ಭಾರತೀಯ ಜನತಾ ಪಾರ್ಟಿಯ ಬೂತ್ ವಿಜಯ ಅಭಿಯಾನ ಕಾರ್ಯಕ್ರಮವು ಮೂಡುಬಿದಿರೆ ಮಂಡಲದ ಪಣಪಿಲ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯೆ ಹಾಗೂ ಬಿಜೆಪಿ ಹಿರಿಯ ಕಾರ್ಯಕರ್ತೆ ಶ್ರೀಮತಿ ಪುಷ್ಪಾ ರಮಾನಂದ ರವರ ಮನೆಯಲ್ಲಿ ನಡೆಯಿತು.
ನೇರಳಕಟ್ಟೆಯಿಂದ ವಾಹನ ಜಾಥಾ ಮೂಲಕ ಪುಷ್ಪಾ ರಮಾನಂದ ರವರ ಮನೆಗೆ ತೆರಳಿ ಅಲ್ಲಿ ಸಭಾ ಕಾರ್ಯಕ್ರಮ ನೆರವೇರಿಸಿ ನಂತರ ಬಿಜೆಪಿ ಧ್ವಜಾರೋಹಣ ಮಾಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಸದಸ್ಯರಾದ ಸತೀಶ್ ಮರವೂರುರವರು ವಿಸ್ತಾರಕರಾಗಿ ಆಗಮಿಸಿದ್ದು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಪಣಪಿಲ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರಾದ ದೀಕ್ಷಿತ್ ಪಣಪಿಲ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಪಣಪಿಲ ಶಕ್ತಿಕೇಂದ್ರದ ಅಧ್ಯಕ್ಷರಾದ ಮುನಿರಾಜ್ ಹೆಗ್ಡೆ, ಮೂಲ್ಕಿ ಮೂಡುಬಿದಿರೆ ಮಂಡಲ ಬಿಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸುಧಾಕರ ಡಿ.ಪೂಜಾರಿ, ಯುವಮೋರ್ಚಾ ಅಧ್ಯಕ್ಷರಾದ ಅಶ್ವಥ್ ಪಣಪಿಲ,ಹಿರಿಯರಾದ ನಾಗೇಂದ್ರ ಪೂಜಾರಿ,ಸದಾನಂದ ಪೂಜಾರಿ ಹಾಗೂ ಇತರೆ ಪ್ರಮುಖರು ಉಪಸ್ಥಿತರಿದ್ದರು.
0 Comments