ನಂತರ ನೀರುಡೆ ಚರ್ಚ್ ಬಳಿ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಕಲ್ಲಮುಂಡ್ಕೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾಮಗಾರಿಗಳು ಇದೀಗ ನಾಲ್ಕು ವರ್ಷಗಳಲ್ಲಿ ವಿಶೇಷ ಪ್ರಯತ್ನದೊಂದಿಗೆ ಆಗುತ್ತಿವೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡಿಲ್ಲ ಆದ್ದರಿಂದ ತನ್ನ ವಿಧಾನಸಭಾ ಕ್ಷೇತ್ರಕ್ಕೆ ರೂ 1,800 ಕೋಟಿ ಅನುದಾನಗಳನ್ನು ತಂದು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಸಹಕಾರಿಯಾಯಿತು.ನೀರುಡೆಯಲ್ಲಿ ರೂ 60 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ನೆರವೇರಿಸಲಾಗಿದೆ ಎಂದು ಹೇಳಿದ ಅವರು ಇನ್ನೂ 300 ಕೋಟಿಯಷ್ಟು ಅನುದಾನ ಚಾಲ್ತಿಯಲ್ಲಿದೆ ಎಂದು ಹೇಳಿದರು.
ನೀರುಡೆ ಚಚ್ ೯ನ ಧರ್ಮಗುರು ಆಲ್ಬನ್ ರೊಡ್ರಿಗಸ್ ಆರ್ಶೀವಚನ ನೀಡಿ ಕುಡಿಯುವ ನೀರಿನ ಬೇಡಿಕೆಗಳು ಹೆಚ್ಚುತ್ತಿದೆ. ಸಂಚಾರಕ್ಕೆ ರಸ್ತೆಗಳು ಅಗತ್ಯವಾಗಿಬೇಕು ಈ ನಿಟ್ಟಿನಲ್ಲಿ ಶಾಸಕರು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದು ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ನಡೆದ ಗುದ್ದಲಿಪೂಜೆಯ ಅಧ್ಯಕ್ಷತೆಯನ್ನು ಕೇಶವ ಪೂಜಾರಿ ವಹಿಸಿದ್ದರು.
0 Comments