ಪ್ರವೀಣ್ ನೆಟ್ಟಾರ್ ಹತ್ಯೆಯ ಹಿಂದೆ ಬಿದ್ದ NIA:ಹತ್ಯೆಯ ಹಿಂದಿದೆಯಾ ಅಂತರಾಷ್ಟ್ರೀಯ ಲಿಂಕ್.?

ಪ್ರವೀಣ್ ನೆಟ್ಟಾರ್ ಹತ್ಯೆಯ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ  (NIA) ಬಹಳಷ್ಟು ಸೀರಿಯಸ್ಸಾಗಿ ತೆಗೆದುಕೊಂಡಿದ್ದು ಇಂದು ಮತ್ತೆ ದೇಶದಾದ್ಯಂತ ಎಲ್ಲಾ 35  ಕಡೆಗಳಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಇತ್ತೀಚಿಗೆ ಎಸ್‌ಡಿಪಿಐ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್‌ಡಿಪಿಐ ಮುಖಂಡನ ಮನೆಯ ಮೇಲೆ  ದಾಳಿ ನಡೆಸಿತ್ತು ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಇದೀಗ ಇಂದು ಮುಂಜಾನೆ ಮೂರು ಗಂಟೆಯ ಹೊತ್ತಿನಲ್ಲಿ ಮಂಗಳೂರು, ಕೇರಳ, ಉತ್ತರ ಪ್ರದೇಶ,  ಮಹಾರಾಷ್ಟ್ರ ಸೇರಿದಂತೆ ಒಟ್ಟು 35 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ವಿಚಾರಣೆಯನ್ನು ನಡೆಸುತ್ತಿದೆ.


  ಎಸ್‌ಡಿಪಿಐ ನಾಯಕರ ಮನೆ ಮತ್ತು  ಕಚೇರಿಗಳನ್ನು ಗುರಿಯಾಗಿಸಿಕೊಂಡ ಎನ್ ಐ ಎ ಅಧಿಕಾರಿಗಳು  ಪ್ರವೀಣ್ ನೆಟ್ಟಾರ್ ಹತ್ಯೆ ಮಾತ್ರವಲ್ಲದೆ ದೇಶದಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳ ಲಿಂಕ್ ಗಳ ಬಗ್ಗೆ ತನಿಖೆ ನಡೆಸುತ್ತಿದೆ. ಈ ನಡುವೆ ಪ್ರವೀಣ್ ನೆಟ್ಟಾರ್ ಹತ್ಯೆಯ ಹಿಂದೆ ಅಂತರಾಷ್ಟ್ರೀಯ ಲಿಂಕ್ ಇದೆಯಾ ಎಂಬ ಬಗ್ಗೆಯೂ ಗಾಢವಾಗಿ ಚರ್ಚೆ ನಡೆಯುತ್ತಿದ್ದು ಈ ಬಗ್ಗೆಯೂ NIA ತನಿಖೆ ನಡೆಸುತ್ತಿದೆ.


ಒಟ್ಟಿನಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆಯ ವಿಚಾರವಾಗಿ NIA ಅಧಿಕಾರಿಗಳು ಎಸ್‌ಡಿಪಿಐ ನಾಯಕರನ್ನು ಬೆಂಬಿಡದೆ ಕಾಡುತ್ತಿದ್ದು ಹಂತಕರು ಮಾತ್ರವಲ್ಲದೆ ಸಂಘಟನೆಯ ಪ್ರಮುಖರಿಗೂ ಇದು ಕಂಟಕವಾಗಿ ಪರಿಣಮಿಸಿದೆ.

 

Post a Comment

0 Comments

Advertisement