್ತಿದ್ದಾರೆ. ಬಂಗಾಳ, ಬಿಹಾರ್, ಜಾರ್ಖಂಡ್, ಛತ್ತಿಸ್ಗಢ, ದೆಹಲಿ ಮುಂತಾದ ರಾಜ್ಯಗಳಲ್ಲಿ ಷಡ್ಯಂತ್ರಪೂರ್ವಕ ಪೋಲಿಸರು, ಸರಕಾರದಿಂದ ಹಿಂದೂಗಳ ಮೆರವಣಿಗೆ ತಡೆಯಲಾಗುತ್ತದೆ. ಈ ಮೆರವಣಿಗೆಯಲ್ಲಿ ಮತಾಂಧರ ದೌರ್ಜನ್ಯಕ್ಕೆ ಗುರಿಯಾಗುವ ಹಿಂದೂಗಳನ್ನು ತಪ್ಪಿತಸ್ಥರನ್ನಾಗಿ ಮಾಡಿ ಅವರನ್ನು ಬಂಧಿಸಲಾಗುತ್ತದೆ ಮತ್ತು ನಿಜವಾದ ಅಪರಾಧಿಗಳು ಮಾತ್ರ ಸ್ವತಂತ್ರವಾಗಿ ತಿರುಗುತ್ತಾರೆ. ಇದರಲ್ಲಿ ಮತಾಂಧಾರ ಸಮರ್ಥನೆ ಮಾಡುವ ಸಂಘಟನೆಗಳು, ರಾಜಕೀಯ ಮುಖಂಡರು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಕಾರ್ಯನಿರತ ಇರುವ ತಥಾಕಥಿತ 'ಫ್ಯಾಕ್ಟ್ ಚೇಕರ್ ' ಇವರ  ಒಬ್ಬರಿಗೊಬ್ಬರ ಪರಸ್ಪರ ಸಂಬಂಧವಿದೆ. ಈ ಎಲ್ಲಾ ವ್ಯವಸ್ಥೆ ವಿಫಲಗೊಳಿಸುವ ಅವಶ್ಯಕತೆ ಇದೆ.


'ಸನಾತನ ಸಂಸ್ಥೆಯ' ಧರ್ಮಪ್ರಚಾರಕರಾದ ಶ್ರೀ. ಅಭಯ ವರ್ತಕ ಇವರು, ಈ ವರ್ಷವೂ ಹಿಂದೂಗಳ ಹಬ್ಬಗಳಲ್ಲಿ ಗಲಭೆ ನಡೆದವು. ಇದರಲ್ಲಿ ಮಹಾರಾಷ್ಟ್ರದಲ್ಲಿನ ಛತ್ರಪತಿ ಸಂಭಾಜಿನಗರದಲ್ಲಿ ನಡೆದಿರುವ ಗಲಭೆಯಲ್ಲಿ 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ '(ಪಿ.ಎಫ್. ಐ) ದ ಕೈವಾಡವಿತ್ತು. ಇಂದು ಮುಸಲ್ಮಾನರ ಜನಸಂಖ್ಯೆ ದೇಶದಲ್ಲಿ ೨೫ ಕೋಟಿ ಆಗಿರುವಾಗ ಅವರನ್ನು ಅಲ್ಪಸಂಖ್ಯಾತರು ಎಂದು ಹೇಳಲಾಗುತ್ತದೆ, ಇದು ಹಿಂದೂಗಳ ಕಣ್ಣಿಗೆ ಮಣ್ಣೆರಚುವ ಕುತಂತ್ರವಾಗಿದೆ. ಇಂದು ದೇಶದಲ್ಲಿ ನಡೆಯುವ ವಿವಿಧ ಘಟನೆಯಿಂದ ಭಾರತವನ್ನು 'ಇಸ್ಲಾಮಿಕ್ ರಾಷ್ಟ್ರ' ಮಾಡುವ ಪ್ರಯತ್ನ ಮಾಡಲಾಗುತ್ತದೆ. ನಮ್ಮ ದೇಶ ಇನ್ನೊಂದು ವಿಭಜನೆಯತ್ತ ಹೋಗುತ್ತಿದೆ. ಈ ವಾಸ್ತವ ಕಣ್ಣೆದುರು ಕಾಣುತ್ತಿದೆ. ಹಿಂದೂಗಳು ಸಂಘಟಿತರಾಗದಿದ್ದರೆ ವಿನಾಶದ ಕಡೆಗೆ ಹೋಗುತ್ತಾರೆ. ಇದನ್ನು ತಡೆಯುವದಕ್ಕಾಗಿ ಹಿಂದೂಗಳು ನಮ್ಮೆದುರಿರುವ ಸಂಕಟಗಳನ್ನು ಗುರುತಿಸಿ ಜಾತಿ-ಪಂಥ, ಸಂಘಟನೆ, ಪದ ಮುಂತಾದ ಎಲ್ಲವನ್ನು ಪಕ್ಕಕ್ಕೆ ಸರಿಸಿ ಹಿಂದೂ ರಾಷ್ಟ್ರಕ್ಕಾಗಿ ಸಂಘಟಿತರಾಗಬೇಕು.


ಈ ಸಮಯದಲ್ಲಿ ಪಶ್ಚಿಮ ಬಂಗಾಳದಲ್ಲಿನ 'ಆತ್ಮದೀಪ' ಈ ಸಂಘಟನೆಯ ಅಧ್ಯಕ್ಷ ನ್ಯಾಯವಾದಿ ಪ್ರಸೂನ್ ಮೈತ್ರ ಇವರು, ಪಶ್ಚಿಮ ಬಂಗಾಳದಲ್ಲಿ ಮುಸಲ್ಮಾನ  ಜನಾಂಗ ಏನೇ ಮಾಡಿದರೂ, ಅದು ಕಾನೂನಿನ ಪ್ರಕಾರ ಯೋಗ್ಯವಾಗಿ ಇರುತ್ತದೆ ಮತ್ತು ಅದರ ಸಮರ್ಥನೆ ಮಾಡಲಾಗುತ್ತದೆ,   ಇಂತಹ ಮಾನಸಿಕತೆ ಇಲ್ಲಿಯ ರಾಜಕೀಯ ಪಕ್ಷದ್ದಾಗಿದೆ. ಇಂದು ಹಿಂದೂಗಳನ್ನು ದುರ್ಬಲರೆಂದು ತಿಳಿದು  ಕಾನೂನಿನ ಭಯ ತೋರಿಸುತ್ತಾರೆ. ಭಗವಾನ್ ಶ್ರೀ ಕೃಷ್ಣನ ಶಾಂತಿ ಪ್ರಸ್ತಾವ ಕೌರವರು ತಿರಸ್ಕರಿಸಿದ ನಂತರ ಕೊನೆಗೆ ಪಾಂಡವರು ಯುದ್ಧವನ್ನೇ ಮಾಡಬೇಕಾಯಿತು. ಹಿಂದೂಗಳೂ ಈಗ  ಕಾಲದ ಅವಶ್ಯಕತೆ ತಿಳಿದು ಪ್ರತಿಕಾರ ಮಾಡಲು ಕಲಿಯಬೇಕು.



Post a Comment

0 Comments