ಬಿಜೆಪಿ ಪಕ್ಷಕ್ಕೆ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಮುಖ್ಯ-ಜಿ.ಎನ್ ನಾಗರಾಜ್

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಜನವಿರೋಧಿ, ದೇಶವಿರೋಧಿ ಆಡಳಿತವನ್ನು ವಿರೋಧಿಸಿ ಮತ್ತು ವಿಪರೀತ ಬೆಲೆ ಏರಿಕೆಯನ್ನು ಖಂಡಿಸಿ ಸಿ.ಪಿ.ಐ.ಎಂನ ತಾಲೂಕು ಸಮಿತಿ ವತಿಯಿಂದ ಸೋಮವಾರ ಆಡಳಿತ ಸೌಧದ ಮುಂಭಾಗದಲ್ಲಿ ಪ್ರಚಾರಾಂದೋಲನ ನಡೆಯಿತು.

 ಸಿ.ಪಿ.ಐ.ಎಂನ ರಾಜ್ಯ ಸಮಿತಿಯ ಸದಸ್ಯ ಜಿ.ಎನ್ ನಾಗರಾಜ್ ಅವರು  ಪ್ರಚಾರಾಂದೋಲನವನ್ನು ಉದ್ದೇಶಿಸಿ ಮಾತನಾಡಿ ನಿರುದ್ಯೋಗ, ಹಣದುಬ್ಬರ, ದೇಶದ ಸಂಪತ್ತಿನ ಲೂಟಿ ಮತ್ತು ಭ್ರಷ್ಟಾಚಾರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ರಾಜ್ಯ ಮತ್ತು ಕೇಂದ್ರವನ್ನು ಆಡಳಿತ ಮಾಡುವ ಬಿಜೆಪಿ ಪಕ್ಷಕ್ಕೆ  ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಮುಖ್ಯ  ಜನರ ಬದುಕನ್ನು ಸುಧಾರಿಸುವುದಾಗಲಿ, ಉತ್ತಮಪಡಿಸಬೇಕೆಂಬ  ಉದ್ದೇಶ ಅವರಲ್ಲಿಲ್ಲ. ಬದಲಾಗಿ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಏನೆಲ್ಲಾ ಮಾಡಬೇಕೋ ಅದೆಲ್ಲವನ್ನು ಈ ಬಿಜೆಪಿ ಪಕ್ಷವು ಮಾಡುತ್ತಿದೆ ಎಂದು  ಅಸಮಾಧಾನ ವ್ಯಕ್ತಪಡಿಸಿದರು.

 

ಮೋದಿ ಸರ್ಕಾರವು ಎಲ್ಲವನ್ನೂ ಖಾಸಗೀಕರಣಗೊಳಿಸಿ ಅದಾನಿ, ಅಂಬಾನಿಯಂತಹ ದೊಡ್ಡ ಉದ್ಯಮಿಗಳಿಗೆ ನೀಡಿ, ಅವರುಗಳು ಲಾಭ ಪಡೆಯುವಂತಾಗಿದೆ ಎಂದರು.

ಬೆಲೆ ಏರಿಕೆ ಎಂಬುದು ಇತ್ತೀಚಿನ ದಿನಗಳಲ್ಲಿ ತೀರಾ ಹೆಚ್ಚಿದ್ದು, ನಿಮ್ಮ‌ ದುಡಿಮೆಯನ್ನು ಕೊಳ್ಳೆ ಹೊಡೆಯುವುದಕ್ಕೆ ನೀವು ಬಿಡುತ್ತೀರಾ? ಬೆಲೆ ಏರಿಕೆಯ ವಿರುದ್ಧ  ತಿರುಗೇಟು ನೀಡಲು ಇರುವ ಒಂದೇ ಒಂದು ಮಾರ್ಗವೆಂದರೆ ಪ್ರತಿಭಟನೆ. ಬೆಲೆ ಏರಿಕೆಯಿಂದಾಗಿ ಯಾರೆಲ್ಲಾ ಕಷ್ಟಪಡುತ್ತಿದ್ದರೋ ಅವರನ್ನೆಲ್ಲಾ ಬೀದಿಗಿಳಿಸಿ ಪ್ರತಿಭಟನೆಯನ್ನು ನಡೆಸಬೇಕೆಂದು ಕರೆ ಕೊಟ್ಟರು.

ಸಿ.ಪಿ.ಐ.ಎಂ ನ  ಜಿಲ್ಲಾ ಕಾರ್ಯದರ್ಶಿ ಕೆ.ಯಾದವ್ ಶೆಟ್ಟಿ ಮಾತನಾಡಿ, ಕೋಟ್ಯಾಂತರ ಜನ ಸಮುದಾಯದಲ್ಲಿ ಭಾವನೆಗಳನ್ನು ಕೆದಕಿ,ಭಾವನಾತ್ಮಕ ವಿಚಾರಗಳನ್ನು ಜನರ ಮುಂದೆ ತಂದಿಟ್ಟು ನಮ್ಮ ಇಡೀ ಸಂಪತ್ತನ್ನು ಅಂಬಾನಿ, ಅದಾನಿಯಂತಹ ದೊಡ್ಡ-ದೊಡ್ಡ ಉದ್ಯಮಿಗಳಿಗೆ ನೀಡಿ ಎಲ್ಲವನ್ನೂ ಖಾಸಗೀಕರಣಗೊಳಿಸಿದ ಈ ಸರಕಾರ ಯಾರಿಗಾಗಿ ಎಂಬುದನ್ನು ನೀವು ಅರಿಯಬೇಕೆಂದು ತಿಳಿಸಿದರು.

ಸಿಪಿಐಎಂನ ತಾಲೂಕು ಕಾರ್ಯದರ್ಶಿ ರಮಣಿ ಉಪಸ್ಥಿತರಿದ್ದರು.

Post a Comment

0 Comments