ಮೂಡುಬಿದಿರೆ : ನೇತಾಜಿ ಬ್ರಿಗೇಡ್ (ರಿ), ಮೂಡುಬಿದಿರೆ ಇದರ ೩ನೇ ವರ್ಷದ ವಾರ್ಷಿಕೋತ್ಸವದಂಗವಾಗಿ ನಿಟ್ಟೆ ಗಜ್ರಯಾ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಕಳ, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ, ಬೆದ್ರ ಜನಸೇವಾ ಕೇಂದ್ರ ಮತ್ತು ವಿ ಹೆಲ್ತ್ ಟ್ರಸ್ಟ್ ಆಲಂಗಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಜರ, ಉಚಿತ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ ಹಾಗೂ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಅಭಿಯಾನ ಕಾರ್ಯಕ್ರಮವು ಸಮಾಜ ಮಂದಿ ರದಲ್ಲಿ ಭಾನುವಾರ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಮಾ ನವೀಯತೆ ಇಲ್ಲದಿದ್ದರೆ ಆತ ಮನುಷ್ಯನಾಗಲು ಸಾಧ್ಯವಿಲ್ಲ. ಕಳೆದ ೩ ವರ್ಷಗಳಿಂದ ಹಲವಾರು ಜನಪರ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ನೇತಾಜಿ ಬ್ರಿಗೇಡ್ ಸಂಘಟನೆಯು ಮಾನವೀಯ ಅಂಶಗಳನ್ನು ಇಟ್ಟುಕೊಂಡು ಜನ ಸಾಮಾನ್ಯರಿಗೆ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುತ್ತಿರುವುದಲ್ಲದೆ ಸಮಾಜದಲ್ಲಿ ಮಾನವೀಯತೆಯ ನ್ನು ಹುಟ್ಟುಹಾಕುವಂತಹ ಕೆಲಸ ಮಾಡುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ ನಮ್ಮ ದೇಶದಲ್ಲಿ ನಾವು ಎಷ್ಟೇ ಸಬಲರಾಗಿದ್ದರೂ ಬೇರೆ ಬೇರೆ ಕಾರಣಗಳಿಂದ ಕೆಲವರು ಹಿಂದುಳಿದಿದ್ದಾರೆ. ಇವರೆಲ್ಲರನ್ನು ನಾವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಕಾರ್ಯವನ್ನು ಇಂತಹ ಸಂಘಟನೆಯು ಮಾಡಬೇಕಾಗಿದೆ ಎಂದ ಅವರು ಮುಂದಿನ ಡಿಸೆಂಬರ್‌ನಲ್ಲಿ ಮೂಡುಬಿದಿರೆಯಲ್ಲಿ ನಡೆಯುವ ಅಂತರಾಷ್ಟ್ರೀಯ ಜಂಬೂರಿ ಕಾರ್ಯಕ್ರಮದಲ್ಲಿ ಸಹಕರಿಸುವಂತೆ ಕೇಳಕೊಂಡರು.
ಗೌರವಾರ್ಪಣೆ : ಪದ್ಮಶ್ರೀ ಪ್ರಶಸ್ತಿ ವಿಜೇತ ಕೃಷಿಕ ಅಮೈ ಮಹಾಲಿಂಗ ನ್ಯಾಕ್, ಕರ್ನಾಟಕ ಜಾನಪದ ಅಕಾಡೆಮಿಯ ಗೌರವ ಪುರಸ್ಕಾರವನ್ನು ಪಡೆದಿರುವ ವೆಂಕಟೇಶ್ ಬಂಗೇರಾ, ಕವಿ,ಲೇಖಕ ಸದಾನಂದ ನಾರಾವಿ, ಸ್ಪೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯ ವ್ಯವಸ್ಥಾಪಕ ಪ್ರಕಾಶ್ ಶೆಟ್ಟಿಗಾರ್, ಜಿ.ಕೆ. ಡೆಕೋರೇಟರ್‌ನ ಗಣೇಶ್ ಕಾಮತ್, ಪೇಪರ್ ರಾಜಣ್ಣ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅಣ್ಣಿ ಸುವರ್ಣ, ಟಾ ಪ್ ಎಂಟರ್ ಟ್ರೈನನ ರೂಪೇಶ್ ಕುಮಾರ್, ಸರಕಾರಿ ಆಸ್ಪತ್ರೆಯ ನಿವೃತ್ತ ಸಿಬಂದಿ ಜಗದೀಶ್, ಪೌರ ಕಾರ್ಮಿಕ ಬೊಗ್ಗಣ್ಣ, ಹಳೆಯಂಗಡಿ ಚಿನ್ನು ಆರ್ಟ್ಸ್ನ ಧನಂಜಯ್, ಭ್ರಾಮರಿ ಡೆಕೋರೇಟರ್ಸ್ ನ ಎಸ್.ಕುಮಾರ್ ಮಾಸ್ತಿಕಟ್ಟೆ, ಯುವಚಿತ್ರ ಕಲಾವಿದ ತಿಲಕ್ ಕುಲಾಲ್, ಯಕ್ಷ ಕಲಾವಿದ ಮಂದಾರ್ ಮೂಡುಬಿದಿರೆ, ದೈವ ನರ್ತಕ ಅಂಗಾರ ಮಿಜಾರು ಅವರ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಸದಸ್ಯ ರಾಜೇಶ್ ನಾಯ್ಡ್, ಕಾರ್ಕಳ ನಿಟ್ಟೆ ಗಜ್ರಿಯಾ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸಚ್ಚಿದಾನಂದ ಪ್ರಭು, ಅಂಚೆ ಇಲಾಖೆ ಪುತ್ತೂರು ವಿಭಾಗದ ಕಾರ್ಯ ನಿರ್ವಾಹಕ ಗುರುಪ್ರಸಾದ್, ವಿ ಹೆಲ್ತ್ ಟ್ರಸ್ಟ್ ಆಲಂಗಾರು ಇದರ ಅಧ್ಯಕ್ಷೆ ಡಾ|ಮಧುಮಾಲಾ, ಮನಶಾಸ್ತ್ರಜ್ಞೆ ಸುಶ್ಮಿತಾ ಬಿ.ಆರ್., ಆಸ್ಪತ್ರೆಯ ಸಾರ್ವಜನಿಕ ಸಂ ಪರ್ಕ ಅಧಿಕಾರಿ ಶುಭಕರ ಅಂಚನ್, ಅತಿಥಿಗಳಾಗಿ ಭಾಗವಹಿಸಿದ್ದರು.
ನೇತಾಜಿ ಬ್ರಿಗೇಡ್‌ನ ಸಂಚಾಲಕ ರಾಹುಲ್ ಕುಲಾಲ್ ಸ್ವಾಗತಿಸಿದರು. ಮಜಾ ಭಾರತದ ಕಲಾವಿದ ಶಿವರಾಜ್ ಕರ್ಕೇರಾ ಸನ್ಮಾನಿತರ ಪತ್ರ ವಾಚಿಸಿದರು. ಕ್ಲೇರೆನ್ಸ್ ಸಿಕ್ವೆರಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
0 Comments