ಮೂಡುಬಿದಿರೆಯಲ್ಲಿ ಅಖಂಡ ಭಜನಾ ಸಪ್ತಾಹ

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ :  ಇಲ್ಲಿನ ಮೂಡುವೇಣುಪುರ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಶ್ರೀ ವೆಂಕಟರಮಣ ಭಜನಾ ಮಂಡಳಿಯ ವಜ್ರಮಹೋತ್ಸವದ ಅಂಗವಾಗಿ ನ.28ರಿಂದ ಡಿ.5ರ ವರೆಗೆ ಅಖಂಡ ಭಜನ ಸಪ್ತಾಹ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ, ಭಜನಾ ಮಂಡಳಿಯ ಗೌರವಾಧ್ಯಕ್ಷ ಜಿ. ಉಮೇಶ್ ಪೈ  ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ನ.17ರಂದು ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟ ಸುಮಾರು 2500 ಮಂದಿ ಸಮಾಜಬಾಂಧವರು ಭಜನಾ ದಿಂಡಿ ಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂ.ಗಂ.೬ಕ್ಕೆ ಶ್ರೀ ಹನುಮಂತ ದೇವಸ್ಥಾನದಿಂದ ನಜರ್ ಕಾಣಿಕೆ ಒಪ್ಪಿಸುವ ಮೆರವಣಿಗೆ, ವಿಠೋಭ ದೇವರ ರಜತ ಮಂಟಪ ಸಮರ್ಪಣೆ ನಡೆಯಲಿದೆ. ಡಿ.2ರಿಂದ 5ಅರವರೆಗೆ ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ದೇವಸ್ಥಾನದಲ್ಲಿ ಮೊಕ್ಕಾಂ ಇದ್ದು ಭಕ್ತಾದಿಗಳನ್ನು ಹರಸಲಿದ್ದಾರೆ 

28ರಂದು ಬೆ.ಗಂ.6ಕ್ಕೆ ದೀಪ ಪ್ರಜ್ವಲನೆಯೊಂದಿಗೆ ಅಖಂಡ ಭಜನಾ ಸಪ್ತಾಹ ಪ್ರಾರಂಭವಾಗಿ ಏಳೂದಿನ ರಾತ್ರಿ ನಿರಂತರವಾಗಿ ಕರಾವಳಿಯ ವಿವಿಧೆಡೆಯ ಭಜನ ತಂಡಗಳು ಭಜನಾ ಸಂಕೀರ್ತನೆ ನಡೆಸಿಕೊಡಲಿದ್ದಾರೆ.

ಸಪ್ತಾಹದ ಎಲ್ಲ ದಿನ ಬೆ.ಗಂ.6ರಿಂದ ೮ರವರೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ  ಡಿ.5ರಂದು ಬೆ.ಗಂ.6ಕ್ಕೆ  ಅಖಂಡ ಭಜನ ಸಪ್ತಾಹದ ಮಂಗಲ ಮತ್ತು ದೀಪ ವಿಸರ್ಜನೆ , ಉರುಳು ಸೇವೆ, ಮುಕ್ಕೋಟಿ ದ್ವಾದಶಿ ಉತ್ಸವ ನಡೆಯಲಿದ್ದು, ಹೋಬಳಿಯ ವಿವಿಧ ದೇವಸ್ಥಾನ, ಮಂದಿರಗಳಲ್ಲದೆ ಕರಾವಳಿಯ ಸಮಾಜದ ಆರಾಧನ ಕೇಂದ್ರಗಳಿಂದಲೂ ಈ ಸಪ್ತಾಹದ ಬಗ್ಗೆ ಅಪರಿಮಿತ ಉತ್ಸಾಹ  ವ್ಯಕ್ತವಾಗುತ್ತಿದೆ

ಎಂದು ಮಂಡಳಿಯ ಅಧ್ಯಕ್ಷ   ಎಂ. ವಿಘ್ನೇಶ ಪ್ರಭು ತಿಳಿಸಿದರು.


Post a Comment

0 Comments