ಶಿರ್ತಾಡಿ : ರೂ 9.97 ಕೋ ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟಿಗೆ ಶಿಲಾನ್ಯಾಸ

ಜಾಹೀರಾತು/Advertisment
ಜಾಹೀರಾತು/Advertisment

 ಶಿರ್ತಾಡಿ : ರೂ 9.97 ಕೋ ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟಿಗೆ ಶಿಲಾನ್ಯಾಸ



ಮೂಡುಬಿದಿರೆ: ಹೊಸಂಗಡಿ- ಶಿರ್ತಾಡಿಗೆ ಸಂಪರ್ಕ ಕಲ್ಪಿಸುವ ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ  ಪಾಪೆ ಎಂಬಲ್ಲಿ ರೂ  9.97 ಕೋ.ವೆಚ್ಚದಲ್ಲಿ ನಿರ್ಮಾಣವಾಗಲಿರುವ  ಸೇತುವೆ ಸಹಿತ ಕಿಂಡಿ ಅಣೆಕಟ್ಟಿಗೆ ಶಾಸಕ ಉಮಾನಾಥ ಎ.ಕೋಟ್ಯಾನ್ ಶನಿವಾರ ಗುದ್ದಲಿಪೂಜೆ ನೆರವೇರಿಸಿದರು.

  ನಂತರ ಮಾತನಾಡಿದ ಕೋಟ್ಯಾನ್ 

ಈ ಕಿಂಡಿ‌ ಅಣೆಕಟ್ಟು  ಕ್ಷೇತ್ರದಲ್ಲಿ ದೊಡ್ಡದಾದ ಡ್ಯಾಂ ಇದಾಗಿದೆ. ಇಲ್ಲಿನ  ಜನರ ಬಹಳ ವರ್ಷಗಳ ಹಿಂದಿನ ಬೇಡಿಕೆಯಾಗಿದ್ದು ಈ ಭಾಗದ ಕೃಷಿಕರಿಗೆ ಮತ್ತು ಕುಡಿಯುವ ನೀರಿಗೆ ಎರಡಕ್ಕೂ ಲಾಭದಾಯಕವಾಗಿ ಡ್ಯಾಂ ನಿರ್ಮಾಣವಾಗಬೇಕೆಂಬ ನಿಟ್ಟಿನಲ್ಲಿ  ನೆರವೇರಿಸಲಾಗಿದೆ.

 ಈ ಕಿಂಡಿ‌ ಅಣೆಕಟ್ಟು  ನಿರ್ಮಾಣದಿಂದಾಗಿ ಶಿರ್ತಾಡಿ ಮತ್ತು ಹೊಸಂಗಡಿ  ನದಿಗಳು ಬಂದು  ಸೇರುತ್ತವೆ. ನೀರಿನ ಹೊಳಹರಿವು ಹೆಚ್ಚಾಗಿ ಸುತ್ತಮುತ್ತಲಿರುವ 200 ಎಕರೆ ಕೃಷಿ ಭೂಮಿಗೆ ಪ್ರಯೋಜನವಾಗಲಿದ್ದು  ಬಾವಿಗಳಲ್ಲಿ, ಕೊಳವಿ ಬಾವಿಗಳಲ್ಲಿ ನೀರು ದೊರಕಲು  ಸುಲಭವಾಗುತ್ತದೆ. ಈಗಾಗಲೇ ಕ್ಷೇತ್ರದಲ್ಲಿ ಸುಮಾರು 100 ಕೋಟಿ ಯಷ್ಟು ಅಧಿಕ ಅನುದಾನದಲ್ಲಿ ಡ್ಯಾಂಗಳನ್ನು, ಸೇತುವೆಗಳನ್ನು ನಿರ್ಮಿಸಿ  ಗ್ರಾಮ-ಗ್ರಾಮಗಳನ್ನು ಜೋಡಿಸುವಂತಹ ಕೆಲಸವನ್ನು ಮಾಡಲಾಗಿದೆ ಎಂದರು.


 ಹೊಸಂಗಡಿ ಅರಮನೆಯ ಸುಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಕಾರ್ಯಲಯ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ, ಶಿರ್ತಾಡಿ ಗ್ರಾ.ಪಂ.ಸದಸ್ಯರಾದ ದೇವಕಿ, ರಾಜೇಶ್ ಫೆರ್ನಾಂಡಿಸ್, ಪುರಸಭಾ ಸದಸ್ಯೆ ಧನಲಕ್ಷ್ಮೀ, ನಾಮ ನಿರ್ದೇಶಿತ ಸದಸ್ಯ ದಿನೇಶ್ ಪೂಜಾರಿ,  ಹೊಸಂಗಡಿ ಗ್ರಾ.ಪಂ.ಸದಸ್ಯ ಶ್ರೀಪತಿ ಭಟ್,  ಮಾಜಿ ಅಧ್ಯಕ್ಷ ಹರಿಪ್ರಸಾದ್, ಸದಸ್ಯ ಶಂಕರ್ ಪೂಜಾರಿ,  ಹೊಸಂಗಡಿ ಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟ್ರಾಜ ಅಸ್ರಣ್ಣ,  ಕಂದಿರು ದೇವಸ್ಥಾನದ ಆಡಳಿತ ಮೊಕ್ತೇಸರ ಸೋಮನಾಥ ಶಾಂತಿ, ಉದ್ಯಮಿ ಸುಕೇಶ್ ಕಂದೀರು, ಊರಿನ ಹಿರಿಯರಾದ ಮಂಜುನಾಥ ಶೇಷಗಿರಿ ಶೇಟ್ ಎಂಜಿನಿಯರ್ ರಾಕೇಶ್, ಗುತ್ತಿಗೆದಾರ ಗೋಕುಲ್ ಕುಂದಾಪುರ ಈ ಸಂದರ್ಭದಲ್ಲಿದ್ದರು.

Post a Comment

0 Comments