ಕನ್ನಡತಿ ಸುಧಾಮೂರ್ತಿ ಹಾಗೂ ಟಾಟಾ ದಿಗ್ಗಜ ರತನ್ ಟಾಟಾರವರಿಗೆ ಅತ್ಯುನ್ನತ ಹುದ್ದೆಯನ್ನು ನೀಡಿದ ಕೇಂದ್ರ ಸರ್ಕಾರ

ಜಾಹೀರಾತು/Advertisment
ಜಾಹೀರಾತು/Advertisment

ಪ್ರಧಾನಮಂತ್ರಿ ಕೇರ್ಸ್ ಫಂಡ್ ಟ್ರಸ್ಟಿಗೆ ಕರ್ನಾಟಕದ ಉದ್ಯಮಿ ಸುಧಾಮೂರ್ತಿ ಮತ್ತು ದೇಶದ ಪ್ರತಿಷ್ಠಿತ ಟಾಟಾ ಸಮೂಹದ ಅಧ್ಯಕ್ಷರಾದ ರತನ್ ಟಾಟಾ ಅವರನ್ನು ನೇಮಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ಪ್ರಧಾನಮಂತ್ರಿ ಕೇರ್ಸ್ ಫಂಡ್ ಟ್ರಸ್ಟಿಗೆ ದೇಶದ ಕೋಟ್ಯಾಂತರ ಜನರು ದೇಣಿಗೆಯನ್ನು ನೀಡಿದ್ದು ಇದರ ಟ್ರಸ್ಟಿಗೆ ಇಬ್ಬರು ಮೇರು ಉದ್ಯಮಿಗಳು ಮತ್ತು ದೇಶಭಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಿದ್ದು ಕೇಂದ್ರ ಸರ್ಕಾರಕ್ಕೆ ಮತ್ತೊಂದು ಗರಿ ಬಂದಿದೆ.


ಟಾಟಾ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ದೇಶಕ್ಕೆ ಅಮೂಲಾಗ್ರ ಸೇವೆಯನ್ನು ಒದಗಿಸಿದ ರತನ್ ಟಾಟಾ ಮತ್ತು ಇನ್ಫೋಸಿಸ್ ಮೂಲದ ದೇಶದ ಸಾವಿರಾರು ಯುವಕರಿಗೆ ಉದ್ಯೋಗವನ್ನು ನೀಡಿ ವಿಶ್ವದಲ್ಲೇ ಹೆಗ್ಗಳಿಕೆ ಪಡೆದ ಸಂಸ್ಥೆಯನ್ನಾಗಿ ಮಾಡಿದ ಸುಧಾಮೂರ್ತಿ ಅವರಿಗೂ ಈ ಟ್ರಸ್ಟಿನಲ್ಲಿ ಸ್ಥಾನಮಾನ ದೊರೆತಿದ್ದು ಕನ್ನಡಕ್ಕೂ ಕರ್ನಾಟಕಕ್ಕೂ ಸಂದ ಗೌರವವಾಗಿದೆ.
 

Post a Comment

0 Comments