*ಟಿಕ್ ಟಿಕ್ ಟಿಕ್...* *ಅಂತರಾಷ್ಟ್ರೀಯ ಜಿನಸಮ್ಮಿಲನ ದುಬೈ 2022* *ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭ...*

ಜಾಹೀರಾತು/Advertisment
ಜಾಹೀರಾತು/Advertisment


 *ಟಿಕ್ ಟಿಕ್ ಟಿಕ್...*

*ಅಂತರಾಷ್ಟ್ರೀಯ ಜಿನಸಮ್ಮಿಲನ ದುಬೈ 2022*

  *ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭ...*


ಬೆಂಗಳೂರಿನ ಕ್ರಿಯಾಶೀಲ ಜೈನ ಯುವಕರ ತಂಡವಾದ ಸುಹಾಸ್ತಿ ಯುವ ಜೈನ್ ಮಿಲನ್ ಇದರ ಮಹಾತ್ವಾಕಾಂಕ್ಷೆಯ ಹೆಮ್ಮೆಯ ಕಾರ್ಯಕ್ರಮ ಜಿನಸಮ್ಮಿಲನವು  ಇದೇ ಬರುವ ಡಿಸೆಂಬರ್ 3-4 ರಂದು ನಡೆಯಲಿದೆ.  ಈ ಬಾರಿ ನಮ್ಮ ನೆಲವನ್ನು ಬಿಟ್ಟು  ವಿದೇಶದಲ್ಲಿ  ಅದರಲ್ಲೂ  ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ದುಬೈ ನಲ್ಲಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ.  ಇದೀಗ ಕಾರ್ಯಕ್ರಮ ದಿನ ಹತ್ತಿರ ಬಂದೇ ಬಿಟ್ಟಿದೆ ....

ನಾಡಿನ ಜೈನ ಗಣ್ಯ ಮಾನ್ಯರು  ಪಾಲ್ಗೋಳ್ಳುವ ಈ  ವಿಶಿಷ್ಟ ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗಾಗಿ ಹಗಲಿರುಳು ಎನ್ನದೇ ಸಂಪೂರ್ಣ ಅಯೋಜಕ ವೃಂದವೇ ಶ್ರಮವಹಿಸುತ್ತಿದೆ  ಹಲವಾರು ವಿಶೇಷ ಕಾರ್ಯಕ್ರಮವನ್ನು  ಒಳಗೊಂಡ ಈ ಸಮಾರಂಭಕ್ಕಾಗಿ ಕನ್ನಡ ನಾಡಿನಿಂದ 250-300 ಗಣ್ಯರು ದುಬೈ ದೇಶಕ್ಕೆ ತೆರಳಿ  ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಲಿದ್ದಾರೆ.


ಪ್ರಸ್ತುತ ಇಲ್ಲಿ ಕೊನೆಯ ಕ್ಷಣ ಪೂರ್ವ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ ಕಳೆದ ಒಂದು ವಾರದಿಂದ ಅಯೋಜಕ ತಂಡವು ಹಗಲು ಹಲವಾರು ಗಣ್ಯರ ಬೇಟಿ ಮಾಡಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸಹಕಾರದ ಬಗ್ಗೆ ಚರ್ಚೆ, ರಾತ್ರಿ ಪೂರ್ತಿ ಕಾರ್ಯಕ್ರಮಕ್ಕೆ ಅಗತ್ಯ ಇರುವ ತಾಂತ್ರಿಕ ತಯಾರಿ ನಡೆಸುತ್ತಿದ್ದಾರೆ ಜೊತೆ ಜೊತೆಯಲ್ಲಿ ಇಡೀ ಜೈನ ಸಮಾಜವೇ ಈ ಕಾರ್ಯಕ್ರಮಕ್ಕಾಗಿ ಬೆಂಬಲ ನೀಡಿ ಹಾರೈಸುತ್ತಿದೆ ಮತ್ತು ಸಮಾರಂಭಕ್ಕಾಗಿ ಕಾತುರದಿಂದ ಕಾಯುತ್ತಿದೆ ಇದನ್ನೇಲ್ಲಾ ನೋಡುವಾಗ ಕಾರ್ಯಕ್ರಮವು ಸಂಪೂರ್ಣ ಯಶಸ್ಸು ಪಡೆಯುವುದರಲ್ಲಿ ಅನುಮಾನವಿಲ್ಲ.  ಎಲ್ಲಿ ಪರಿಶ್ರಮ ಇದೆ ಅಲ್ಲಿ ಯಶಸ್ಸು ಶತ ಸಿದ್ದ ಅಯೋಜಕ ಯುವಕರ ತಂಡಕ್ಕೆ ಗೆಲುವು ಸಿಗಲಿ ಜೈನ ಧರ್ಮ ಜಯವಾಗಲಿ

ಜಿನಸಮ್ಮಿಲನ ಯಸಸ್ವಿಯಾಗಲಿ

✍🏻 *ಮಹಾವೀರ ಪ್ರಸಾದ್ ಹೊರನಾಡು*

Post a Comment

0 Comments