ನಿವೃತ್ತ ಪ್ರಾಂಶುಪಾಲ ಜಯರಾಮ ಶೆಟ್ಟಿಗಾರ್ ಗೆ ಬೀಳ್ಕೊಡುಗೆ
ಮೂಡುಬಿದಿರೆ: ಇಲ್ಲಿನ ಎ.ಜಿ.ಸೋನ್ಸ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕಳೆದ 25 ವರುಷಗಳಿಂದ ಪ್ರಾಂಶುಪಾಲರಾಗಿ ಇದೀಗ ನಿವೃತ್ತಿ ಹೊಂದಿರುವ ಜಯರಾಮ ಶೆಟ್ಟಿಗಾರ್ ಅವರನ್ನು ಸಂಸ್ಥೆಯ ವತಿಯಿಂದ ಶುಕ್ರವಾರ ಸನ್ಮಾನಿಸಿ ಬೀಳ್ಕೊಡಲಾಯಿತು .
ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಸಿ ಶುಭ ಹಾರೈಸಿದರು.
ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಕಳೆದ ಜಯರಾಮ್ ಶೆಟ್ಟಿಗಾರ್ ಅವರು ಸಂಸ್ಥೆಗೆ ಕಳೆದ 34 ವರುಷಗಳ ಹಿಂದೆ ಕಿರಿಯ ತರಬೇತುದಾರನಾಗಿ ಕರ್ತವ್ಯಕ್ಕೆ ಸೇರಿಕೊಂಡು 9 ವರ್ಷಗಳ ನಂತರ ಪ್ರಾಂಶುಪಾಲರಾಗಿ ನೇಮಕಗೊಂಡವರು. ಬಹಳ ಸರಳತೆಯ ಪ್ರಾಂಶುಪಾಲರಾಗಿರುವ ಇವರು ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿರುವ ಐಟಿಐ ಸಂಸ್ಥೆಗಳ ಜತೆ ಉತ್ತಮ ಸಂಪರ್ಕವನ್ನು ಇಟ್ಟುಕೊಂಡವರು ಮತ್ತು ತಮ್ಮ ವಿದ್ಯಾರ್ಥಿಗಳ ಜತೆಯೂ ಉತ್ತಮವಾದ ಬಾಂಧವ್ಯವನ್ನು ಇಟ್ಟುಕೊಂಡವರು ಇದರಿಂದಾಗಿ ಹೆಚ್ಚಿನ ಹಳೆ ವಿದ್ಯಾರ್ಥಿಗಳು ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಾಂಶುಪಾಲ ಜಯರಾಮ್ ಶೆಟ್ಟಿಗಾರ್ ಅವರು ಸಂಸ್ಥೆಯ ಆಡಳಿಯ ಮಂಡಳಿಯು ಉತ್ತಮ ಸಹಕಾರವನ್ನು ನೀಡಿರುವುದರಿಂದ ಪ್ರಾಂಶುಪಾಲನಾಗಿ ಸಂಸ್ಥೆಯನ್ನು ಮುನ್ನಡೆಸಲು ಸಹಕಾರಿಯಾಯಿತು. ತನ್ನ ವಿದ್ಯಾರ್ಥಿಗಳು ಇದೀಗ ದೇಶ ವಿದೇಶಗಳಲ್ಲಿ ತನಗಿಂತ ಉತ್ತಮ ಸ್ಥಿತಿಯಲ್ಲಿರುವುದು ಹೆಮ್ಮೆಯ ವಿಷಯ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿ ಕಾರ್ಯದರ್ಶಿ ಡಾ.ರಾಧಾಕೃಷ್ಣ ಶೆಟ್ಟಿ, ಕೋಶಾಧಿಕಾರಿ ರಾಮ್ ಪ್ರಸಾದ್ ಭಟ್, ಸದಸ್ಯ ಸಿ.ಹೆಚ್.ಗಫೂರ್, ಪ.ಪೂ ಕಾಲೇಜಿನ ಪ್ರಾಂಶುಪಾಲ ರಮೇಶ್ ಭಟ್, ಎಸ್.ಎನ್.ಪಾಲಿಟೆಕ್ನಿಕ್ ನ ಪ್ರಾಂಶುಪಾಲ ಜೆ.ಜೆ.ಪಿಂಟೋ, ಅನಂತ್ರಾಜ್ ದೈ.ಶಿ.ಕಾಲೇಜಿನ ಪ್ರಾಂಶುಪಾಲ ಧನಂಜಯ ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಕಾಲೇಜುಗಳ
ನಿಯೋಜಿತ ಪ್ರಾಂಶುಪಾಲ ಶ್ರೀಕಾಂತ ಹೊಳ್ಳ ಸ್ವಾಗತಿಸಿದರು. ಸಂಸ್ಥೆಯ ತರಬೇತುದಾರ ಶಿವಪ್ರಸಾದ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.ರಾಜೇಂದ್ರ ಕುಮಾರ್ ಕೆ. ವಂದಿಸಿದರು. ಜಿಲ್ಲೆಯ ವಿವಿಧ ಐಟಿಐ ಕಾಲೇಜುಗಳ ಪ್ರಾಂಶುಪಾಲರುಗಳು ಈ ಸಂಧರ್ಭದಲ್ಲಿದ್ದರು.
0 Comments