ಅಶ್ವತ್ಥಪುರದ ಕಾರ್ತಿಕ ದೀಪೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 

 


ಮೂಡುಬಿದಿರೆ : ಶ್ರೀ ಕ್ಷೇತ್ರ ಅಶ್ವತ್ಥಪುರದ ಶ್ರೀ  ಸೀತಾ ರಾಮಚಂದ್ರ ದೇವಸ್ಥಾನದಲ್ಲಿ ದೀಪಾವಳಿಯಂದು ಪ್ರಾರಂಭವಾದ ದೀಪೋತ್ಸವವು ಕಾರ್ತಿಕ ಮಾಸದ ಕೊನೆಯ ದಿನದಂದು ಭಕ್ತಿಯ ಬೆಳಕಿನೊಂದಿಗೆ ನೆರವೇರಿತು. ಸಂಜೆಯ ಭಜನಾ ಕಾರ್ಯಕ್ರಮದ ನಂತರ ಲಕ್ಷ್ಮಣ ಸಹಿತ ಶ್ರೀ ಸೀತಾ ರಾಮಚಂದ್ರರ ಉತ್ಸವ ಮೂರ್ತಿಯನ್ನಿಟ್ಟ ಪಲ್ಲಕ್ಕಿಯೊಂದಿಗೆ ದೇವಸ್ಥಾನದಿಂದ ಹೊರಟ ಉತ್ಸವ ಊರಿನ ಮಾರುತಿ ಗುಡಿಗೆ ಹೋಗಿ ಅಲ್ಲಿಂದ ನಗರ ಪ್ರದಕ್ಷಿಣೆಗೆ ಸಜ್ಜಾಯಿತು. ಪದ್ಧತಿಯಂತೆ ಪ್ರತಿ ಮನೆಯ ಮುಂದೆ ಇರಿಸಿದ್ದ ದೀಪಕ್ಕೆ ಪ್ರದಕ್ಷಿಣೆ ಬಂದು ಗಣಪತಿ ಗುಡಿಯಲ್ಲಿ ಮಂಗಳಾರತಿಯಾಗಿ ರಾಮ ದೇವಸ್ಥಾನಕ್ಕೆ ಮರಳಿ ಚಂಡೆ ಬಲಿ, ಭಜನೆ ಕುಣಿತಗಳ ಸಹಿತ ವಸಂತಕಟ್ಟೆಯಲ್ಲಿ ಕಟ್ಟೆ ಪೂಜೆ ಜರುಗಿತು. 

ಕನಕ ಪುಷ್ಪಾದಿಗಳಿಂದ ಅಲಂಕೃತವಾದ ದೇವಳದ ಸೀತಾರಾಮರ ಮೂರ್ತಿಗೆ ಮಂಗಳಾರತಿಯೊಂದಿಗೆ ಷೋಡಶೋಪಚಾರ ಪೂಜೆಯಾಯಿತು. ಪ್ರಸಾದ ವಿತರಣೆಯೊಂದಿಗೆ ಈ ಬಾರಿಯ ದೀಪೋತ್ಸವ ಸಂಪನ್ನಗೊಂಡಿತು. 

ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ರಘುನಾಥ್, ಕ್ಷೇತ್ರದ ಅರ್ಚಕರಾದ ವೇ.ಮೂ ಚಂದ್ರ ಮೌಳೀಶ್ವರ ಭಟ್, ಪ್ರಭಾಕರ ಭಟ್, ರಂಗನಾಥ ಭಟ್ ಪೂಜೆಯ ಭಾಗವಾಗಿದ್ದರು.

Post a Comment

0 Comments