ದಿ|ದಾಸಪ್ಪ ಎಡಪದವು ಅವರಿಗೆ ಬಿ.ಎಸ್.ಪಿ ಜಿಲ್ಲಾ ಘಟಕದ ವತಿಯಿಂದ ನುಡಿನಮನ ಹಾಗೂ ಸಂವಿಧಾನ ಸಂರಕ್ಷಣೆಗಾಗಿ ಜೈಭೀಮ್ ಜನ ಜಾಗೃತಿ ಕಾರ್ಯಕ್ರಮವು ಮೂಡುಬಿದಿರೆಯ ಸಮಾಜ ಮಂದಿರದ ಸ್ವರ್ಣ ಮಂದಿರದಲ್ಲಿ ಡಿ.5ರಂದು ನಡೆಯಲಿದ್ದು ಬಿ.ಎಸ್.ಪಿ ಜಿಲ್ಲಾ ಉಪಾಧ್ಯಕ್ಷ ದೇವಪ್ಪ ಬೋಧ್ ಅಧ್ಯಕ್ಷತೆ ವಹಿಸಲಿದ್ದಾರೆಂದು ಎಂದು ಬಿ.ಎಸ್ .ಪಿ ಯ ಜಿಲ್ಲಾ ಸಂಯೋಜಕ ಗೋಪಾಲ ಮುತ್ತೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅವರು ಗುರುವಾರ
ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಿ. ಎಸ್.ಪಿ ಯ ಜಿಲ್ಲಾ ಉಪಾಧ್ಯಕ್ಷ ದೇವಪ್ಪ ಬೋಧ್ ಮಾತನಾಡಿ ನವದೆಹಲಿ ಬಿ.ಎಸ್.ಪಿಯ ಪಂಚರಾಜ್ಯಗಳ ಸಂಯೋಜಕ ನಿತಿನ್ಸಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕರ್ನಾಟಕ ಬಿಎಸ್ಪಿ ರಾಜ್ಯ ಸಂಯೋಜಕರುಗಳಾದ ಮಾರಸಂದ್ರ ಮುನಿಯಪ್ಪ, ಎಂ. ಗೋಪಿನಾಥ್, ದಿನೇಶ್ ಗೌತಮ್, ಕರ್ನಾಟಕ ಬಿ.ಎಸ್.ಪಿ ರಾಜ್ಯ ಅಧ್ಯಕ್ಷ ಎಂ.ಕೃಷ್ಣಮೂರ್ತಿ, ಉಪಾಧ್ಯಕ್ಷ ಕೆ.ಬಿ ವಾಸು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆರ್. ಮುನಿಯಪ್ಪ, ಜಾಕೀರ್ ಹುಸೇನ್, ಅರಕಲವಾಡಿ ನಾಗೇಂದ್ರ, ಗಂಗಾಧರ ಬಹುಜನ, ಪುರುಷೋತ್ತಮ, ರಾಜ್ಯ ಖಜಾಂಚಿ ಹಾಸಿಮ್ ಇಕ್ಬಾಲ್, ರಾಜ್ಯ ಕಾರ್ಯದರ್ಶಿಗಳಾದ ವೇಲಾಯುಧನ್, ಪರಮೇಶ್ವರ, ಶಿವಮ್ಮ, ಜಾಕೀರ್ ಆಲಿಖಾನ್, ಕಾಂತಪ್ಪ ಅಲಂಗಾರು, ಸುಧಾ ಎಸ್.ಕೆ.ಎಮ್ ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ವಿವಿಧ ಜಿಲ್ಲೆಯ ಜಿಲ್ಲಾಧ್ಯಕ್ಷರುಗಳಾದ ಚಿಕ್ಕಮಗಳೂರಿನ ಕೆ.ಟಿ ರಾಧಾಕೃಷ್ಣ, ಶಿವಮೊಗ್ಗದ ಎ.ಡಿ ಶಿವಪ್ಪ, ಹಾಸನದ ಹರೀಶ್ ಅತ್ನಿ, ಮೈಸೂರಿನ ಬಿ. ಆರ್ ಪುಟ್ಟಸ್ವಾಮಿ , ಚಾಮರಾಜನಗರದ ನಾಗಯ್ಯ ಎನ್, ಉಡುಪಿಯ ಮಂಜುನಾಥ್ ವಿ ಉಪಸ್ಥಿತರಿರಲಿದ್ದಾರೆಂದು ತಿಳಿಸಿದರು.
0 Comments