ಮೂಡುಬಿದಿರೆ ಯುವ ಬಂಟರ ಸಂಘದಲ್ಲಿ ಭುಗಿಲೆದ್ದ ಅಸಮಾಧಾನ: ರಾಜಕೀಯಕ್ಕೆ ಅವಕಾಶ ಕೊಡಲ್ಲ ಎಂದ ಪದಾಧಿಕಾರಿಗಳು
ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನೇಮಕಗೊಂಡಿರುವ ಮಿಥುನ್ ರೈ ಪರವಾಗಿ ಮೂಡುಬಿದಿರೆ ಯುವ ಬಂಟರ ಸಂಘದ ಅಧಿಕೃತ ಫೇಸ್‌ಬುಕ್ ಪೇಜಲ್ಲಿ ಬೆಂಬಲಿಸುವಂತೆ ಪೋಸ್ಟ್ ಹಾಕಿದ್ದು ಇದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆಯಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಪೋಸ್ಟ್ ಬಗ್ಗೆ ಇದೀಗ ಸ್ವತಃ ಯುವ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿ ಮಾಹಿತಿ ನೀಡಿದ್ದಾರೆ.
ತಾನು ಮಾತನಾಡ ಬಾರದೆಂದು ಇದ್ದೆ ಆದರೆ ಕೆಲ ಜನರ ವರ್ತನೆಗಳಿಂದಾಗಿ ಕೆಲವು ಸತ್ಯ ವಿಚಾರಗಳ ಬಗ್ಗೆ ಇವತ್ತು ಮಾತಾಡುವ ಅಗತ್ಯ ಇದೆ ಹಾಗಾಗಿ ಕುತಂತ್ರ ಷಡ್ಯಂತ್ರ ಗಳಿಗೆ ಹೆದರುವ ಜಾಯಮಾನ ನನ್ನದಲ್ಲ, ಮತ್ತು ಪೇಜ್ ನಲ್ಲಿ ನಾನು ಸತ್ಯ ವಿಚಾರವಾಗಿ ಹಾಕಿರುವ ಕಮೆಂಟ್ ಗಳನ್ನು ಡಿಲಿಟ್ ಮಾಡಿದವರು ನೆನಪಿಡಿ ಆ ತಪ್ಪನ್ನು ಮತ್ತೆ ಮಾಡಬೇಡಿ ದೇವರು ಮೆಚ್ಚುವ ಕೆಲಸ ಅಲ್ಲ ಎಂದಿರುವ ಅವರು ಯುವ ಬಂಟರ ಸಂಘ (ರಿ) ಮೂಡುಬಿದಿರೆಯ ಫೇಸ್‌ಬುಕ್ ಪೇಜ್ ನಲ್ಲಿ ಹಾಕಿರುವ ಒಂದು ಪೋಸ್ಟ್ ಕಳೆದ ಮೂರು ದಿವಸಗಳಿಂದ ಬಹಳಷ್ಟು ಚರ್ಚೆಗಳಿಗೆ ಕಾರಣವಾಗಿವೆ.
ಹಾಗಾಗಿ ನಾನು ಮೋದಲೇ ಹೇಳಲು ಇಚ್ವಿಸುತ್ತೇನೆ ಆ ಪೋಸ್ಟ್ ಗೂ ನಮ್ಮ ಯುವ ಬಂಟರ ಸಂಘಕ್ಕೂ ಯಾವುದೇ ಸಂಬಂಧ ಇಲ್ಲ ನಮ್ಮ ಸಂಘ ರಾಜಕೀಯ ವಾಗಿ ಯಾರಿಗೂ ಬೆಂಬಲ ನೀಡಿಲ್ಲ ನೀಡುವುದು ಸಹ ಇಲ್ಲ.
ಸ್ನೇಹಿತರೆ ಯಾವುದೇ ಒಂದು ಸಂಘ ಸಂಸ್ಥೆಯನ್ನು ಕಟ್ಜುವಾಗ ಅದರ ಹಿಂದೆ ಹಲವಾರು ಜನರ ಕಠಿಣ ಪರಿಶ್ರಮ ಇರುತ್ತದೆ. ನಾನು ಮತ್ತು ನನ್ನ ಕೆಲ ಸ್ನೇಹಿತರು ಕಳೆದ 12 ವರುಷಗಳಿಂದ ಮೂಡುಬಿದಿರೆ ಯಲ್ಲಿಯೂ ಯುವ ಬಂಟರ ಸಂಘ ಆಗಬೇಕು ಅದರಿಂದ ಬಡ ಜನರ ಕಣ್ಣೀರು ಒರೆಸುವ ಕೆಲಸಕಾರ್ಯಗಳನ್ನು ಮಾಡಬೇಕು, ಬಡ ಮಕ್ಕಳಿಗೆ ವಿಧ್ಯಾಭ್ಯಾಸ, ಮನೆ ನಿರ್ಮಾಣ, ವೈದ್ಯಕೀಯ ವೆಚ್ಚ ಈ ರೀತಿಯ ಹಲಾವಾರು ಪುಣ್ಯದ ಕೆಲಸಗಳನ್ನು ಮಾಡುವ ದ್ರಷ್ಟಿಯಿಂದ ಸಂಘ ವನ್ನು ನಿಸ್ವಾರ್ಥದಿಂದ ನಿರ್ಮಿಸಿ ಕಳೆದ ಮೂರು ವರುಷಗಳಿಂದ ಇನ್ನಿತರ ಸಮಾಜ ಮುಖಿ ಕೆಲಸಗಳನ್ನು ಯುವ ಬಂಟರ ಸಂಘ ಮಾಡಿಕೊಂಡು ಬಂದಿರುತ್ತದೆ.
ಈ ರೀತಿ ಸಂಘ ಸಂಸ್ಥೆಗಳನ್ನು ರಾಜಕೀಯವಾಗಿ ಬಳಸಿ ಕೊಂಡಾಗ ಆ ಸಂಸ್ಥೆಗಳು ಮತ್ತು ಅದನ್ನು ಸ್ವಾರ್ಥಕ್ಕಾಗಿ ಬಳಸಿದವರು ಬೆಳೆದಿರುವದು ಮತ್ತು ಉಳಿದಿರುವುದು ಇತಿಹಾಸದಲ್ಲೆ ಇಲ್ಲ ಹಾಗಾಗಿ ಸಮಾಜಕ್ಕೆ ಒಳಿತನ್ನು ಮಾಡುವುದು ದೇವರ ಕೆಲಸ ಇಲ್ಲಿ ಯಾರೂ ಕೂಡ ನಿಮ್ಮ ಬೇಳೆ ಬೇಯಿಸಿ ಕೊಳ್ಲಲು ಹಾಗೂ ವೈಯಕ್ತಿಕ ಕೆಲಸಗಳಿಗೆ ಸಂಘವನ್ನು ಬಳಸ ಬೇಡಿ.
ಈಗ ಒಬ್ಬರೋ ಮಾಡುವ ತಪ್ಪಿನಿಂದಾಗಿ ನಮ್ಮ ಯುವ ಬಂಟರ ಸಂಘ ಮೂಡುಬಿದಿರೆ ರಾಜಕೀಯ ಪ್ರೇರಿತವಾಗಿದೆ ಮತ್ತು ಒಂದು ಪಕ್ಷಕ್ಕೆ ಸೀಮಿತವಾಗಿ ಕೆಲಸ ಮಾಡ್ತಾ ಇದೆ ಎನ್ನುವ ಸುದ್ದಿ ಕೇಳಿ ನಮಗೂ ಅಂದರೆ ಸಂಘ ವನ್ನು ಕಟ್ಟಲು ನಮ್ಮ ಜೊತೆ ನಿಂತಿರುವ ಬಹಳಷ್ಟು ಪದಾಧಿಕಾರಿಗಳಿಗೂ ಬಾರಿ ನೋವು ಉಂಟು ಮಾಡಿದೆ
ಊರಿನ ದೈವ , ದೇವರ ಹಾಗೂ ಬಂಟರ ಸಂಘದ ಹಿರಿಯರ ಆಶೀರ್ವಾದದಿಂದ ರಚಿಸಿರುವ ಈ ಸಂಘ ರಾಜಕೀಯವಾಗಿ ಬೆಳೆದಿದ್ದಲ್ಲಿ ಮತ್ತು ಅದರ ಘನತೆಗೆ ದಕ್ಕೆ ಯಾರೇ ತಂದರು ನಾವು ಸುಮ್ಮನಿರುವುದಿಲ್ಲ.
ಮತ್ತು ನಾನು ಹಾಕಿರುವ ಪೋಸ್ಟ್ ನಿಂದ ಕೆಲವರಿಗೆ ಬೇಜಾರಾದರೂ ಪರವಾಗಿಲ್ಲ ನೂರಾರು ಜನರ ಬಾಳನ್ನು ಬೆಳಗಿಸುವ ಸಂಸ್ಥೆಗಳು ಈ ರೀತಿ ರಾಜಕೀಯ ಕ್ಕೆ ಬಲಿಯಾಗ ಬಾರದೆಂದು ನನ್ನ ಆಶಯ. ಯಾವುದೇ ಒಂದು ಪಕ್ಷ ಅಥವಾ ರಾಜಕೀಯಕ್ಕೆ ಬೆಂಬಲಿಸುವುದು ಅವರವರ ವೈಯಕ್ತಿಕ ಆದರೆ ಅದನ್ನು ಸಂಘಕ್ಕೆ ತರುವುದು ಸರಿಯಲ್ಲ ಯಾರೇ ತಂದರು ನಾವು ಬಿಡುವ ಮಾತೇ ಇಲ್ಲ ಎಂದು ಮೂಡುಬಿದಿರೆ ಯುವ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ
ಸಂದೀಪ್ ಎಂ ಶೆಟ್ಟಿ ಎಚ್ಚರಿಸಿದ್ದಾರೆ.
0 Comments