ಪಣಪಿಲ ಕಂಬಳಕ್ಕೆ ಭರದ ಸಿದ್ಧತೆ: ಶಾಸಕ ಕೋಟ್ಯಾನ್ ಭೇಟಿ,ಪರಿಶೀಲನೆ

ಜಾಹೀರಾತು/Advertisment
ಜಾಹೀರಾತು/Advertisment



ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಜಯ ವಿಜಯ ಜೋಡು ಕರೆ ಕಂಬಳ ಪಣಪಿಲ ಇಲ್ಲಿಗೆ ಮುಲ್ಕಿ ಮೂಡಬಿದಿರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ರವರು ಭೇಟಿ ನೀಡಿದರು. ಈಗಾಗಲೇ ಉಭಯ ಜಿಲ್ಲೆಗಳ ಕಂಬಳದ ವೇಳಾಪಟ್ಟಿ ಬಿಡುಗಡೆಯಾಗಿದ್ದು ಫೆಬ್ರವರಿಯಲ್ಲಿ ಪಣಪಿಲ ಜಯ ವಿಜಯ ಜೋಡು ಕರೆ ಕಂಬಳ ನಡೆಯಲಿದೆ.

 

ಈ ಹಿಂದೆ ನಂದೊಟ್ಟು ಬಾಕಿಮಾರು ಗದ್ದೆಯಲ್ಲಿ ಇದ್ದ ಜಯ ವಿಜಯ ಜೋಡು ಕರೆ ಕಂಬಳ ಇದೀಗ ಪಣಪಿಲ ಗುಡ್ಡಾಲಪಲ್ಕೆ ಬಳಿಗೆ ಸ್ಥಳಾಂತರಗೊಂಡಿದ್ದು ಈ ಬಾರಿ ಈ ಪ್ರದೇಶದಲ್ಲಿ ನಡೆಯುವ ಮೊದಲ ಕಂಬಳವಾಗಿದೆ. ಶಾಸಕ ಉಮಾನಾಥ್ ಕೋಟ್ಯಾನ್ ರವರೇ ಗೌರವಾಧ್ಯಕ್ಷತೆಯನ್ನು ಹೊಂದಿದ್ದು ಇಂದು ಭೇಟಿ ನೀಡಿ ಕಂಬಳ ಕರೆಗಳು ಮತ್ತು ಇತರ ಮೂಲಭೂತ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಂಬಳದ ಸಮಿತಿಯ ಪ್ರಮುಖರು, ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯರು ಗ್ರಾಮಸ್ಥರು ಉಪಸ್ಥಿತರಿದ್ದರು.


 

Post a Comment

0 Comments