ನ್ಯಾಯಮೂರ್ತಿಗಳು ಆಗಮಿಸಿದ ಸಂದರ್ಭದಲ್ಲಿ ಭವನದ ಕಾಮಗಾರಿಯನ್ನು ವೀಕ್ಷಿಸಿದರು. ಮುಖ್ಯಧ್ವಾರಕ್ಕೆ ಗಾಜಿನ ಬಾಗಿಲನ್ನು ಅಳವಡಿಸಿರುವುದನ್ನು ಕಂಡು ಪ್ರಶ್ನಿಸಿದ ಅವರು ತಕ್ಷಣ ತೆರವುಗೊಳಿಸಿ, ಮರದ ಬಾಗಿಲನ್ನು ಅಳವಡಿಸುವಂತೆಯೂ ಮತ್ತು ಫ್ಯಾನ್ ಗಳನ್ನು ಬದಲಾಯಿಸುವಂತೆಯೂ ಸ್ಥಳದಲ್ಲಿದ್ದ ಮುಖ್ಯ ಎಂಜಿನಿಯರ್‌ಗೆ ಸೂಚಿಸಿದರು. ಹಾಗೂ ಕಾಮಗಾರಿ ಬಗ್ಗೆ ಪ್ರಶ್ನಿಸಿದ್ದಾರೆ.
ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದ ಇಂಜಿನಿಯರ್ ಎಸ್ಟಿಮೆಶನ್ ನಲ್ಲಿ ಮರದ ಬಾಗಿಲು ಅನ್ವಯಿಸುವಂತೆ ಹಾಕಿಲ್ಲ. ಅದರಲ್ಲಿ ಗಾಜಿನ ಬಾಗಿಲು ಅಳವಡಿಸುವಂತೆ ನಮೂದಿಸಲಾಗಿದೆ. ಹೀಗಾಗಿ ಎಸ್ಟಿಮೇಶನ್ ಪ್ರಕಾರ ಕಾಮಗಾರಿ ನಡೆಸಲಾಗಿದೆ ಎಂದು ತಿಳಿಸಿದರು.
ನ್ಯಾಯಮೂರ್ತಿಗಳ ಉತ್ತರಕ್ಕೆ ಅಸಮಾಧಾನಗೊಂಡ ನ್ಯಾಯಾಧೀಶರು ಸಮರ್ಪಕವಾಗಿ ಕಾಮಗಾರಿ ನಡೆಸಿ ಎಂದು ಸೂಚನೆ ನೀಡಿದರು. ನಂತರ ಜಿಲ್ಲಾ ನ್ಯಾಯಾಧೀಶರು ಈ ಬಗ್ಗೆ ಸಮರ್ಪಕವಾದ ಮಾಹಿತಿಯನ್ನು ದಾಖಲೆ ಸಮೇತ ವಿವರಿಸಿದ್ದು ನ್ಯಾಯಮೂರ್ತಿಗಳು ಅದನ್ನು ಒಪ್ಪಿಕೊಂಡು ಮುಂದಿನ ಕಾಮಗಾರಿಗಳ ಬಗ್ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
0 Comments