ಮಂಗಳೂರು ಬಾಂಬ್ ಸ್ಪೋಟ ಎನ್.ಐ.ಎ.ಗೆ:ಸಂಸದ ನಳಿನ್ ಕುಮಾರ್

ಜಾಹೀರಾತು/Advertisment
ಜಾಹೀರಾತು/Advertisment


ಮಂಗಳೂರಿನ ನಾಗುರಿ ಎಂಬಲ್ಲಿ ಆಟೋರಿಕ್ಷದಲ್ಲಿದ್ದ ಕುಕ್ಕರ್ ನಿಂದ ಸಿಡಿದ ಬಾಂಬ್ ಸ್ಪೋಟ ಪ್ರಕರಣವನ್ನು ಇದೀಗ ರಾಷ್ಟ್ರೀಯ ತನಿಖಾದಳ NIA ಗೆ ವಹಿಸಲಾಗಿದೆ. ಅದಾಗಲೇ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿರುವ NIA ಹೆಗಲಿಗೆ ಈಗ ಮತ್ತೊಂದು ಪ್ರಕರಣವನ್ನು ಮಂಗಳೂರಿನಲ್ಲೇ ವಹಿಸಿದಂತಾಗಿದೆ. ಈಗಾಗಲೇ ಮಂಗಳೂರು ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಪ್ರಕರಣವನ್ನು NIA ಗೆ ನೀಡಲಾಗಿದೆ ಎಂದು ಘೋಷಿಸಿದ್ದಾರೆ.


 ಮಾತ್ರವಲ್ಲದೆ ಪ್ರಕರಣದ ಇಂಚಿಂಚು ತನಿಖೆಯನ್ನು ನಡೆಸಿ ಸತ್ಯಾಂಶವನ್ನು ಬಯಲಿಗೆಳೆಯುತ್ತೇವೆ.ಈ ಕೃತ್ಯದ ಹಿಂದೆ ಯಾವುದೇ ಭಯೋತ್ಪಾದಕ ಸಂಘಟನೆಗಳು ಇರಲಿ ಅದನ್ನು ಮಟ್ಟ ಹಾಕಲು ರಾಜ್ಯದ ಪೊಲೀಸ್ ಇಲಾಖೆ ಹಾಗೂ ಕೇಂದ್ರದ ಭಯೋತ್ಪಾದಕ ನಿಗ್ರಹದಳ ಸಿದ್ಧವಾಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. PFI ನಿಷೇಧ ನಂತರ ಸಮಾಜದಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸಲು ಇತರ ಮುಖವಾಡಗಳನ್ನು ಹೊಂದಿ ಪ್ರಯತ್ನಿಸುತ್ತಿರುವ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು. ಈಗಾಗಲೇ NIA ಗೆ ವಹಿಸಲಾಗಿದ್ದು ಸಂಪೂರ್ಣ ತನಿಖೆ ನಡೆಸಿ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಹಲವಾರು ವ್ಯಕ್ತಿಗಳನ್ನು ಬಂಧಿಸಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಸಂಸದರು ಹೇಳಿದರು. 

Post a Comment

0 Comments