ಮೂಡುಬಿದಿರೆ: ಮೂಡುವೇಣುಪುರ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ವತಿಯಿಂದ ಸಾಂಪ್ರದಾಯಿಕ ಮೆರುಗಿನಲ್ಲಿ ಸಂಕೀರ್ತನೆಯೊಂದಿಗೆ ಪೇಟೆಯಲ್ಲಿ ಭಜನಾ ದಿಂಡಿ ಸಂಚಲನ ಭಾನುವಾರ ರಾತ್ರಿ ನಡೆಯಿತು.
ದೇವಳಗಳ ವೆಂಕಟರಮಣ ಭಜನಾ ಮಂಡಳಿಯು ವಜ್ರ ಮಹೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ನಡೆಯಲಿರುವ ಭಜನಾ ಸಪ್ತಾಹದ ಪೂರ್ವಭಾವಿಯಾಗಿ ನಡೆದ ದಿಂಡಿ ಉತ್ಸವವನ್ನು ದೇವಳದ ಪ್ರಾಂಗಣ ದಲ್ಲಿ ಪ್ರಧಾನ ಅರ್ಚಕ ವೇದಮೂರ್ತಿ ಎಂ. ಹರೀಶ ಭಟ್ ಉದ್ಘಾಟಿಸಿದರು.
ಆಡಳಿತ ಮೊಕ್ತಸರ ಜಿ. ಉಮೇಶ ಪೈ ಮಂಡಳಿಯ ಮೂಡಿಸಿತು. ಸದಸ್ಯರೇ ನಿರ್ಮಿಸಿದ ಪಂಡರಪುರ ವಿಠಲನ ಮೃಣ್ಮಯ ಅಲಂಕೃತ ವಾದನದಲ್ಲಿ ಮೂರ್ತಿಯನ್ನು ಅನಾವರಣಗೊಳಿಸಿದರು. ಆಡಳಿತ ಮಂಡಳಿಯ ಮೊಕ್ತೇಸರರು, ಮಾಜಿ ಆಡಳಿತ ಮೊಕ್ತೆಸರ ಕೆ. ವಿಶ್ವನಾಥ ಪ್ರಭು, ಮಾಜಿ ಮೊಕ್ತೇಸರ ಬಿ. ನಂದ ಕುಮಾರ್ ಆರ್
ಕುಡ್ವ, ಹೋಬಳಿಯ ದೇವಳ, ಮಂದಿರಗಳ ಪ್ರಮುಖರು, ಅರ್ಚಕರು, ಭಜನಾ ಮಂಡಳಿ ಅಧ್ಯಕ್ಷ ವಿಘ್ನೇಶ್ ಪ್ರಭು,
ರಜತ ಹೊದಿಸಿದ ಭಜನಾಸಾಳೆಯ ವಿಠೋಭಮಂಟಪ, ಕುಣಿತ ಭಜನಾ ತಂಡದವರು, ಪಂಡರಪುರ ವಾರಕರಿ ಸೇವಕರಂತೆ ಬಿಳಿ ಟೋಪಿ, ನಾಮ, ಧ್ವಜಧಾರಿಗಳಾಗಿ, ಕಚ್ಚೆ ಪಂಚೆಯ ದಿರಿಸಿನಲ್ಲಿ ತಾಳಗಳೊಂದಿಗೆ ನಾಮಸ್ಮರಣೆ ಮಾಡಿ ಸಾಗಿ ಎಳೆಯರು, ಹಿರಿಯರು, ಮಹಿಳೆಯರು ಸಾಗಿ ಬಂದರು. ವಿಠೋಭ ರಖುಮಾಯಿ ಪಾತ್ರಧಾರಿಗಳು, ಚೆಂಡೆ, ಕೊಂಬು, ಮಂಗಳ ವಾದ್ಯಗಳು, ದೀವಟಿಗೆ, ಜಯ ಘೋಷಗಳೊಂದಿಗೆ ಪೇಟೆಯಲ್ಲಿ ಮೆರವಣಿಗೆ ಸಂಚಲನ
ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಭಜನಾ ದಿಂಡಿಯಲ್ಲಿ ಸಾಥ್ ನೀಡಿದರು.
ಪುರಸಭಾ ಸದಸ್ಯ ರಾಜೇಶ್ ಮಲ್ಯ, ಎಚ್. ಸುರೇಶ್ ಪ್ರಭು, ಮತ್ತಿತರ ಗಣ್ಯರು ಭಜನಾ ದಿಂಡಿಯಲ್ಲಿ ಪಾಲ್ಗೊಂಡರು.
0 Comments