ಮೂಡಬಿದ್ರೆಯಲ್ಲಿ ,ಮಕ್ಕಳ ಬೇಸಿಗೆ ಶಿಬಿರ

ಜಾಹೀರಾತು/Advertisment
ಜಾಹೀರಾತು/Advertisment

 *ಮಕ್ಕಳ  ಬೇಸಿಗೆ ಶಿಬಿರ*


ಶಾಲೆಯ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳು ಕೂಡ ಮಕ್ಕಳ ಸಂಪೂರ್ಣ ಸರ್ವಾಂಗೀಣ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.. ಇತ್ತೀಚೆಗೆ ಶಾಲೆಯ ಪಠ್ಯದ ಜೊತೆ ಜೊತೆಗೆ ಟ್ಯೂಷನ್, ಹೋಂವರ್ಕ್ ಹೊರೆ, ತಮ್ಮ ಮಕ್ಕಳು ಹೆಚ್ಚಿನ ಅಂಕಗಳನ್ನು ಪಡೆದು ಉತ್ತಮ ಜೀವನ ನಿರ್ವಹಣೆಗೆ ಅನುಕೂಲವಾಗುತ್ತದೆಯೆಂದು,ಹೆತ್ತವರು ಮತ್ತು ಶಿಕ್ಷಕರು ಮಕ್ಕಳಿಗೆ ನೀಡುವ ಒತ್ತಡದಿಂದಾಗಿ ಎಳೆಯ ಮುಗ್ಧ ಮಕ್ಕಳ ಮೇಲೆ ಮಾನಸಿಕವಾಗಿ ಹೊರೆಯಾಗಿರುವುದು ನಿಮಗೆಲ್ಲರಿಗೂ ತಿಳಿದಿರುವ ಸತ್ಯ ಸಂಗತಿಯಾಗಿದೆ.


ಇಂತಹ ಸಂದರ್ಭದಲ್ಲಿ ಮಕ್ಕಳು ಒತ್ತಡರಹಿತವಾಗಿ ತಮ್ಮಲ್ಲಿರುವ ಕಲಿಕಾ ಕೌಶಲ್ಯವನ್ನು ಹೆಚ್ಚಿಸಿಕೊಂಡು ವಿದ್ಯಾರ್ಜನೆ ಪಡೆಯುವಂತೆ ಅವರನ್ನು ಪ್ರೇರೆಪಿಸಬೇಕಾಗಿದೆ ಅಲ್ಲವೇ?.ಇದಕ್ಕಾಗಿಯೇ ಅವರನ್ನು ಪ್ರೇರೆಪಿಸುವ ಉದ್ದೇಶದಿಂದ ಅವರ ರಜಾದಿನಗಳನ್ನು ವ್ಯರ್ಥಮಾಡದೆ ಅವರ ಸಂಪೂರ್ಣವಾದ ವ್ಯಕ್ತಿತ್ವ ವಿಕಸನವನ್ನು ಮಾಡಿ ಅವರನ್ನು ರೂಪಿಸುವ ಸಲುವಾಗಿ ಒಂದು ತಿಂಗಳ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ ..



ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಅನುಕೂಲವಾಗುವಂತೆ ಹಾಗೂ ಅವರನ್ನು ಉತ್ತಮ ವಿದ್ಯಾರ್ಥಿಗಳನ್ನಾಗಿ ರೂಪಿಸಲು ನೆರವಾಗುವಂತೆ ವೈವಿಧ್ಯಮಯ ಆಟೋಟಗಳು, ನೃತ್ಯ, ಸಂಗೀತ, ನಾಟಕ ,ಯೋಗ ಮತ್ತು ಧ್ಯಾನ ,ಚಿತ್ರಕಲೆ, ಕರಕುಶಲ ಕಲೆಗಳು, ಕೀಬೋರ್ಡ್, ಟ್ರೆಕ್ಕಿಂಗ್, ಫೋಟೋಗ್ರಾಫಿ,ಕರಾಟೆ, ಮ್ಯಾಜಿಕ್, ಪ್ರವಾಸ, ವ್ಯಕ್ತಿತ್ವ ವಿಕಸನ , ಕಾರ್ಯಕ್ರಮ ನಿರ್ವಹಣೆ,ಝಂಬಾ ಮತ್ತು ಏರೋಬಿಕ್ಸ್ ಮುಂತಾದ ಚಟುವಟಿಕೆಗಳನ್ನು ಈ ಶಿಬಿರದಲ್ಲಿ ನಾವು ಆಯೋಜಿಸಿದ್ದೇವೆ... ನುರಿತ ಶಿಕ್ಷಕರಿಂದ ಮತ್ತು ತರಬೇತುದಾರರಿಂದ ತರಬೇತಿ ನೀಡಲಾಗುವುದು.. 


ಈ ಬೇಸಿಗೆ ಶಿಬಿರವನ್ನು ಏಪ್ರಿಲ್  11ರಿಂದ ಮೇ 11ರವರೆಗೆ ಮೂಡುಬಿದಿರೆಯ ಸಮಾಜ ಮಂದಿರ ಸಭಾ (ರಿ) ಇದರ ಸಭಾಂಗಣದಲ್ಲಿ  ನಡೆಯಲಿದ್ದು , ಈಗಾಗಲೇ ನೋಂದಣಿ ಆರಂಭವಾಗಿದೆ..4ರಿಂದ16 ವರ್ಷ ವಯಸ್ಸಿನ ಮಕ್ಕಳಿಗೆ ಮಾತ್ರ ಈ ಶಿಬಿರದಲ್ಲಿ ಅವಕಾಶವಿದೆ... ಆಸಕ್ತ ಪೋಷಕರು ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

ದೂ: 9880481101,

Post a Comment

0 Comments