ಮಂಗಳೂರು: ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಸಾಲುಮರದ ತಿಮ್ಮಕ್ಕ ಭೇಟಿ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

 


ಉಳ್ಳಾಲ: ಕುತ್ತಾರಿನ ಕೊರಗಜ್ಜನ ಆದಿಸ್ಥಳಕ್ಕೆ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರು ಇಂದು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಕರಾವಳಿಯಲ್ಲಿ ಕಾರಣೀಕ ಶಕ್ತಿಯಾಗಿರುವ ಕೊರಗಜ್ಜ ದೈವಕ್ಕೆ ದೇಶ ವಿದೇಶಗಳಲ್ಲಿ ಅಸಂಖ್ಯಾತ ಭಕ್ತರಿದ್ದಾರೆ.

ಕುತ್ತಾರಿನ ಕೊರಗತನಿಯ ದೈವದ ಆದಿ ಸ್ಥಳಕ್ಕೆ ರಾಜ್ಯ ಮಾತ್ರವಲ್ಲದೆ ದೇಶದ ಮೂಲೆ ಮೂಲೆಗಳಿಂದ ದಿನನಿತ್ಯಲೂ ಸಾವಿರಾರು ಭಕ್ತರು ಭೇಟಿ ನೀಡಿ ಇಷ್ಟಾರ್ಥ ಸಿದ್ಧಿಗಳನ್ನ ನೆರವೇರಿಸುವಂತೆ ಪ್ರಾರ್ಥಿಸಿ, ಹರಕೆ ಹೊರುತ್ತಾರೆ. ಇಂದು ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕನವರೂ ಕೊರಗಜ್ಜನ ಆದಿ ಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ತಿಮ್ಮಕ್ಕನವರು ತನ್ನ ಸ್ವಂತಕ್ಕೇನೂ ಕೇಳದೆ ದೇಶಕ್ಕೆ ಬಂದಿರುವ ಮಾರಕ ಕಾಯಿಲೆಗಳು ದೂರವಾಗಿ,ಜನರಿಗೆ ಸುಭೀಕ್ಷೆ ದೊರಕುವಂತೆ ದೈವದಲ್ಲಿ ಪ್ರಾರ್ಥಿಸಿದ್ದಾರೆ. ತಿಮ್ಮಕ್ಕ ಅಜ್ಜಿಯ ಜೊತೆ ಸ್ಥಳೀಯರು ಸೆಲ್ಸಿ ಕ್ಲಿಕ್ಕಿಸಿ ಸಂಭ್ರಮಿಸಿದರು.

Post a Comment

0 Comments

Advertisement