ಇರುವೈಲಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಆಳ್ವಾಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಬೃಹ್ಮಶ್ರೀ ನಾರಾಯಣಗುರು  ಸೇವಾ ಸಂಘದಲ್ಲಿ ಇರುವೈಲು ಇವುಗಳ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು  ಬ್ರಹ್ಮಶ್ರೀ ನಾರಾಯಣಗುರು ಸಂಘದ ಸಭಾಭವನದಲ್ಲಿ ರವಿವಾರ ನಡೆಯಿತು.

ಮಧುಮೇಹ( ಡಯಾಬಿಟಿಸ್ ), ಅಧಿಕ ರಕ್ತದೊತ್ತಡ( ಬಿಪಿ ), ಸ್ತ್ರೀ ರೋಗ, ಮಕ್ಕಳ ರೋಗಗಳು, ಗಂಟು ನೋವು,  ಮೂಳೆ ಸವೆತ,ಬೆನ್ನು ನೋವು, ಅಲರ್ಜಿ,ಗ್ಯಾಸ್ಟ್ರಿಕ್, ನೆಗಡಿ, ಕೆಮ್ಮು, ಗಂಟಲು ನೋವು, ಜ್ವರ, ಹಾಗೂ ಇನ್ನಿತರ ರೋಗಗಳಿಗೆ ತಜ್ಞ ವೈದ್ಯರಿಂದ  ತಪಾಸಣೆಗೆ ನಡೆಸಿ ಸೂಕ್ತ ಔಷಧಿಗಳನ್ನು ನೀಡಲಾಯಿತು. 

ಬ್ರಹ್ಮಶ್ರೀ  ನಾರಾಯಣ ಗುರು ಮಂದಿರದ ಅಧ್ಯಕ್ಷ ಕುಮಾರ್ ಪೂಜಾರಿ,

ಮಹಿಳಾ ಘಟಕ ಅಧ್ಯಕ್ಷೆ ದೀಪ ದಿನೇಶ್, 

ಆಳ್ವಾಸ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜ್ ನ ಮುಖ್ಯ ಗ್ರಂಥಪಾಲಕ

 ಗಿರೀಶ್ ಕೋಟ್ಯಾನ್ ಮಾರೂರು, ವೈದ್ಯರುಗಳಾದ ಬಿಬಿ ಅಸ್ಮಾ ದೇಸಾಯಿ, ರಬಿಯಾ ಬಶ್ರಿ, ಮೋನಿಕಾ ಮೊಸೆಸ್ ಲೋಬೊ, ಸ್ರುತಮ್ .ಪಿ ಹಾಗೂ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಂಡರು.

Post a Comment

0 Comments