ಗೋಕಳ್ಳರ ಹಾವಳಿಯಿಂದ ಬಳಲಿದ್ದ ಕುಟುಂಬಗಳಿಗೆ ಗೋದಾನ: ದೀಪಾವಳಿ ಹಬ್ಬದಂದು ಗೋದಾನ ಮಾಡಿದ ಉದ್ಯಮಿ ರವೀಂದ್ರ ಶೆಟ್ಟಿ ದಂಪತಿ.

ಜಾಹೀರಾತು/Advertisment
ಜಾಹೀರಾತು/Advertisment

ಹಿಂದೂ ಧಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಉದ್ಯಮಿ ಹಾಗೂ ಕರ್ನಾಟಕ ಕ್ವಾರಿ ಓನರ್ಸ್ ಅಸೋಸಿಯೇಷನ್ ನ ರಾಜ್ಯಾಧ್ಯಕ್ಷರಾದ ಶ್ರೀ ರವೀಂದ್ರ ಶೆಟ್ಟಿ ಬಜಗೋಳಿ ದಂಪತಿಗಳು ದೀಪಾವಳಿಯ ದಿನದಂದು ಕಳೆದ ವರ್ಷದಂತೆಯೇ ಈ ವರ್ಷವೂ ಅಶಕ್ತ ಹಿಂದೂ ಕುಟುಂಬಳಿಗೆ ಗೋ ದಾನವನ್ನು ಮಾಡಿದರು. 


ಹೈನುಗಾರಿಕೆಯಲ್ಲಿಯೇ ಜೀವನಸಾಗಿಸುತ್ತಿರುವ ಈದು ಗ್ರಾಮದ ಕಂಟಾವು ಬಳಿಯ ಶ್ರೀ ಶಾಂತಿಪ್ರಸಾದ್ ,ಶ್ರೀಮತಿ ಸನ್ಮತಿ ಜೈನ್ ಇವರಿಗೆ, ದುಡಿಯಲು ಅಶಕ್ತರಾಗಿರುವ ಮಗನೊಡನೆ ಜೀವನಸಾಗಿಸುತ್ತಿರುವ ಪಾಜಿನಡ್ಕ ಸಂಕಬೆಟ್ಟ ಮುಡಾರಿನ ಕಮಲ ಮೊಯ್ಲಿ ಇವರಿಗೆ ಗೋದಾನ ಮಾಡಿದ್ದಾರೆ.


ಹಸುವಿನಂದಲೇ ಜೀವನದ ಬಂಡಿ ಸಾಗಿಸುತ್ತಿರುವ ನಿಟ್ಟೆ ದೂಪದಕಟ್ಟೆ ಕೌಡೊಟ್ಟು ಸುನೀಲ್ ಆದಿದ್ರಾವಿಡ ಬೇಬಿ ಆದಿ ದ್ರಾವಿಡ ಇವರಿಗೆ,


ಒಂದು ತಿಂಗಳಲ್ಲಿ ಮೂರು ದನ ಕಳಕೊಂಡಿರುವ ಮೀಯ್ಯಾರು -ಸಾಣೂರ್ ಜೋಡುಕಟ್ಟೆಯ ಸುಂದರ ದೇವಾಡಿಗ- ಸುಶೀಲ ದೇವಾಡಿಗ ಇವರ ಮನೆಗೆ ಹಾಗೂ


ಒಂದು ತಿಂಗಳ ಅವಧಿಯಲ್ಲಿ ಎರಡು ಹಸು ಕಳ್ಳರಿಗೆ ಪಾಲಾದ ಹೆಬ್ರಿ ಬೇಳಿಂಜೆಯ ಕೆಪ್ಪೆಕೆರೆಯ ಮಂಜುನಾಥ ನಾಯ್ಕ್ ಇವರ ಮನೆಗೆ ತೆರಳಿ ಹಾಲು ಕೊಡುವ ಅತ್ಯುತ್ತಮ ತಳಿಯ ಹಸುಗಳನ್ನು ದಾನ ಮಾಡಿದರು. 

Post a Comment

1 Comments