ಗೋವಾಕ್ಕೆ ಕೆಲಸಕ್ಕೆಂದು ತೆರಳಿದ ಯುವಕ ಸಾವು

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಕಳೆದ ಒಂದು ವಾರದ ಹಿಂದೆ ಉದ್ಯೋಗಕ್ಕಾಗಿ ಗೋವಾಕ್ಕೆ ತೆರಳಿದ್ದ ಮೂಡುಬಿದಿರೆಯ ಯುವಕ ಮನೆಯ ಮೆಟ್ಟಿಲುವಿನಿಂದ ಕೆಳಗೆ  ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಮೂಡುಬಿದಿರೆ ತಾಲೂಕಿನ ಹೊಸಬೆಟ್ಟು ನಿವಾಸಿ ಸತೀಶ್ ಶೆಟ್ಟಿ( 35) ಎಂಬವರು ಸಾವನ್ನಪ್ಪಿದ್ದು,ಅವರು ಈ ಹಿಂದೆ ಮೂಡುಬಿದಿರೆಯಲ್ಲಿ ಪೇಪರ್ ಏಟೆಂಟ್ ಆಗಿ ದುಡಿಯುತ್ತಿದ್ದರು. ನಂತರ ವಿವಿಧ ಕಡೆಗಳಲ್ಲಿ ದುಡಿಯುತ್ತಿದ್ದ ಅವರು ಇತ್ತೀಚೆಗೆ ಉದ್ಯೋಗಕ್ಕಾಗಿ ಗೋವಾಕ್ಕೆ ತೆರಳಿದ್ದರು ಎನ್ನಲಾಗಿದೆ.

Post a Comment

0 Comments