ಮೂಡುಬಿದಿರೆ: ಇಲ್ಲಿನ ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್ ನಲ್ಲಿ ಇಂದಿನಿಂದ 7 ದಿನಗಳ ಕಾಲ ನಡೆಯುವ ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ಪ್ರದರ್ಶನಗೊಳ್ಳಲಿರುವ ಪಂಚ ಮೇಳಗಳಿಗೆ ಬುಧವಾರ ನೀಟ್ ಬಿಲ್ಡಿಂಗ್ ನಲ್ಲಿ ಚಾಲನೆಯನ್ನು ನೀಡಲಾಯಿತು.
ಡಾ.ಯಶೋವರ್ಮ ವೇದಿಕೆಯಲ್ಲಿ ನಡೆಯುವ ಪುಸ್ತಕಮೇಳವನ್ನು ಶಾಸಕ ಉಮಾನಾಥ ಎ.ಕೋಟ್ಯಾನ್, ಕೆ.ಕೆ.ಹೆಬ್ಬಾರ್ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿರುವ ಕಲಾಮೇಳವನ್ನು ಚಿ.ದು.ಕೃಷ್ಣ ಶೆಟ್ಟಿ, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವೇದಿಕೆಯಲ್ಲಿ ನಡೆಯುವ ವಿಜ್ಞಾನ ಮೇಳವನ್ನು ಇಸ್ರೋದ ಮಾಜಿ ವೈಜ್ಞಾನಿಕ ಕಾರ್ಯದರ್ಶಿ ಕೃಷಿಮೇಳ ಡಾ.ದಿವಾಕರ್, ಎ.ಜಿ.ಕೊಡ್ಗಿ ವೇದಿಕೆಯಲ್ಲಿ ನಡೆಯುವ ಕೃಷಿಮೇಳವನ್ನು ಉದ್ಯಮಿ ಕೆ.ಶ್ರೀಪತಿ ಭಟ್, ಚೌಟರ ಆರಮನೆ ಮೂಡುಬಿದಿರೆ ವೇದಿಕೆಯಲ್ಲಿ ನಡೆಯುವ ಆಹಾರೋತ್ಸವ ಮೇಳವನ್ನು ಉದ್ಯಮಿ ಕೆ.ಸಿ.ಮಿಶ್ರಾ ಅವರು ಉದ್ಘಾಟಿಸಿದರು.
ಭಾರತ್ ಸ್ಕೌಟ್ಸ್ ಗೈಡ್ಸ್ ರಾಜ್ಯ ಆಯುಕ್ತ ಪಿ.ಆರ್.ಸಿಂಧ್ಯಾ, ಜಿಲ್ಲಾ ಆಯುಕ್ತ ಡಾ.ಎಂ.ಮೋಹನ್ ಆಳ್ವ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಪ್ರವೀಣ್ ಶೆಟ್ಟಿ, ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಕೆ. ಈ ಸಂದರ್ಭದಲ್ಲಿದ್ದರು.
0 Comments