ಮೂಡುಬಿದಿರೆ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಹೈಮಾಸ್ಟ್ ದೀಪ ಲೋಕಾರ್ಪಣೆಗೊಳಿಸಿದರು

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಹೈಮಾಸ್ಟ್ ದೀಪ ಲೋಕಾರ್ಪಣೆ



ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಪ್ರಾಂತ್ಯ ಗ್ರಾಮದ 12ನೇ ವಾರ್ಡಿನ ಹಳೆ ಪೊಲೀಸ್ ಠಾಣೆಯ ಬಳಿ  ರೂ 9.50 ಲಕ್ಷ ಪುರಸಭಾ ನಿಧಿಯಿಂದ ಮಾಡಿರುವ ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ ಅಗಲೀಕರಣ ಮತ್ತು ಇಂಟರ್ ಲಾಕ್ ಅಳವಡಿಕೆ, ಚರಂಡಿ ಹಾಗೂ ಹೈ ಮಾಸ್ಟ್ ದೀಪವನ್ನು ಶನಿವಾರ ಸಂಜೆ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಲೋಕಾರ್ಪಣೆಗೊಳಿಸಿದರು.

 ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷೆ ಸುಜಾತ ಶಶಿಕಿರಣ್,  ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಸದಸ್ಯರಾದ ಸ್ವಾತಿ ಪ್ರಭು, ಶ್ವೇತಾ ಕುಮಾರಿ,ಧನಲಕ್ಷ್ಮೀ, ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್, ಶ್ರೀ ಮಹಾವೀರ ಪ.ಪೂ ಕಾಲೇಜಿನ ಪ್ರಾಂಶುಪಾಲ ರಮೇಶ್ ಭಟ್, ಹಿರಿಯರಾದ ದಯಾನಂದ ಪೈ, ಲಕ್ಷ್ಮಣ್ ಪೂಜಾರಿ, ರಾಜೇಶ್ ಮಲ್ಯ, ಸಾತ್ವಿಕ್ ಮಲ್ಯ, ನೇತಾಜಿ ಬ್ರಿಗೇಡ್ ನ ರಾಹುಲ್ ಕುಲಾಲ್, ಅಭಿಷೇಕ್ ಕುಂದರ್, ಅಣ್ಣಪ್ಪ ಕೆ.ಎಸ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

Post a Comment

0 Comments