ಜಾಂಬೂರಿಯಲ್ಲಿ ವಿದ್ಯಾರ್ಥಿಗಳಿಂದ ಅಚ್ಚರಿಯ ವೈಜ್ಞಾನಿಕ ಮೊಡಲ್‌ಗಳ ಪ್ರದರ್ಶನ
ಮೂಡುಬಿದಿರೆ: ಅಂತಾರಾಷ್ಟ್ರೀಯ
ಸಾಂಸ್ಕೃತಿಕ ಜಾಂಬೂರಿಯು ಮೂರು ದಿನಗಳಿಂದ ವಿಜೃಂಭಣೆಯಿಂದ ನಡೆಯುತ್ತಿದ್ದು, ಜಾಂಬೂರಿಯಲ್ಲಿ ವಿಶೇಷವಾಗಿ ವಿಜ್ಞಾನ ಮೇಳವನ್ನು ಆಯೋಜಿಸಲಾಗಿದ್ದು, ಸ್ವತಃ ವಿದ್ಯಾರ್ಥಿಗಳೇ ಹೊಸ ಆವಿಷ್ಕಾರಗಳನ್ನು ಮಾಡಿ ಬೆಳವಣಿಗೆಯಾಗುತ್ತಿರುವ ಜಗತ್ತಿನಲ್ಲಿ ಅತೀ ಸುಲಭವಾಗಿ ಕೆಲಸ-ಕಾರ್ಯಗಳನ್ನು ನಡೆಸಲು, ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸುವ ವಿಧಾನವನ್ನು ತಯಾರಿಸಿ ಪ್ರದರ್ಶನಕ್ಕಾಗಿ ಇಟ್ಟು ಅದರ ಪ್ರಯೋಜನಗಳ ಕುರಿತು ಅಚ್ಚುಕಟ್ಟಾಗಿ ವಿವರಣೆಯನ್ನು ನೀಡಿ ನೋಡುಗರನ್ನು ದಿಗ್ಮಾçಮೆಗೊಳ್ಳುವಂತೆ ಮಾಡಿದ್ದಾರೆ.ದಿಕ್ಷೀತ್ ಹಾಗೂ ಪ್ರೇಕ್ಷಿತ್ ರಾಮಕುಂಜರವರ ವಿದ್ಯುತ್ ನಿಯಂತ್ರಿತ ಮನೆಯನ್ನು ಪ್ರಯೋಗಿಕವಾಗಿ ನಿರ್ಮಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕೋವಿಡ್‌ನಂತಹ ಮಾರಕ ಕಾಯಿಲೆಗಳು ಬಂದರೆ ಜ್ವರದ ಗುಣಲಕ್ಷಣಗಳನ್ನು ಹೊಂದಿದ್ದರೆ ಪರೀಕ್ಷೆ ಮಾಡಲು ವಿದ್ಯುನ್ಮಾನ ನಿರ್ಮಿತ ಗೇಟ್‌ನ ಪರೀಕ್ಷಿಸಿ ಜ್ವರದ ಲಕ್ಷಣಗಳಿದ್ದರೆ ತೆರೆದುಕೊಳ್ಳುವುದಿಲ್ಲ. ಜ್ವರದ ಲಕ್ಷಣಗಳಿಲ್ಲದೇ ಹೋದರೆ ತನ್ನಷ್ಟಕ್ಕೆ ಮನೆ ಬಾಗಿಲು ತೆರೆದುಕೊಳ್ಳುತ್ತದೆಂಬ ಹೊಸ ಅಲೋಚನೆಯನ್ನು ಇಟ್ಟುಕೊಂಡು ಈ ಪ್ರಯತ್ನವನ್ನು ಮಾಡಿದ್ದಾರೆ.
ಮಂಗಳೂರು ಶಾರಾದ ವಿದ್ಯಾಲಯದ ಮಯೂರ್ ನಾಯಕ್ ಅವರ ಮಣ್ಣುಕುಸಿತವಾಗುವುದನ್ನು ತಡೆಯುವುದಕ್ಕಾಗಿ ಲ್ಯಾಂಡ್‌ಸ್ಲೈಂಡ್
ಡಿಟೆಕ್ಟರ್ ತಂತ್ರಜ್ಞಾನ ತಯಾರಿ, ಮಂಗಳೂರು ಕೆನರಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಸ್ವಪ್ನರವರ ಅಂಧರಿಗೆ ವಿಶೇಷವಾದ ಜಾಕೆಟ್‌ನೊಂದಿಗೆ ಹೆಡ್ ಫೋನ್ ಗೆ ಕನೆಕ್ಷನ್ ನೀಡಿದರೆ ಅಂಧರು ಯಾರು ಮಾತನಾಡುತ್ತಿದ್ದಾರೆಂಬುದನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ. ಹಾಗೂ ಶಮಿತ್ ಎಂಬ ವಿದ್ಯಾರ್ಥಿಯ ವರ್ಟಿಕಲ್ ಲ್ಯಾಂಡ್ ಆ್ಯಂಡ್ ವರ್ಟಿಕಲ್ ಟೇಕ್ ಆಫ್ ಸಂಡಿಗ್ ರಾಕೆಟ್ ನ್ನು ತಯಾರಿಸಿ ನೋಡುಗರ ಕಣ್ಮಣವನ್ನು ಸೆಳೆಯುವಂತೆ ಮಾಡಿದರು.
ಸಿದ್ದಾರ್ಥ ಇಂಜಿನಿಯರಿಂಗ್ ತುಮಕೂರು ಕಾಲೇಜಿನ 18ಜನ ವಿದ್ಯಾರ್ಥಿಗಳು ಐದು ತಂಡಗಳೊಂದಿಗೆ ಐದು ವಿವಿಧ ಪ್ರಾಜೆಕ್ಟ್ಗಳನ್ನು ಮಾಡಲಾಗಿದ್ದು, ಅವುಗಳಲ್ಲಿ ವಿಶೇಷವಾಗಿ ರೋಬೋ ಆ್ಯಂಬ್ಯು(ರೋಬೋಟಿಕ್ ಆ್ಯಂಬುಲೆನ್ಸ್) ಮೊಡಲ್‌ನ್ನು ಉಪನ್ಯಾಸಕ ಪ್ರವೀಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅಭಿಷೇಕ್,ಅನುಷಾ, ಅಮೃತಾ, ಅಬ್ದುಲ್ ಗಫೂರ್ ಅವರುಗಳು ಕೋವಿಡ್ -19 ಸಂದರ್ಭದಲ್ಲಿ ಡಾಕ್ಟರ್, ನರ್ಸ್ಗಳು ಕೊರತೆಯನ್ನು ಹೊಂದಿರುವುದನ್ನು ಮನಗಂಡು, ನರ್ಸ್ಗಳು ರೋಗಿಗಳನ್ನು ಮುಟ್ಟುವಂತೆ ಇರಲಿಲ್ಲ. ಇದನ್ನೆಲ್ಲಾ ಗಮನಿಸಿದ ವಿದ್ಯಾರ್ಥಿಗಳು ರೋಬೋಟಿಕ್ ನರ್ಸ್ ಎಂಬ ಹೊಸ ಕಾನ್ಸೆಪ್ಟ್ನ್ನು ಹಿಡಿದು ಸ್ವತಃ ರೊಬೋಟ್ ಚಿಕಿತ್ಸೆಯನ್ನು ನೀಡುವಂತೆ ಮಾಡಲು ಈ ಆವಿಷ್ಕಾರ ಮಾಡಿದ್ದಾರೆ. ಇದರ ವಿಶೇಷತೆ ಏನೆಂದರೆ ರೋಗಿಯ ಟೆಪರೇಚರ್ ಲೆವೆಲ್, ಆಕ್ಸಿಜನ್ ಮೀಟರ್ ಪರೀಕ್ಷೆ ಮಾಡಲು ಹಾಗೂ ರೋಗಿಯ ಬ್ಲಡ್ ಟೇಸ್ಟ್ ಸ್ಯಾಂಪಲ್ ತಗೊಂಡು ಬ್ಲಡ್ ಟೇಸ್ಟ್ ಮಾಡಿ ರಕ್ತಪರೀಕ್ಷೆಯಲ್ಲಿ ಶುಗರ್ ಜಾಸ್ತಿ ಇದ್ದರೆ ತುರ್ತು ಚಿಕಿತ್ಸೆಗೆ ಕೊಂಡೊಯ್ಯು ಇದು ಸೂಚನೆ ನೀಡುತ್ತಾದೆ. ಹಾಗೂ ಹಳ್ಳಿಗಳಲ್ಲಿ ಡಾಕ್ಟರ್, ನರ್ಸ್ಗಳಿಲ್ಲದಿದ್ದರೆ ಐಸೋಲೇಶನ್ ಪೇಷೆಂಟ್‌ಗಳನ್ನು ಟ್ರಿಟ್‌ಮೆಂಟ್‌ಗಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲು ರೊಬೋಟ್‌ಗಳನ್ನು ಕಳಿಸಲಾಗ್ತದೆ. ಅಷ್ಟು ಮಾತ್ರವಲ್ಲದೇ ಮುಂದಿನ ದಿನಗಳಲ್ಲಿ ಹಳ್ಳಿ, ಗುಡ್ಡ ಪ್ರದೇಶದಲ್ಲಿ ವಾಸಿಸುವ ಜನರಿಗೆ ತುರ್ತು ಸಂದರ್ಭದಲ್ಲಿ ಡ್ರೋನ್ ಮೂಲಕ ಈ ರೊಬೋಟ್‌ನ್ನು ಕಳಿಸುವ ಯೋಜನೆಯನ್ನು ಹಾಕಲಾಗಿದೆ ಎಂದು ಮಾರ್ಗದರ್ಶಕರಾದ ಪ್ರವೀಣ್ ಕುಮಾರ್ ಅವರು ಮಾಹಿತಿಯನ್ನು ನೀಡಿದರು.
0 Comments