ಮೂಡುಬಿದಿರೆ:ವೃದ್ದೆಯೊಂದಿಗೆ ತುಳುವಿನಲ್ಲಿ ಮಾತನಾಡಿ ಪರಿಚಿತನಂತೆ ನಟಿಸಿ ಚಿನ್ನಾಭರಣ ಲಪಟಾಯಿಸಿದ ಯುವಕನೋರ್ವನ ಪತ್ತೆಗಾಗಿ ಮೂಡುಬಿದಿರೆ ಪೋಲೀಸರು ಕ್ರಮ ಕೈಗೊಂಡಿದ್ದಾರೆ.
ಮೂಡುಬಿದಿರೆಯ ರಿಕ್ಷಾ ಪಾರ್ಕ್ ಬಳಿ ಅ 9 ರಂದು ಗುಲಾಬಿ ಎಂಬ 65 ವರ್ಷದ ವೃದ್ದೆಯಿಂದ ಪುಸಲಾಯಿಸಿ ಆರೋಪಿಯು ಚಿನ್ನದ ಸರವನ್ನು ಅಪಹರಿಸಿದ್ದ. ವೃದ್ದೆಯ ಕತ್ತಿನಲ್ಲಿದ್ದ ಸರ ನೋಡಿ ಇದೇ ರೀತಿಯ ಡಿಸೈನ್ ಇರುವ ಸರವನ್ನು ಮಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಸರ ಪಡೆದಾತ ಮತ್ತೆ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಸುಳಿವು ಲಭಿಸಿದವರು ಮೂಡುಬಿದಿರೆ ಪೊಲೀಸರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments