ಹೈನುಗಾರಿಕೆಯಲ್ಲಿಯೇ ಜೀವನಸಾಗಿಸುತ್ತಿರುವ ಈದು ಗ್ರಾಮದ ಕಂಟಾವು ಬಳಿಯ ಶ್ರೀ ಶಾಂತಿಪ್ರಸಾದ್ ,ಶ್ರೀಮತಿ ಸನ್ಮತಿ ಜೈನ್ ಇವರಿಗೆ, ದುಡಿಯಲು ಅಶಕ್ತರಾಗಿರುವ ಮಗನೊಡನೆ ಜೀವನಸಾಗಿಸುತ್ತಿರುವ ಪಾಜಿನಡ್ಕ ಸಂಕಬೆಟ್ಟ ಮುಡಾರಿನ ಕಮಲ ಮೊಯ್ಲಿ ಇವರಿಗೆ ಗೋದಾನ ಮಾಡಿದ್ದಾರೆ.
ಹಸುವಿನಂದಲೇ ಜೀವನದ ಬಂಡಿ ಸಾಗಿಸುತ್ತಿರುವ ನಿಟ್ಟೆ ದೂಪದಕಟ್ಟೆ ಕೌಡೊಟ್ಟು ಸುನೀಲ್ ಆದಿದ್ರಾವಿಡ ಬೇಬಿ ಆದಿ ದ್ರಾವಿಡ ಇವರಿಗೆ,
ಒಂದು ತಿಂಗಳಲ್ಲಿ ಮೂರು ದನ ಕಳಕೊಂಡಿರುವ ಮೀಯ್ಯಾರು -ಸಾಣೂರ್ ಜೋಡುಕಟ್ಟೆಯ ಸುಂದರ ದೇವಾಡಿಗ- ಸುಶೀಲ ದೇವಾಡಿಗ ಇವರ ಮನೆಗೆ ಹಾಗೂ
ಒಂದು ತಿಂಗಳ ಅವಧಿಯಲ್ಲಿ ಎರಡು ಹಸು ಕಳ್ಳರಿಗೆ ಪಾಲಾದ ಹೆಬ್ರಿ ಬೇಳಿಂಜೆಯ ಕೆಪ್ಪೆಕೆರೆಯ ಮಂಜುನಾಥ ನಾಯ್ಕ್ ಇವರ ಮನೆಗೆ ತೆರಳಿ ಹಾಲು ಕೊಡುವ ಅತ್ಯುತ್ತಮ ತಳಿಯ ಹಸುಗಳನ್ನು ದಾನ ಮಾಡಿದರು.
1 Comments
Appreciate your help
ReplyDelete