ಹಿಂದೂ ರಿಕ್ಷಾ,ಹಿಂದೂ ಆಧಾರ್ ಕಾರ್ಡ್,ರಾಶಿ ರಾಶಿ ಕುಕ್ಕರ್,ಟಾರ್ಗೆಟ್ ಬೊಮ್ಮಾಯಿ,ನಳಿನ್: ಮಂಗಳೂರು ಬಾಂಬ್ ಸ್ಪೋಟಕ್ಕೆ ದಿನಕ್ಕೊಂದು ತಿರುವು

ಜಾಹೀರಾತು/Advertisment
ಜಾಹೀರಾತು/Advertisment


 ಮಂಗಳೂರಿನ ನಾಗುರಿಯಲ್ಲಿ ಆಟೋರಿಕ್ಷದಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಸದ್ಯ ಈ ಬಾಂಬ್ ಸ್ಫೋಟದ ಕೃತ್ಯವನ್ನು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರನ್ನು ಟಾರ್ಗೆಟ್ ಮಾಡಿ ಇಡಲಾಗಿದೆ ಎಂಬ ಗುಮಾನಿ ಎದ್ದಿದೆ. ಇತ್ತೀಚೆಗೆ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಹಾಗೂ ನಳಿನ್ ಕುಮಾರ್ ಕಟೀಲ್ ಅವರ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರ ಈ ಪ್ರಕರಣವನ್ನು NIA ಗೆ ವಹಿಸಿತ್ತು. ಇದಾದ ನಂತರ ಪ್ರವೀಣ್ ಹತ್ಯೆ ಪ್ರಕರಣದ ಹಿಂದೆ NIA ತಂಡವು ಬೆಂಬಿಡದೆ ಛೇದಿಸಿದ್ದು ಪ್ರವೀಣ್ ಹತ್ಯೆಯ ಹಿಂದಿರುವ ಮೂಲಭೂತವಾದಿ ಸಂಘಟನೆಗಳಾದ PFI, KFD ಸಹಿತ ಇತರ ಮತಾಂಧ ಸಂಘಟನೆ ಹಾಗೂ ವ್ಯಕ್ತಿಗಳನ್ನು ಬಂಧಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ದೇಶದಾದ್ಯಂತ ಪಿ ಎಫ್ ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಇದೀಗ ಇದೆಲ್ಲದರ ಕೆಂಗಣ್ಣು ಬಿದ್ದಿರುವುದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮೇಲೆ. ಸದ್ಯ ನಳಿನ್ ಕುಮಾರ್ ಕಟೀಲ್ ಅವರು ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಆಧಾರವಾಗಿದ್ದು ಸರ್ವಾನುಮತದ ಸಹಕಾರವನ್ನು ನೀಡುತ್ತಿದ್ದಾರೆ. ಒಟ್ಟು ರಾಜ್ಯ ಮತ್ತು ಕೇಂದ್ರ ಸರ್ಕಾರ ಮೂಲಭೂತವಾದಿ ಸಂಘಟನೆಗಳಾದ ಪಿ ಎಫ್ ಐ ವಿರುದ್ಧ ತೊಡೆ ತಟ್ಟಿ ನಿಂತಿರುವುದು ಸಮಾಜದಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸಲು ನಿಷೇಧಿತ ಪಿ ಎಫ್ ಐ ಸಂಘಟನೆ ಉದ್ದೇಶಿಸಿದೆ. ಹೀಗಾಗಿ ಮಂಗಳೂರಿನಲ್ಲಿ ಸಿಎಂ ಕಾರ್ಯಕ್ರಮ ಆಯೋಜನೆಗೊಂಡಿರುವ ದಿನದಂದೇ ಪಿ ಎಫ್ ಐ ಉಗ್ರ ಕುಕ್ಕರ್ ನಲ್ಲಿ ಬಾಂಬ್ ಇಟ್ಟು ಆಟೋರಿಕ್ಷದಲ್ಲಿ ಬಂದಿದ್ದ ಎನ್ನಲಾಗಿದೆ. ಮೂಲತಹ ಮೈಸೂರಿನವನಾದ ಈತ ಪ್ರೇಮ ರಾಜ್ ಎನ್ನುವಾತನ ಹೆಸರಿನಲ್ಲಿ ಆಧಾರ್ ಕಾರ್ಡ್ ಕಳ್ಳತನ ಮಾಡಿ ಆತನ ಹೆಸರಿನೊಂದಿಗೆ ವ್ಯವಹಾರವನ್ನು ನಡೆಸುತ್ತಿದ್ದ ಎನ್ನಲಾಗಿದೆ. ಮೈಸೂರಿನಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ಈತ ವಾಸವಾಗಿದ್ದು ಇದೇ ಆಧಾರ್ ಕಾರ್ಡ್ ನೀಡಿದ್ದು ನಂತರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ ಮಾತ್ರವಲ್ಲದೆ ಆತನ ಅಪಾರ್ಟ್ಮೆಂಟ್ ಹುಡುಕಾಡಿದಾಗ ಅಲ್ಲಿ ಕುಕ್ಕರ್, ನಕಲಿ ಸಿಮ್ ಕಾರ್ಡ್, ನಕಲಿ ಐಡಿ ಕಾರ್ಡ್, ನಕಲಿ ಆಧಾರ್ ಕಾರ್ಡ್, ಸ್ಪೋಟಕಕ್ಕೆ ಬಳಸುವಂತಹ ಮದ್ದು ಗುಂಡುಗಳು,ಸ್ಪೋಟಕ ಸಾಮಗ್ರಿಗಳು, ನಟ್ ಬೋಲ್ಟ್ ಗಳು ಸಹಿತ ಅನೇಕ ಉಪಕರಣಗಳು ದೊರೆತಿದ್ದವು. ಮಾತ್ರವಲ್ಲದೆ ಮಂಗಳೂರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಆಗಮನದ ದಿನದಂದೇ ಮಂತ್ರಿಗಳು ಸಂಸದರು ಎಲ್ಲರೂ ಒಂದೇ ವೇದಿಕೆಯಲ್ಲಿ ಇರುವ ವಿಚಾರವನ್ನು ತಿಳಿದು ವಿದ್ವಂಸಕ ಕೃತ್ಯಗಳನ್ನು ನಡೆಸಲು ಮಂಗಳೂರಿಗೆ ಆಗಮಿಸಿದ್ದ. ಈ ಸಂದರ್ಭದಲ್ಲಿ ಆಟೋದಲ್ಲಿ ಸ್ಪೋಟಕವುಳ್ಳ ಕುಕ್ಕರನ್ನು ಹಿಡಿದುಕೊಂಡು ಸಾಗುತ್ತಿದ್ದ. ಉದ್ದೇಶಪೂರ್ವಕವಾಗಿಯೇ ದುರ್ಗಾಪರಮೇಶ್ವರಿ ಎಂದು ಬರೆದುಕೊಂಡಿರುವ ಹಿಂದೂಗಳ ಆಟೋರಿಕ್ಷವನ್ನು ಹತ್ತಿಕೊಂಡು ಬಂದಿರುವ ಈತ ನಾಗುರಿ ಬಳಿ ತೆರಳುವಾಗ ಹಂಪ್ ಒಂದರಲ್ಲಿ ರಿಕ್ಷಾವು ಜಿಗಿದಿದ್ದು ಈ ಸಂದರ್ಭದಲ್ಲಿ ಸ್ಪೋಟ ಸಂಭವಿಸಿದೆ. ಹೀಗಾಗಿ ಆಗಬೇಕಿದ್ದ ಅತಿ ದೊಡ್ಡ ಅನಾಹುತವೊಂದು ತಪ್ಪಿ ಹೋಗಿದೆ ಎನ್ನಲಾಗಿದೆ. ಒಟ್ಟು ಮಂಗಳೂರಿನಲ್ಲಿ ಪಿಎಫ್ ಐ ನಿಷೇಧದ ನಂತರ ವಿದ್ವಂಸಕ ಕೃತ್ಯಗಳನ್ನು ನಡೆಸಲು ಸಂಚುರೂಪಿಸಿದ್ದು ಇದಕ್ಕೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಭದ್ರತಾ ಸಿಬ್ಬಂದಿಗಳು ಮತ್ತು ಪೊಲೀಸ್ ಇಲಾಖೆ ಅಡೆತಡೆ ಉಂಟು ಮಾಡುತ್ತಿವೆ. ಹೀಗಾಗಿ ವಿದ್ವಂಸಕ ಕೃತ್ಯಗಳು ನಡೆಸಲೇಬೇಕು ಎಂದು ಹುನ್ನಾರ ಹಾಕಿಕೊಂಡಿರುವ ಇಂತಹ ಮತಾಂಧ ಸಂಘಟನೆಗಳು ಈಗ ಅನಾಮಿಕರ ಮತ್ತು ಅಮಾಯಕರ ಕೈಯಲ್ಲಿ ಬಾಂಬ್ ನೀಡಿ ಈಗ ವಿದ್ವಂಸಕ ಕೃತ್ಯಕ್ಕೆ ಮುಂದಾಗಿರುವುದು ಖೇದಕರ. ಈಗಾಗಲೇ ಹಲವಾರು ಮಂದಿಯನ್ನು ಬಂಧಿಸಿದ್ದು NIA ಅಧಿಕಾರಿಗಳು ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ. ಇದರ ಬೆನ್ನಲ್ಲೇ ಬಂಧಿತ ಶಂಕಿತ ಉಗ್ರನ ಕೈಯಲ್ಲಿ ಕುಕ್ಕರ್ ಹಿಡಿದು ಪೋಸ್ ಕೊಡುವ ಫೋಟೋ ಲಭ್ಯವಾಗಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Post a Comment

0 Comments