ಪ್ರಧಾನಿ ನರೇಂದ್ರ ಮೋದಿಯವರ ಮಾತೃಶ್ರೀ ಶ್ರೀಮತಿ ಹೀರಾಬೆನ್ ರವರು ಇಂದು ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದ್ದು ರಾಷ್ಟ್ರದಲ್ಲೆಡೆ ಸಂತಾಪ ವ್ಯಕ್ತವಾಗಿದೆ ಈ ನಡುವೆ ಮೋದಿಯವರ ಇಂದಿನ ನಡೆ ಮತ್ತು ಅವರ ಕೆಲಸದ ಮೇಲಿರುವ ಶ್ರದ್ದೆಯನ್ನು ಕಂಡು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಹೊಗಳಿದ್ದಾರೆ. ಸದಾ ನರೇಂದ್ರ ಮೋದಿಯವರನ್ನು ಕಠೋರವಾಗಿ ಟೀಕಿಸುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಇಂದು ನರೇಂದ್ರ ಮೋದಿ ಅವರ ನಡೆಯ ಕುರಿತ ಅಚ್ಚರಿ ಹಾಗೂ ಪ್ರೀತಿಪೂರ್ವಕ ಮಾತುಗಳನ್ನು ಆಡಿದ್ದಾರೆ. ನರೇಂದ್ರ ಮೋದಿಯವರು ಈಗ ತಾನೆ ಮಾತೃಶ್ರೀ ಅವರನ್ನು ಕಳೆದುಕೊಂಡಿದ್ದೀರಿ ನಿಮಗೀಗ ಮಾನಸಿಕ ವಿಶ್ರಾಂತಿಯ ಅಗತ್ಯವಿದೆ. ದಯವಿಟ್ಟು ತಾವು ವಿಶ್ರಾಂತಿಯನ್ನು ಪಡೆದುಕೊಳ್ಳಿ ಸದಾ ಕೆಲಸದ ಬಗ್ಗೆ ಯೋಚಿಸುತ್ತಿರುವ ನೀವು ನಿಮ್ಮ ಬಗ್ಗೆಯೂ ಸ್ವಲ್ಪ ಯೋಚಿಸಿ.
ತಮ್ಮ ಮಾತೃಶ್ರೀಯವರ ಸಂಸ್ಕಾರದ ವಿಧಾನವನ್ನು ಮುಗಿಸಿದ ಕೂಡಲೇ ನಮ್ಮ ರಾಜ್ಯಕ್ಕೆ 8,000 ಕೋಟಿ ರೂಪಾಯಿಯ ವಿವಿಧ ಯೋಜನೆಗಳನ್ನು ಜಾರಿಗೊಳಿಸಿರುವುದು ಅಭಿನಂದನಾರ್ಹ ಆದರೆ ತಾವು ವಿಶ್ರಾಂತಿಯನ್ನು ಪಡೆದುಕೊಳ್ಳಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ ಎಂದು ಮಮತಾ ಬ್ಯಾನರ್ಜಿಯವರು ಮೋದಿಯವರಿಗೆ ಹಿತ ನುಡಿಗಳನ್ನು ಹೇಳಿದ್ದಾರೆ. ಈ ಮೂಲಕ ಭಾರತದ ರಾಜಕೀಯದಲ್ಲಿ ಅತಿ ವಿರೋಧಿಗಳು ಕೆಲವೊಂದು ಸಮಯದಲ್ಲಿ ವಿರೋಧಿಗಳ ಪರವಾಗಿ ನಿಲ್ಲುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
0 Comments