ಬನ್ನಡ್ಕ : ಅಂಗನವಾಡಿ ಕಾರ್ಯಕರ್ತೆಗೆ ಬೀಳ್ಕೊಡುಗೆ

ಜಾಹೀರಾತು/Advertisment
ಜಾಹೀರಾತು/Advertisment

 ಬನ್ನಡ್ಕ : ಅಂಗನವಾಡಿ ಕಾರ್ಯಕರ್ತೆಗೆ ಬೀಳ್ಕೊಡುಗೆ



ಮೂಡುಬಿದಿರೆ : ಕಳೆದ 28 ವರ್ಷಗಳ ಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತಿ ಹೊಂದಿರುವ ಬನ್ನಡ್ಕ ಅಂಗನವಾಡಿ ಕೇಂದ್ರದ  ಕಾರ್ಯಕರ್ತೆ ಭಾರತಿ ಜೈನ್ ಅವರನ್ನು  5 ಸ್ತ್ರೀ ಶಕ್ತಿ ತಂಡದ ಸದಸ್ಯರು ಸನ್ಮಾನಿಸಿ ಬೀಳ್ಕೊಟ್ಟರು.

 ಬೀಳ್ಕೊಡುಗೆ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಳುವಾಯಿ ವಲಯದ ಮೇಲ್ವಿಚಾರಕಿ ರತಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ  ಸ್ತ್ರೀ ಶಕ್ತಿ ಸಂಘಗಳು  ರಚನೆಯಾದ ನಂತರ ಮಹಿಳೆಯರು ವ್ಯವಹಾರಿಕವಾಗಿ ಅಭಿವೃದ್ಧಿಯನ್ನು ಹೊಂದಿದ್ದಾರೆ. ಇದರಿಂದಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.  ಪಡುಮಾರ್ನಾಡು ಗ್ರಾಮ ಪಂಚಾಯತ್ ಸದಸ್ಯೆ  ಟೆಸ್ಲಿನಾ,ಬಾಲವಿಕಾಸ ಸಮಿತಿಯ ಮಾಜಿ ಅಧ್ಯಕ್ಷೆ

ಶೋಭಾ ವಸಂತ್ 

ಆಶಾ ಕಾರ್ಯಕರ್ತೆ ಶೋಭಾ ದಿನೇಶ್,  ಅಂಗನವಾಡಿ ಸಹಾಯಕಿ  ಶಾಂತಿ,

ದೀಪಶ್ರೀ, ಭಾಗ್ಯಶ್ರೀ, ಪೂಜಶ್ರೀ,ರಾಜಶ್ರೀ,ತೇಜಶ್ರೀ ಸ್ತ್ರೀ ಶಕ್ತಿ  ಸಂಘದ ಅಧ್ಯಕ್ಷರು,  ಕಾರ್ಯದರ್ಶಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

 

ಸುಮನ ಯಶವಂತ   ಸ್ವಾಗತಿಸಿ,  ಭಾರತಿ ಜೈನ್ ಅವರ ಕಿರು ಪರಿಚಯ ಹಾಗೂ ಸಾಧನೆಯನ್ನು  ವಿವರಿಸಿದರು.  ಭಾರತಿ ಜೈನ್ ಅವರು ಅನಿಸಿಕೆಯನ್ನು ಹಂಚಿಕೊಂಡರು. ರೂಪಕಿರಣ್ ವಂದಿಸಿದರು.

Post a Comment

0 Comments