ಹಿಂದೂ ಕಾರ್ಯಕರ್ತರಿಗೆ ಗುಪ್ತಚರ ಇಲಾಖೆಯ ಎಚ್ಚರಿಕೆಯ ಸಂದೇಶ.!SDPI ಕಾರ್ಯಕರ್ತರ ಬಂಧನ ಹಿನ್ನೆಲೆ

ಜಾಹೀರಾತು/Advertisment
ಜಾಹೀರಾತು/Advertisment


ದೇಶದಾದ್ಯಂತ SDPI ಮತ್ತು PFI ನಾಯಕರ ಮನೆಗಳ ಮತ್ತು ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ (NIA) ದಾಳಿ ನಡೆಸಿದ್ದು ಈ ಹಿನ್ನೆಲೆಯಲ್ಲಿ ಆರೆಸ್ಸೆಸ್ ಹಾಗೂ ಹಿಂದೂ ಕಾರ್ಯಕರ್ತರು ಎಚ್ಚರದಿಂದಿರುವಂತೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅನೇಕ ಕಡೆಗಳಲ್ಲಿ PFI ಹಾಗೂ SDPI ಕಚೇರಿಗಳ ಮೇಲೆ NIA ದಾಳಿ ನಡೆಸಿದ್ದು ಇದರಿಂದ ಆ ಪಕ್ಷಗಳ ಅಥವಾ ಸಂಘಟನೆಗಳ ಕಾರ್ಯಕರ್ತರು ಗಲಭೆ ನಡೆಸುವ ಹುನ್ನಾರ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರುವ ಗಲಭೆಗಳು ಅಥವಾ ಪ್ರಚೋದನಕಾರಿ ಘಟನೆಗಳ ನಡೆಸಬಹುದೆಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ಮತ್ತು ಆರೆಸ್ಸೆಸ್ ಸಂಘಟಕರು ಎಚ್ಚರದಿಂದಿರುವಂತೆ ಮಾಹಿತಿ ನೀಡಿದೆ ಎನ್ನಲಾಗಿದೆ. 

Post a Comment

0 Comments