ಎಳ್ಳಮಾವಾಸ್ಯೆಯ ತೀರ್ಥಸ್ನಾನ ಮಾಡಲು ಮುಗಿಬಿದ್ದ ಭಕ್ತಾದಿಗಳು

ಜಾಹೀರಾತು/Advertisment
ಜಾಹೀರಾತು/Advertisment

 ಎಳ್ಳಮಾವಾಸ್ಯೆಯ ತೀರ್ಥಸ್ನಾನ ಮಾಡಲು ಮುಗಿಬಿದ್ದ ಭಕ್ತಾದಿಗಳು

ಮೂಡುಬಿದಿರೆ: ಮೂಡುಬಿದಿರೆಯಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ತಾಕೊಡೆಯ ಬಳಿಯ ಹನ್ನೆರಡು ಕವಲು ದೇವಾಲಯದಲ್ಲಿ ವರ್ಷಾಂಪ್ರತಿ ನಡೆಯುವ ಎಳ್ಳಮಾವಾಸ್ಯೆಗೆ ಇಲ್ಲಿ ಸಾವಿರಾರು ಭಕ್ತರು ಆಗಮಿಸಿ, ದೇವರಿಗೆ ಹಣ್ಣುಕಾಯಿ ಪೂಜೆ ಸಲ್ಲಿಸಿ ತದ ನಂತರ ನದಿಯ ನಡುವಿನಲ್ಲಿರುವ ಪಂಚಮಹಾಲಿAಗೇಶ್ವರ ದೇವಾಲಯಕ್ಕೆ ಪೂಜೆಗೈದು ನದಿಯಲ್ಲಿ ದಾನ ಬಿಟ್ಟು ನದಿಯಲ್ಲಿ ಪವಿತ್ರ ಸ್ನಾನಗೈದು ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಈ ದೇವಾಲಯದಲ್ಲಿ ವರ್ಷಾಂಪ್ರತಿಯು ಮುಂಜಾನೆ 5 ಗಂಟೆಗೆ ಎಳ್ಳಮಾವಾಸ್ಯೆ ಸ್ನಾನಕ್ಕೆ ಬರಲಾರಂಭಿಸಿದರೆ ನಿರಂತರವಾಗಿ ದೂರದ ಊರುಗಳಿಂದ ಭಕ್ತಾಧಿಗಳು ಬಂದು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ದೂರ ಮಾಡೆಂದು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಈ ದೇವಾಲಯದ ವಿಶೇಷತೆಯೇನೆಂದರೆ ಈ ದೇವಾಲಯದ ಸುತ್ತಲೂ ನದಿಗಳು ಹರಿಯುತ್ತಿರುವುದರಿಂದ ನಡುವಿನಲ್ಲಿ ಪಂಚ ಲಿಂಗಗಳನ್ನೊಳಗೊಂಡ ದೇಗುಲವಿದೆ. ಇಲ್ಲಿ ಮುಡಿ ತೆಗಿಯುವ ಕಾರ್ಯವೊಂದನ್ನು ಬಿಟ್ಟು ಎಲ್ಲಾ ಕಾರ್ಯಗಳು ನಡೆಯುತ್ತದೆ. 

ಈ ಪಂಚಲಿಂಗೇಶ್ವರ ದೇವಾಲಯದಲ್ಲಿ ನದಿಯ ಹಿಂಬದಿಯಲ್ಲಿ ಅಮ್ಮನ ಹೊಟ್ಟೆ(ಅಮ್ಮನ ಬಂಜಿ) ಎಂದೇ ಹೆಸರು. ಈ ಗುಹೆಯಲ್ಲಿ ಎಷ್ಟೇ ದಪ್ಪಗಿದ್ದರೂ-ಸಣ್ಣಗಿದ್ದಾರೂ ಸಲೀಸಾಗಿ ಗುಹೆಯೊಳಗೆ ಹೋಗಿ ಹೊರ ಬರಬಹುದು. ಇದರಿಂದ ಮನುಷ್ಯನು ಶಾರಿರೀಕವಾಗಿ ಶಕ್ತನಾಗಿರುತ್ತನೆ ಹಾಗೂ ನೆಮ್ಮದಿಯಿಂದ ಇರುತ್ತೇನೆಂದು ಇಲ್ಲಿನ ಜನರ ನಂಬಿಕೆಯಾಗಿದೆ. ಹಾಗಾಗಿ ಪ್ರತೀ ವರ್ಷವೂ ಸ್ಥಳೀಯರು ಮಾತ್ರವಲ್ಲದೇ ದೂರದ ಊರುಗಳಿಂದಲೂ ಭಕ್ತಾರ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚಾಗಿ ಬಂದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಬೇಡಿಕೊಳ್ಳುತ್ತಾರೆ.

ಮೃಕಾಂಡು ಮುನಿಗಳು ತಪಸ್ಸು ಮಾಡಿದ ಜಾಗದಲ್ಲಿ ಕ್ರಮೇಣವಾಗಿ ಪಾಂಡವರು ಇಲ್ಲಿ  5 ಶಿವಲಿಂಗಗಳನ್ನು ಪ್ರತಿಷ್ಠೆ ಮಾಡಿರುವುದರಿಂದ ನದಿಯ ನಡುವಿನಲ್ಲಿನಲ್ಲಿ ದೇವಾಲಯವನ್ನು ಕಟ್ಟಿ ಪ್ರತಿಷ್ಠೆ ಮಾಡಿರುವ ಸ್ಥಳ ಇದಾಗಿದೆ. ಆದ್ದರಿಂದ ಇಂದಿಗೂ ಎಳ್ಳಮಾವಾಸ್ಯೆ ತೀರ್ಥಸ್ನಾನದಂದು ಅದೇ ಶಿವಲಿಂಗಗಳಿಗೆ ಪೂಜೆ ಸಲ್ಲಿಸಿ, ಕಾಶಿಯ ಗಂಗೆಯ ಪುಣ್ಯ ಇಲ್ಲಿ ಸಿಗುತ್ತದೆಂಬ ನಂಬಿಕೆ. ಹಾಗೂ ಯಾರೆಲ್ಲಾ ಹಿರಿಯ ಜೀವಿಗಳು ತೀರಿಕೊಂಡಿದ್ದಾರೆ ಅವರಿಗೆ ಮೋಕ್ಷ ಸಿಗದೇ ಹೋದರೆ ಪಿಂಡಪ್ರಧಾನಗಳನ್ನು ಮಾಡಿದರೆ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಮೋಕ್ಷ ಸಿಗುತ್ತದೆಂಬುದನ್ನು ಹಿಂದಿನ ಮೃಕಾಂಡ ಪುರಾತನದಲ್ಲಿ ಉಲ್ಲೇಖಿಸಲಾಗಿದೆ

ಈ ದೇವಾಲಯವು ತೀರಾ ಹಳ್ಳಿಯ ನಡುವೆ ಇರುವುದರಿಂದ ಇಲ್ಲಿನ ಕಾರಣಿಕತೆಯ ಕುರಿತು ಜನರಿಗೆ ಅಷ್ಟೊಂದು ಮಾಹಿತಿ ತಿಳಿದಿಲ್ಲದಿದ್ದರೂ, ಇಲ್ಲಿ ಬಂದು ತಮ್ಮ ಕೋರಿಕೆಯನ್ನು ಈಡೇರಿಸಿಕೊಂಡವರ ಮಾತಿನಿಂದ ಇಲ್ಲಿ ಯಾವುದೇ ಪ್ರಚಾರವಿಲ್ಲದಿದ್ದರೂ ಹೆಚ್ಚು ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ಇದೀಗ ಈ ದೇವಾಲಯದ ಜೀರ್ಣೋದ್ಧಾರ ಕೆಲಸಗಳು ನಡೆಯುತ್ತಿದೆ.


Post a Comment

0 Comments