ವಿರೋಧದ ನಡುವೆಯು ಯಶಸ್ವಿಯಾಗಿ ಸಂಪನ್ನಗೊಂಡ ಹಿಂದೂ ರಾಷ್ಟ್ರಜಾಗೃತಿ ಸಭೆ!⁴

ಜಾಹೀರಾತು/Advertisment
ಜಾಹೀರಾತು/Advertisment

ವಿರೋಧದ ನಡುವೆಯು ಯಶಸ್ವಿಯಾಗಿ ಸಂಪನ್ನಗೊಂಡ ಹಿಂದೂ ರಾಷ್ಟ್ರಜಾಗೃತಿ ಸಭೆ!



'ಧರ್ಮಾಂಧರು ಇನ್ನೂ ಸುಧಾರಿಸಿಕೊಳ್ಳದಿದ್ದರೆ ಈ ಸಭೆಯ ಮುಖಾಂತರ ಎಸ್.ಡಿ.ಪಿ.ಐ. ಸಂಘಟನೆಯನ್ನು ರದ್ದು ಪಡಿಸಲು ಠರಾವು ಕೊಡಬೇಕಾಗಬಹುದು' - ನ್ಯಾಯವಾದಿ ಶ್ರೀ. ಅಮೃತೇಶ್ ಎನ್.ಪಿ.

 ಮಂಗಳೂರು: ದಿನಾಂಕ ೧೨-೦೩-೨೦೨೩, ಭಾನುವಾರ ಸಾಯಂಕಾಲ ೫:೦೦ ಘಂಟೆಗೆ ಮಂಗಳೂರಿನ ಕದ್ರಿ ಮೈದಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರ್ರಜಾಗೃತಿ ಸಭೆಯ ಆಯೋಜನೆಯನ್ನು ಮಾಡಲಾಗಿತ್ತು. ಶಂಖನಾದ, ದೀಪ ಪ್ರಜ್ವಲನೆ ಹಾಗೂ ವೇದ ಮಂತ್ರ ಘೋಷದೊಂದಿಗೆ ಕಾರ್ಯಕ್ರಮದ ಶುಭಾರಂಭ ಮಾಡಲಾಯಿತು.



ಈ ಸಭೆಯ ವಕ್ತಾರರಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾವಾದಿಗಳಾದ ಶ್ರೀ. ಅಮೃತೇಶ್ ಎನ್. ಪಿ., ಸಾಮಾಜಿಕ ಹೋರಾಟಗಾರರಾದ ಶ್ರೀ. ದಿನೇಶ್ ಜೈನ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಹಾಗೂ ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈ ಉಪಸ್ಥಿತರಿದ್ದರು.

ಸಭೆಯಲ್ಲಿ ಸನಾತನ ಸಂಸ್ಥೆಯ ಸಂತರಾದ ಪೂ. ರಮಾನಂದ ಗೌಡ, ಪೂ. ವಿನಾಯಕ ಕರ್ವೆ ಹಾಗೂ ಪೂ. ರಾಧಾ ಪ್ರಭು ಹಾಗೂ ಮೊದಲನೆಯ ಬಾಲಸಂತರಾದ ಪೂ. ಭಾರ್ಗವರಾಮ ಪ್ರಭು , ಇವರ ದಿವ್ಯ ಉಪಸ್ಥಿತಿಯಿತ್ತು.ಕದ್ರಿ ವಾರ್ಡ್ ನ ನಗರ ಪಾಲಿಕೆ ಸದಸ್ಯರಾದ ಶ್ರೀ. ಮನೋಹರ್ ಶೆಟ್ಟಿ, ಪದವು ಸೆಂಟ್ರಲ್ ವಾರ್ಡ ನ ನಗರಸಭಾ ಸದಸ್ಯರಾದ ಶ್ರೀ. ಕಿಶೋರ್ ಕೊಟ್ಟಾರಿ, ಯೋಗ ಗುರುಗಳಾದ ಶ್ರೀ. ಜಗದೀಶ್, ಡಾಕ್ಟರ್ ಆಶಾ ಜ್ಯೋತಿ ರೈ, ಹಿಂದೂ ಯುವ ಸೇನೆಯ ಶ್ರೀ. ಭಾಸ್ಕರ್ ಚಂದ್ರಶೆಟ್ಟಿ, ಉದ್ಯಮಿಯಾದ ಶ್ರೀ. ಗಣೇಶ್ ಬಾಳಿಗ, ಹಿಂದೂ ಜಾಗರಣ ವೇದಿಕೆ ಸುರತ್ಕಲ್, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವೇಶ್ವರಿ, ಸ್ಪಂದನ ಸಂಘಟನೆ ಸುರತ್ಕಲ್, ವೀರಾಂಜನೇಯ ವ್ಯಾಯಾಮ ಶಾಲೆ ಉಳ್ಳಾಲ, ವಿಶ್ವ ಹಿಂದೂ ಪರಿಷತ್ ಬೆಂಗ್ರೆ, ಕೇಸರಿ ತತ್ವ ಬಳಗ ಸುರತ್ಕಲ್, ತುಳುನಾಡ ಸೇನೆಯ ಸೌ. ಜೋತಿ. ಸುಮಾರು 1 ಸಾವಿರ ಜನರು ಸಭೆಯಲ್ಲಿ ಭಾಗವಹಿಸಿದರು. 

'ಪ್ರತಿಯೊಬ್ಬ ಹಿಂದುವೂ ಧರ್ಮಶಿಕ್ಷಣವನ್ನು ಪಡೆದು ಧರ್ಮಾಚರಣೆಯನ್ನು ಮಾಡಿದರೆ ಶೀಘ್ರವೇ ಹಿಂದೂ ರಾಷ್ಟದ ಸ್ಥಾಪನೆಯಾಗುತ್ತದೆ' - ಸೌ. ಲಕ್ಷ್ಮೀ ಪೈ, ಸನಾತನ ಸಂಸ್ಥೆ

ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈ ಇವರು, ಸಭೆಯಲ್ಲಿ ಮಾತನಾಡುತ್ತಾ, ಧರ್ಮಾಚರಣೆಯನ್ನು ಕೃತಿಯಲ್ಲಿ ಮಾಡುವುದರಿಂದ ಉದಾ: ಕುಂಕುಮಧಾರಣೆ, ಕೈ ಜೋಡಿಸಿ ನಮಸ್ಕಾರವನ್ನು ಮಾಡುವುದರಿಂದ, ಹುಟ್ಟುಹಬ್ಬವನ್ನು ಶಾಸ್ತ್ರೋಕ್ತವಾಗಿ ಆಚರಣೆ ಮಾಡುವುದರಿಂದ, ದೇವತಾ ಚೈತನ್ಯವು ಸಿಕ್ಕಿ ಅಧ್ಯಾತ್ಮಿಕ ಲಾಭವಾಗುತ್ತದೆ. ಹಿಂದೂ ರಾಷ್ಟ್ರವನ್ನು ಸಂಖ್ಯಾಬಲದಿಂದ ಅಲ್ಲ, ಅಧ್ಯಾತ್ಮಿಕ ಸಾಮರ್ಥ್ಯವನ್ನು ಹೆಚ್ಚಿಸಿ ನಿರ್ಮಾಣ ಮಾಡಬೇಕು. ಪ್ರತಿಯೊಬ್ಬ ಹಿಂದುವೂ ಧರ್ಮಶಿಕ್ಷಣವನ್ನು ಪಡೆದು ಧರ್ಮಾಚರಣೆಯನ್ನು ಮಾಡಿದರೆ ಶೀಘ್ರವೇ ಹಿಂದೂ ರಾಷ್ಟದ ಸ್ಥಾಪನೆಯಾಗುತ್ತದೆ. ಇವತ್ತು ಜಗತ್ತು ೩ನೇ ಮಹಾಯುದ್ಧದ ಅಂಚಿನಲ್ಲಿದೆ ಹಾಗಾಗಿ ಪರಮಾಣು ಬಾಂಬ್ ಸ್ಫೋಟದಿಂದಾಗುವ ವಿಕಿರಣಗಳಿಂದ ರಕ್ಷಿಸಿಕೊಳ್ಳಲು ಅಗ್ನಿಹೋತ್ರ ಮಾಡುವುದರಿಂದ ರಕ್ಷಣೆಯಾಗುತ್ತದೆ. ಇವತ್ತು, ೧೨ ಮಾರ್ಚ್ ರಂದು ವಿಶ್ವದಾದ್ಯಂತ ಅಗ್ನಿಹೋತ್ರ ದಿನವೆಂದು ಆಚರಣೆ ಮಾಡುತ್ತಾರೆ. ಎಂದು ಮಹತ್ತ್ವದ ವಿಷಯವನ್ನು ತಿಳಿಸಿದರು.

'ಹಿಂದೂಗಳು ಕೇವಲ ಜನ್ಮ ಹಿಂದುಗಳಲ್ಲ ಕರ್ಮ ಹಿಂದೂಗಳಾಗಬೇಕಾಗಿದೆ' - ಶ್ರೀ. ದಿನೇಶ್ ಜೈನ್

ಸಾಮಾಜಿಕ ಹೋರಾಟಗಾರರಾದ ಶ್ರೀ. ದಿನೇಶ್ ಜೈನ್ ಇವರು ಎಲ್ಲಾ ಹಿಂದೂಗಳು ಜಾತಿ, ಮತ, ಸಂಪ್ರದಾಯ, ಸಂಘಟನೆಗಳ ಹೆಸರನ್ನು ಮರೆತು, ಏಕಮನಸ್ಕರಾಗಿ ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ ಒಟ್ಟಾಗಬೇಕಾಗಿದೆ. ಹಿಂದೂ ರಾಷ್ಟ್ರವನ್ನು ಯಾವುದೇ ರಾಜಕೀಯ ಪಕ್ಷದಿಂದ ಸ್ಥಾಪನೆ ಮಾಡಲು ಸಾಧ್ಯವಿಲ್ಲ, ಸಂಘಟಿತ ಹಿಂದೂಗಳೇ ಈ ಮಹಾನ್ ಕಾರ್ಯವನ್ನು ಮಾಡಬಲ್ಲರು, ಅದಕ್ಕಾಗಿ ಎಲ್ಲಾ ಹಿಂದೂಗಳು ಕೇವಲ ಜನ್ಮ ಹಿಂದುಗಳಲ್ಲ ಕರ್ಮ ಹಿಂದೂಗಳಾಗಬೇಕಾಗಿದೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯು ’ಹಿಂದುತ್ತ್ವದ ಫ್ಯಾಕ್ಟರಿ’ಯಾಗಿದೆ ಎಂದು ತಿಳಿಸಿದರು.

'ಹಿಂದೂ ರಾಷ್ಟ್ರ ಸಭೆಯ ಮುಖಾಂತರ ನಾವು ಹಿಂದೂರಾಷ್ಟ್ರ ನಿರ್ಮಾಣಕ್ಕಾಗಿ ಕಾನೂನು ಬದ್ಧವಾಗಿ ಹೋರಾಟ ಮಾಡುತ್ತೇವೆ' - ನ್ಯಾಯವಾದಿ ಶ್ರೀ. ಅಮೃತೇಶ್ ಎನ್.ಪಿ.

ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಶ್ರೀ. ಅಮೃತೇಶ್ ಎನ್.ಪಿ. ಇವರು ಮಾತನಾಡುತ್ತಾ ಧರ್ಮಾಂಧರು ಇನ್ನೂ ಸುಧಾರಿಸಿಕೊಳ್ಳದಿದ್ದರೆ ಈ ಸಭೆಯ ಮುಖಾಂತರ ಎಸ್.ಡಿ.ಪಿ.ಐ. ಸಂಘಟನೆಯನ್ನು ರದ್ದು ಪಡಿಸಲು ಠರಾವು ಕೊಡಬೇಕಾಗಬಹುದು. ಧರ್ಮಕ್ಕೆ ಕೈ ಹಾಕಿದಲ್ಲಿ ಧರ್ಮಚಕ್ರವು ನಿಮ್ಮನ್ನು ಬಿಡುವುದಿಲ್ಲ. ಹಿಂದೂ ರಾಷ್ಟ್ರ ಸಭೆಯ ಮುಖಾಂತರ ನಾವು ಹಿಂದೂರಾಷ್ಟ್ರ ನಿರ್ಮಾಣಕ್ಕಾಗಿ ಕಾನೂನು ಬದ್ಧವಾಗಿ ಹೋರಾಟ ಮಾಡುತ್ತೇವೆ. ಹಿಂದುತ್ತ್ವದ ಅಡಿಯಲ್ಲಿ ನಾವೆಲ್ಲರೂ ಒಂದಾಗೋಣ ಎಂದು ತಿಳಿಸಿದರು.
 
'ಭಾರತವು ಹಲವಾರು ದೇಶದ ಜನರಿಗೆ ಆಶ್ರಯ ನೀಡಿದೆ, ಆದರೆ ಹಿಂದೂಗಳಿಗೆ ಆಶ್ರಯ ನೀಡುವ ಒಂದೇ ಒಂದು ಹಿಂದೂ ರಾಷ್ಟ್ರವೂ ಇಲ್ಲ' - ಶ್ರೀ. ಗುರುಪ್ರಸಾದ ಗೌಡ, ಹಿಂದೂ ಜನಜಾಗೃತಿ ಸಮಿತಿ

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುಪ್ರಸಾದ ಗೌಡ ಇವರು ಮಾತನಾಡುತ್ತಾ ಬಹುಸಂಖ್ಯಾತರ ರಕ್ಷಣೆಗಾಗಿ, ಹಿಂದೂರಾಷ್ಟ್ರ ನಿರ್ಮಾಣಕ್ಕಾಗಿ ಇಂದಿನ ರಾಷ್ಟ್ರಜಾಗೃತಿ ಸಭೆಯ ಆಯೋಜನೆಯಾಗಿದೆ. ಹಿಂದೂ ಧರ್ಮದ ಮೇಲೆ ಆಗುತ್ತಿರುವ ಆಘಾತಗಳ ಬಗ್ಗೆ ಹೇಳುತ್ತಾ ಧರ್ಮಾಂಧರ ಜಿಹಾದಿ ಮಾನಸಿಕತೆಯಿಂದ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಹಲಾಲ್ ಜಿಹಾದ್, ಇವುಗಳ ಮೂಲಕ ಯಾವ ರೀತಿ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು. ಕಳೆದ ೨೦ ವರ್ಷಗಳಿಂದ ಹಿಂದೂ ರಾಷ್ಟ್ರ ನಿರ್ಮಾಣದ ಬೇಡಿಕೆಯನ್ನು ಸಮಿತಿಯು ಮಾಡುತ್ತಿರುವುದರ ಪರಿಣಾಮವಾಗಿ ಎಲ್ಲಾ ಹಿಂದೂ ಸಂಘಟನೆಗಳು ಈಗ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಾಡುತ್ತಿದ್ದಾರೆ. ಭಾರತವು ಹಲವಾರು ದೇಶದ ಜನರಿಗೆ ಆಶ್ರಯ ನೀಡಿದೆ, ಆದರೆ ಹಿಂದೂಗಳಿಗೆ ಆಶ್ರಯ ನೀಡುವ ಒಂದೇ ಒಂದು ಹಿಂದೂ ರಾಷ್ಟ್ರವೂ ಇಲ್ಲ. ಈ ಪುಣ್ಯಭೂಮಿಯಲ್ಲಿ ಹಿಂದೂ ರಾಷ್ಟ್ರದ ಸೂರ್ಯನ ಉದಯವನ್ನು ನೋಡಲು ನಾವೆಲ್ಲರೂ ತನು, ಮನ, ಧನ ಮತ್ತು ಅಗತ್ಯವಿದ್ದರೆ ಸರ್ವಸ್ವವನ್ನೂ ಸಮರ್ಪಣೆ ಮಾಡಬೇಕಾಗಿದೆ. ನಾವೆಲ್ಲರೂ ಸಂಘಟಿತ ಪ್ರಯತ್ನ ಮಾಡಿದಲ್ಲಿ ಹಿಂದೂ ರಾಷ್ಟ್ರದ ಮುಂಜಾವು ದೂರವಿಲ್ಲ. ಹಿಂದೂ ರಾಷ್ಟ್ರ ನಿರ್ಮಾಣವಾದರೆ ಮಾತ್ರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುವುದು.ಎಂದರು.

Post a Comment

0 Comments