ಎರಡು ದಶಕಗಳ ಕಾಲೇಜು ಕನಸು ನನಸು:ಅಳಿಯೂರನಲ್ಲಿ ಶಾಸಕರಿಗೆ ಬೃಹತ್ ಅಭಿನಂದನಾ ಸಮಾರಂಭ

ಜಾಹೀರಾತು/Advertisment
ಜಾಹೀರಾತು/Advertisment

 ಅಳಿಯೂರಿಗೆ ಪದವಿಪೂರ್ವ ಕಾಲೇಜನ್ನು ಮಂಜೂರುಗೊಳಿಸಿದ ಕ್ಷೇತ್ರದ ಶಾಸಕ ಉಮನಾಥ್ ಕೋಟ್ಯಾನ್ ರವರಿಗೆ ಬೃಹತ್ ಅಭಿನಂದನಾ ಸಮಾವೇಶವನ್ನು ಅಳಿಯೂರಿನಲ್ಲಿ ಏರ್ಪಡಿಸಲಾಗಿದೆ.



ಕೋಟಿ ಚೆನ್ನಯ ಯುವಶಕ್ತಿ ಮತ್ತು ಕೋಟಿ ಚೆನ್ನಯ ಮಹಿಳಾ ಘಟಕ ಅಳಿಯೂರು ಇದರ ದಶಮಾನೋತ್ಸವ ಅಂಗವಾಗಿ ಮಾ. 19ರಂದು ಆದಿತ್ಯವಾರ ಸಾಯಂಕಾಲ ಗಂಟೆ 6.00ರಿಂದ ಗೀತ ನಮನ, ಅಂಗಾಂಗ ದಾನ ಸಂಕಲ್ಪದ ಜೊತೆಗೆ ಶಾಸಕರಿಗೆ ಅಭಿನಂದನಾ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮ ಅಳಿಯೂರಿನ ಹೇಮಾ ಸಭಾಭವನದಲ್ಲಿ ಜರಗಲಿದೆ.


ಸಂಜೆ ಗಂಟೆ 6.00ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಸ್ಮಾರ್ಟ್ ಎಂಟರ್‌ಟ್ರೈನರ್‌ನವರಿಂದ ಸಂಗೀತ ಸಂಜೆ ನಂತರ ಭಗವದ್ಗೀತೆಗೆ ನಮನ, ಅಂಗಾಂಗ ದಾನ ಸಂಕಲ್ಪ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಪಿಂಗಾರ ಕಾಲವಿದೆರ್ ಬೆದ್ರ ಇವರಿಂದ ಭರಣಿ ಕೃತಿಕೆ ಎಂಬ ನಾಟಕ ಜರಗಲಿದೆ.

Post a Comment

0 Comments