ದೈವ ಮೈಮೇಲೆ ಬರೋದೇ ಸುಳ್ಳೆಂದ ಕಾಂಗ್ರೆಸ್ ಮಾಜಿ ಸಚಿವೆ-ದೈವ ನರ್ತಕರಿಗೆ 2000 ನೀಡುವ ನಿರ್ಧಾರ ತಪ್ಪಂತೆ.!

ಜಾಹೀರಾತು/Advertisment
ಜಾಹೀರಾತು/Advertisment

ಭೂತಾರಾಧನೆ ದೈವಾರಾಧನೆ ಸಂದರ್ಭದಲ್ಲಿ ದೇವರು ಅಥವಾ ದೈವ ದೈವ ನರ್ತಕರ ಮೈಮೇಲೆ ಆವೇಶ ಆಗುವುದು ಶುದ್ಧ ಸುಳ್ಳು. ಇದೊಂದು ಕೇವಲ ಕಾಲ್ಪನಿಕವಾಗಿದೆ. ಕೋಲದ ಸಂದರ್ಭದಲ್ಲಿ ದೈವ ದೈವನರ್ತಕರ ಮೇಲೆ ಬರೋದೇ ಇಲ್ಲ. ಹೀಗಿರುವಾಗ ದೈವ ನರ್ತಕರಿಗೆ ಸರ್ಕಾರ 2000 ರೂಪಾಯಿ ಮಾಸಾಶನ ನೀಡುವ ನಿರ್ಧಾರ ತೆಗೆದುಕೊಂಡಿದ್ದು ಸರಿಯಾಗಿದ್ದಲ್ಲ ಇದನ್ನು ನಾನು ಖಂಡಿಸುತ್ತೇನೆ. ಈ ಮಾತುಗಳನ್ನು ಹೇಳಿದ್ದು ಬೇರಾರು ಅಲ್ಲ ವಿಚಾರವಾದಿ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಕಾಂಗ್ರೆಸ್ಸಿನ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್.ಕಾಂತಾರ ಸಿನಿಮಾ ನಂತರ ದೈವಾರಾಧನೆ ಬಗ್ಗೆ ಕುತೂಹಲ ಹಾಗೂ ನಂಬಿಕೆಗಳು ಹೆಚ್ಚಾಗಿದ್ದು ತುಳುನಾಡು ಮಾತ್ರವಲ್ಲದೆ ರಾಜ್ಯ ದೇಶ ವಿದೇಶಗಳಲ್ಲೂ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.ಮಾತ್ರವಲ್ಲದೆ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ದೈವ ನರ್ತಕರಿಗೆ 2000 ರೂಪಾಯಿ ಮಾಸಾಶನ ನೀಡಿದ್ದು ಕೂಡಾ ಹಲವಾರು ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಈ ಸಂದರ್ಭದಲ್ಲಿ ದೈವ ನರ್ತಕರಿಗೆ ದೈವ ಮೈಮೇಲೆ ಬರುವುದೇ ಸುಳ್ಳು ಎಂಬ ಹೇಳಿಕೆ ನೀಡಿರುವ ಬಿ.ಟಿ ಲಲಿತಾ ನಾಯ್ಕ್ ಮಾತುಗಳಿಗೆ ಈಗ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
 

Post a Comment

0 Comments