ಕರ್ನಾಟಕ ರಾಜ್ಯ ಪರವನ್ ಪದಾಧಿಕಾರಿಗಳ ಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡಬಿದ್ರೆ: ಕರ್ನಾಟಕ ರಾಜ್ಯ ಪರವನ್ ಸಂಘದ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಸಂಘದ ಕೇಂದ್ರ ಕಚೇರಿ ಮೂಡುಬಿದಿರೆಯಲ್ಲಿ ನಡೆಯಿತು. ಡಾ. ರವೀಶ್ ಪಡುಮಲೆಯವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಪ್ರಸಿದ್ಧ ದ್ಯೇವ ನರ್ತಕ ನಾರಾಯಣ ಅಧ್ಯಕ್ಷರಾಗಿ, ಸುರೇಶ್ ಮರೋಡಿ ಉಪಾಧ್ಯಕ್ಷರಾಗಿ ಬಾಚೆಕೆರೆ ನಿರಂಜನ್ ರವರನ್ನು ಕಾರ್ಯದರ್ಶಿಯಾಗಿ ನೇಮಿಸಿದರು. ಗೌರವಾಧ್ಯಕ್ಷರುಗಳಾಗಿ ನಾರಾಯಣ ಗಾಂಧಿನಗರ, ಚುಕುಡ ಕಾರ್ಕಳ, ಸೀನಾ ಮಾಲಾಡಿ, ಉಮೇಶ್ ಇರುವೆ, ಓಬಯ್ಯ ಸಾಣೂರು, ಬಾಬು ಮಿಜಾರು ಆಯ್ಕೆಯಾದರು. ಜೊತೆ ಕಾರ್ಯದರ್ಶಿಯಾಗಿ ರಾಜು ಮಾರ್ನಾಡು, ಸುರೇಂದ್ರ ಪೊಳಲಿ ಕೋಶಾಧಿಕಾರಿಯಾಗಿ ಅಶೋಕ ಇರುವರು ಮತ್ತು ಸಂತೋಷ್ ನೀರುಡೆ, ಸುಧೀರ್ ಬಜೆಗೋಳಿ ,ಯೋಗೇಶ್ ಸಾಣೂರು, ಸುಕುಮಾರ್ ನಿಟ್ಟೆ, ದಾಮೋದರ ಮಾಡಾವು, ಸಂತೋಷ್ ಮಾಳ, ಪ್ರವೀಣ್ ಸಿದ್ದಕಟ್ಟೆ, ಶಿವಾನಂದ ಗಾಂಧಿ, ಪ್ರವೀಣ್ ಕಕ್ಕಿಂಜೆ ,ಡಾ.ಪ್ರಭಾಕರ ಕರಿಂಜೆ, ಜಗನ್ನಾಥ ಕೊಣಜೆ, ಜಗನ್ನಾಥ ಕೋಣ ಶಿರ್ತಾಡಿ, ಸುರೇಶ್ ಬೆದ್ರ, ಬಾಬು ತೊಡರ, ರಮೇಶ್ ಮರೋಡಿ ಸದಸ್ಯರಾಗಿ ನೇಮಕಗೊಂಡರು. 

 ಬಾಚಕೆರೆ ಕ್ಷೇತ್ರದ ಧರ್ಮದರ್ಶಿ, ದೇಜಪ್ಪ ಅವರು ಭಾಗವಹಿಸಿ ಶುಭ ಹಾರೈಸಿದರು. 300ಕ್ಕೂ ಅಧಿಕ ಸಂಖ್ಯೆಯಲ್ಲಿ ಪರವನ್ ಸಮುದಾಯದ ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಘದ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು ಮತ್ತು ಇತ್ತೀಚೆಗೆ ದಿವಂಗತರಾದ ಸಂಘದ ಸ್ಥಾಪಕ ಅಧ್ಯಕ್ಷರು ದಿ.ಗಂಗಯ್ಯ ಪರವನಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

Post a Comment

0 Comments