ಮೂಡುಬಿದಿರೆ ಎ.ಜಿ. ಸೋನ್ಸ್ ಐಟಿಐಯಲ್ಲಿ ಘಟಿಕೋತ್ಸವ

 

ಎ.ಜಿ. ಸೋನ್ಸ್ ಐಟಿಯಲ್ಲಿ ತರಬೇತಿ ಪಡೆದ 2021-22ನೇ ಸಾಲಿನ ಘಟಿಕೋತ್ಸವ ಕಾರ್ಯಕ್ರಮ ಇಂದು ಎ.ಜಿ.ಸೋನ್ಸ್ ಐಟಿಐ ಅಡಿಟೋರಿಯಂನಲ್ಲಿ ನೆರವೇರಿತು.

ಎಸ್‌ಎಂಸಿ ಟ್ರಸ್ಟ್ ವಿಶ್ವಸ್ಥ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಐಟಿಐ ವಿದ್ಯಾಭ್ಯಾಸ ಪಡೆದವರಿಗೆ ವಿಪುಲ ಅವಕಾಶಗಳಿವೆ. ಬದುಕಿನಲ್ಲಿ ಛಲ ಮತ್ತು ಪ್ರಯತ್ನದೊಂದಿಗೆ ಶ್ರೇಷ್ಠತೆಯನ್ನು ಪಡೆದುಕೊಳ್ಳುವಂತೆ ಸಲಹೆಯಿತ್ತರು.

ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಕಾರ್ಯದರ್ಶಿ ಡಾ. ರಾಧಕೃಷ್ಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಐಟಿಐ ಪ್ರಾಂಶುಪಾಲ ಜಯರಾಮ ಶೆಟ್ಟಿಗಾರ್ ವೇದಿಕೆಯಲ್ಲಿದ್ದರು.

ಮುಖ್ಯ ಅತಿಥಿಗಳಾಗಿದ್ದ ಹಳೆ ವಿದ್ಯಾರ್ಥಿಗಳಾದ ಉಳ್ಳಾಲ ಎಸ್‌ಎಮ್ ಐಟಿಐಯ ಡೆನ್ನಿಸ್ ವಾಸ್, ಹುಂಡೈ ಕನ್‌ಸ್ಟ್ರಕ್ಷನ್‌ನ ಪ್ರೊಡಕ್ಷನ್ ಮ್ಯಾನೇಜರ್ ಅನಿಲ್ ಕುಮಾರ್, ತಾಂತ್ರಿಕ ಜೀವನದ ಅನುಭವಗಳನ್ನು ಪ್ರಕಟಿಸಿದರು.

ಸಮಾರಂಭದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಆಡಳಿತ ಮಂಡಳಿ ಸದಸ್ಯರಾದ ರಾಮ್‌ನಾಥ್ ಭಟ್, ಪ್ರೇಮಚಂದ್ರ ಶೆಟ್ಟಿ, ವಿವಿಧ ಸಂಸ್ಥೆಗಳ ಪ್ರಾಂಶುಪಾಲರಾದ ಜೆ.ಜೆ. ಪಿಂಟೋ, ರಮೇಶ್ ಭಟ್ ಅವರು ಭಾಗವಹಿಸಿದ್ದರು.

ಜಯರಾಮ್ ಶೆಟ್ಟಿಗಾರ್ ಸ್ವಾಗತಿಸಿದರು. ಹರೀಶ್ ಕುಮಾರ್ ಪದವಿ ಪುರಸ್ಕೃತರನ್ನು ಪರಿಚಯಿಸಿದರು. ರಾಮಚಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು

Post a Comment

0 Comments

Advertisement