ಮೂಡುಬಿದಿರೆ: ಸಮಾಜ ಮಂದಿರದಲ್ಲಿ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಅಮೃತ ಸಂಭ್ರಮದಲ್ಲಿ ಸಾಹಿತಿ ಬೆಂಗಳೂರಿನ ಡಾ.ಗಜಾನನ ಶರ್ಮ ಅವರಿಗೆ ತಾಮ್ರಫಲಕ ರೂ 25 ಸಾವಿರ ನಗದು ಪುರಸ್ಕಾರದೊಂದಿಗೆ 2021ರ ಸಾಲಿನ 42ನೇ ವರ್ಷದ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ಚಿಕ್ಕಮಗಳೂರಿನ ಡಾ.ಎಚ್.ಎಸ್.ಸತ್ಯನಾರಾಯಣ ಅವರಿಗೆ ತಾಮ್ರಫಲಕ ಸಹಿತ ರೂ 15 ಸಾವಿರ ನಗದು ಪುರಸ್ಕಾರದೊಂದಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು .
ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಕಾರಂತರ ಮಲೆನಾಡಿನಲ್ಲಿ ಮದುಮಗಳು ಕೃತಿಯ ಬಳಿಕ ಚೆನ್ನಬೈರಾದೇವಿಯ ಕೃತಿ ಕರಾವಳಿಯಲ್ಲಿ ಜೀವನ ಜಾಗೃತಿ ಮೂಡಿಸಿದೆ.
ಶ್ರೀ ಸಾವಿರ ಕಂಬದ ಬಸದಿಯಲ್ಲಿ ರಾಣಿಯ ಹೆಸರಲ್ಲಿರುವ ಮಂಟಪ ಅನೇಕ ಕಲಾವಿದರು, ವಿದ್ವಾಂಸರು, ಸಾಧಕರಿಗೆ ಸ್ಫೂರ್ತಿ ನೀಡುತ್ತಿದೆ ಎಂದರು.
ಸಭಾ ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷ-ಗಾನ -ನಾಟ್ಯ- ವೈಭವ ಜರಗಿತು.
0 Comments