ಮಾ.18 : ಹಿಂದೂ ಸಂಘಟನೆಗಳಿಂದ ಮೂಡುಬಿದಿರೆಯಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ
ಮೂಡುಬಿದಿರೆ: ಹಿಂದುತ್ವಕ್ಕಾಗಿ ಹುತಾತ್ಮರಾಗಿರುವ ದಿ| ಸುಖಾನಂದ ಶೆಟ್ಟಿ ಮತ್ತು ದಿ| ಪ್ರಶಾಂತ್ ಪೂಜಾರಿ ಅವರ ಸ್ಮರಣಾರ್ಥವಾಗಿ ಹಿಂದೂ ಜಾಗರಣ ವೇದಿಕೆ, ಹಿಂದು ಯುವವಾಹಿನಿ ಮಂಗಳೂರು ಗ್ರಾಮಾಂತರ ಜಿಲ್ಲೆ, ಕರಾವಳಿ ಕೇಸರಿ ಸೇವಾ ಟ್ರಸ್ಟ್ ಬೆದ್ರ ಇವುಗಳ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಬ್ಬಡಿ ಅಮೆಚೂರ್ ಅಸೋಸಿಯೇಷನ್ ಇವರ ಸಹಯೋಗದಲ್ಲಿ ಹಿಂದು ಬಾಂಧವರಿಗಾಗಿ ೬೦ ಕೆ.ಜಿ ವಿಭಾಗದ ಮುಕ್ತ ಮಾದರಿಯ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ -೨೦೨೩ವು ಮಾ.18ರಂದು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.
ದಿ| ಸುಖಾನಂದ ಶೆಟ್ಟಿಯವರ ಸಹೋದರ ಸಂತೋಷ್ ಶೆಟ್ಟಿ ಮತ್ತು ದಿ| ಪ್ರಶಾಂತ್ ಪೂಜಾರಿಯವರ ಮಾತೃಶ್ರೀ ಯಶೋಧ ಅವರು ಪಂದ್ಯಾಟವನ್ನು ಉದ್ಘಾಟಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಗೂ ಮತ್ತಿತರ ಗಣ್ಯರುಗಳು ಕಬ್ಬಡಿ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.
0 Comments