ಬಂಧಿತ ಪಿಎಫ್‌ಐ ಕಾರ್ಯಕರ್ತರ ಮೊಬೈಲ್‌ನಲ್ಲಿತ್ತು ಸಾಕ್ಷ್ಯಗಳನ್ನೇ ನಾಶ ಮಾಡುವ ಆ್ಯಪ್ ಪೊಲೀಸ್ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು !

ಜಾಹೀರಾತು/Advertisment
ಜಾಹೀರಾತು/Advertisment

 

ಬೆಂಗಳೂರು : ಕೆಲವು ಉಗ್ರ ಸಂಘಟನೆಯ ಜತೆ ಸಂಪರ್ಕವಿರಿಸಿ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ಕುರಿತು ಮಾಹಿತಿ ಕಲೆಹಾಕಿ ಎನ್‌ಐಎ ಪಿಎಫ್‌ಐ ನಾಯಕರ ಕಚೇರಿ ಹಾಗೂ ಮನೆಗಳಿಗೆ ದಾಳಿ ನಡೆಸಿ ಹಲವು ಶಂಕಿತ ಬಂಧಿಸಿತ್ತು. ಇದೀಗ ಬಂಧಿತ ಪಿಎಫ್‌ಐ ಕಾರ್ಯಕರ್ತರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಬೆಂಗಳೂರು ಪೊಲೀಸರು ಹಲವು ಸ್ಫೋಟಕ ಮಾಹಿತಿಯನ್ನು ಕಲೆಹಾಕಿದ್ದಾರೆ.

ಪೊಲೀಸ್ ತನಿಖೆಯ ವೇಳೆ ಪಿಎಫ್‌ಐ ಕಾರ್ಯಕರ್ತರು ತಾವು ವಿಧ್ವಂಸಕ ಕೃತ್ಯಗಳನ್ನು ಎಸಗಲು ಹೂಡಿರುವ ಸಂಚಿನ ಮಾಹಿತಿಗಳು ಕರೆಗಳ ಮಾಹಿತಿಗಳು ಪೊಲೀಸರಿಗೆ ಸಿಗದಂತೆ ಸಾಕ್ಷ್ಯಗಳನ್ನೇ ನಾಶಪಡಿಸುವ ಕುರಿತು ಬಂಧಿತರೇ ಹೊಸದಾಗಿ ಆ್ಯಪ್ ಸಿದ್ಧಪಡಿಸಿದ್ದರು. ಎನ್ನುವುದು ಬಯಲಾಗಿದೆ.

ಬಂಧಿತ ಎಲ್ಲರ ಮೊಬೈಲ್‌ನಲ್ಲಿ ತಾವೇ ಸಿದ್ಧಪಡಿಸಿದ ಐ ರೀಡರ್ ಎನ್ನುವ ಆ್ಯಪ್ ಪತ್ತೆಯಾಗಿದೆ. ಎನ್ಐಎ ಹಾಗೂ ಬೆಂಗಳೂರು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆನಡೆಸಿ ಹಲವು ಸ್ಫೋಟಕ ಮಾಹಿತಿ ಕಲೆಹಾಕಿದ್ದಾರೆ. ಬಂಧಿತ ಪಿಎಫ್‌ಐ ಕಾರ್ಯಕರ್ತರಿಗೆ ಉಗ್ರರ ಜತೆ ಸಂಪರ್ಕ ಹೊಂದಿರುವ ಕುರಿತು ವಿಚಾರಣೆ ತೀವ್ರಗೊಳಿಸಿರುವ ಎನ್‌ಐಎಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸುತ್ತಿದೆ.

Post a Comment

0 Comments