ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಹನ್ನೆರಡು ಕವಲು ದೇವಸ್ಥಾನಕ್ಕೆ 1 ಲಕ್ಷದ ಚೆಕ್ ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಮಾರೂರು ಗ್ರಾಮದ ನೆತ್ತೊಡಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ  ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಹನ್ನೆರಡು ಕವಲು ಇಲ್ಲಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ೧ ಲಕ್ಷದ ಅನುದಾನವನ್ನು ತಾಲೂಕಿನ ಯೋಜನಾಧಿಕಾರಿ ನಾರಾಯಣ ಶೆಟ್ಟಿಯವರು ಮಂಗಳವಾರ ವಿತರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸದಾಶಿವ ಭಟ್ ರವರು ಗಣ್ಯರಾದ ಸದಾನಂದ ಸುವರ್ಣ, ಗಂಗಾಧರ ಶೆಟ್ಟಿ, ಶಿವರಾರಿ ಭಂಡಾರಿ, ಪುರಸಭಾ ಸದಸ್ಯರಾದ ದಿನೇಶ್ ಮಿತ್ತೊಟುಗುತ್ತು ಸುಧಾಕರ ಶೆಟ್ಟಿ, ಶ್ರೀಧರ ಕೆ ಮೇಲ್ವಿಚಾರಕರಾದ ಮಮತಾ, ಸಢನಾಪ್ರತಿನಿಧಿ ನಿರ್ಮಲ ಒಕ್ಕೂಟದ ಅಧ್ಯಕ್ಷರುಗಳಾದ ರಮೇಶ್, ಪ್ರೇಮ ಮತ್ತು  ಗ್ರಾಮಸ್ಥರು ಉಪಸ್ಥಿತರಿದ್ದರು.

Post a Comment

0 Comments